Beauty Tips: ತ್ವಚೆಯ ಸೌಂದರ್ಯ, ಕೂದಲ ಆರೋಗ್ಯಕ್ಕೆ ಪೈನಾಪಲ್ ಕೊಡುಗೆ ಅಪಾರ
ಪೈನಾಪಲ್ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಇದು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಅನಾನಸ್ ನಿಮ್ಮ ಮುಖದ ಮೇಲಿನ ಕಪ್ಪು ಕಲೆಗಳನ್ನು ಕಡಿಮೆ ಮಾಡುತ್ತದೆ. ಪೈನಾಪಲ್ ಸೂರ್ಯನ ಕಿರಣಗಳಿಂದ ಆದ ಕಲೆಗಳನ್ನು ಕಡಿಮೆ ಮಾಡುತ್ತದೆ. ಮುಖದಲ್ಲಿರುವ ಮೊಡವೆಗಳನ್ನು ಕಡಿಮೆ ಮಾಡುತ್ತದೆ. ಡೆಡ್ ಸ್ಕಿನ್ಗಳನ್ನು ತೆಗೆದುಹಾಕುವಲ್ಲಿ ಇದು ಪರಿಣಾಮಕಾರಿಯಾಗಿದೆ.
1 / 9
ಪೈನಾಪಲ್ ಹಣ್ಣಿನಲ್ಲಿ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಅನೇಕ ಅಂಶಗಳಿವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಚರ್ಮದ ಸೌಂದರ್ಯ ಮತ್ತು ಕೂದಲ ಆರೋಗ್ಯಕ್ಕೂ ಪೈನಾಪಲ್ ಬಹಳ ಉಪಯುಕ್ತವಾಗಿದೆ.
2 / 9
ಪೈನಾಪಲ್ ಹಣ್ಣಿನಲ್ಲಿ ವಿಟಮಿನ್ ಎ, ಸಿ, ಕೆ ಅಧಿಕವಾಗಿದೆ. ಇದರ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಖನಿಜಗಳನ್ನು ಕೂಡ ಹೊಂದಿದೆ. ಇದು ಆರೋಗ್ಯಕರ ಚರ್ಮವನ್ನು ಕಾಪಾಡಿಕೊಳ್ಳಲು ಅವಶ್ಯಕವಾಗಿದೆ .
3 / 9
ಈ ಹಣ್ಣು ನಿಮ್ಮ ಚರ್ಮದ ರಚನೆಯನ್ನು ಸುಧಾರಿಸುತ್ತದೆ. ಸೂರ್ಯನ ಕಿರಣಗಳಿಂದ ಆದ ಕಲೆಗಳನ್ನು ಕಡಿಮೆ ಮಾಡುತ್ತದೆ. ಮುಖದಲ್ಲಿರುವ ಮೊಡವೆಗಳನ್ನು ಕಡಿಮೆ ಮಾಡುತ್ತದೆ. ಡೆಡ್ ಸ್ಕಿನ್ಗಳನ್ನು ತೆಗೆದುಹಾಕುವಲ್ಲಿ ಇದು ಪರಿಣಾಮಕಾರಿಯಾಗಿದೆ.
4 / 9
ಪೈನಾಪಲ್ ಹಣ್ಣನ್ನು ನಿಮ್ಮ ಬೆಳಗಿನ ತಿಂಡಿಯ ಜೊತೆಗೆ ಅಥವಾ ಸಂಜೆಯ ವೇಳೆಗೆ ಸೇವಿಸಿ. ಅಥವಾ ನಿಮ್ಮ ಬೇರೆ ತಿನಿಸಿಗಳ ಜೊತೆ ಪೈನಾಪಲ್ ಪೀಸ್ಗಳನ್ನು ಹಾಕಿಕೊಂಡು ತಿನ್ನಬಹುದು. ಜ್ಯೂಸ್ ಮಾಡಿಕೊಂಡು ಕೂಡ ಕುಡಿಯಬಹುದು.
5 / 9
ಒಂದು ಚಮಚ ಪೈನಾಪಲ್ ರಸಕ್ಕೆ ಒಂದು ಚಮಚ ಹಾಲು ಸೇರಿಸಿ, ಅದನ್ನು ನಿಮ್ಮ ಚರ್ಮಕ್ಕೆ ಹಚ್ಚಿಕೊಳ್ಳಿ. 10 ನಿಮಿಷಗಳ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ಇದು ಮುಖದ ಚರ್ಮ ಸುಕ್ಕುಗಟ್ಟುವಿಕೆಯನ್ನು ತಡೆಯುತ್ತದೆ ಹಾಗೂ ತ್ವಚೆಯನ್ನು ಕಾಂತಿಯುಕ್ತಗೊಳಿಸುತ್ತದೆ.
6 / 9
ಪೈನಾಪಲ್ ಜ್ಯೂಸ್ ಕುಡಿಯುವುದರಿಂದ ಅದು ನಿಮ್ಮ ಚರ್ಮವನ್ನು ಮೃದುಗೊಳಿಸುತ್ತದೆ. ಪೈನಾಪಲ್ ರಸಕ್ಕೆ ಕೆಲವು ಹನಿ ನಿಂಬೆಹಣ್ಣಿನ ರಸ ಕೂಡ ಸೇರಿಸಿಕೊಂಡು ಫೇಸ್ಪ್ಯಾಕ್ ಮಾಡಿಕೊಳ್ಳಬಹುದು.
7 / 9
ಅನಾನಸ್ ನಿಮ್ಮ ಮುಖದ ಮೇಲಿನ ಕಪ್ಪು ಕಲೆಗಳನ್ನು ಕಡಿಮೆ ಮಾಡುತ್ತದೆ. ನಿಮ್ಮ ಕಪ್ಪು ಕಲೆಗಳ ಮೇಲೆ ನೀವು ಪೈನಾಪಲ್ ಹೋಳುಗಳನ್ನು ಉಜ್ಜಬೇಕು. ನಂತರ ಅದನ್ನು ನಿಮ್ಮ ಮುಖದ ಮೇಲೆ 5 ನಿಮಿಷಗಳ ಕಾಲ ಇಡಬೇಕು.
8 / 9
ಅದು ಒಣಗುವವರೆಗೆ ಕಾಯಿರಿ. ನಂತರ ನೀವು ನೀರಿನಿಂದ ಮುಖ ತೊಳೆದುಕೊಳ್ಳಬೇಕು. ಇದು ನಿಮ್ಮ ಚರ್ಮವನ್ನು ಪೋಷಿಸುತ್ತದೆ ಮತ್ತು ಯಂಗ್ ಆಗಿ ಕಾಣುವಂತೆ ಮಾಡುತ್ತದೆ.
9 / 9
ಪೈನಾಪಲ್ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಇದು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ವಿಟಮಿನ್ ಸಿ ನಿಮ್ಮ ಕೂದಲಿಗೆ ಹೊಳಪು ನೀಡಿ, ಅದನ್ನು ದಪ್ಪವಾಗಿ ಕಾಣುವಂತೆ ಮಾಡುತ್ತದೆ.