
ಕಣ್ಣಿನ ಅಂದವನ್ನು ಹೆಚ್ಚಿಸುವಲ್ಲಿ ಕಾಡಿಗೆ ಮುಖ್ಯ ಪಾತ್ರವನ್ನು ವಹಿಸುತ್ತದೆ. ಆದರೆ ಹಚ್ಚಿದ ಕಾಡಿಗೆ ದಿನ ಪೂರ್ತಿ ಉಳಿಯುವುದಿಲ್ಲ ಎಂಬುದೇ ಸಾಕಷ್ಟು ಮಹಿಳೆಯರು ಹೇಳುವ ಸಮಸ್ಯೆಯಾಗಿದೆ.

ಕಾಡಿಗೆ ಮಹಿಳೆಯರ ಅತ್ಯಂತ ಪ್ರೀತಿಯ ಮೇಕಪ್ ಕಿಟ್‌ಗಳಲ್ಲಿ ಒಂದಾಗಿದೆ. ಆದರೆ ಕಣ್ಣಿನಲ್ಲಿ ನೀರು ಬರುವುದು, ಕಣ್ಣನ್ನು ಉಜ್ಜಿಕೊಳ್ಳುವುದರಿಂದ ಹಚ್ಚಿರುವ ಕಾಡಿಗೆ ದೀರ್ಘಕಾಲದ ವರೆಗೆ ಉಳಿದುಕೊಳ್ಳುವುದಿಲ್ಲ.

ಆದ್ದರಿಂದ ನಿಮ್ಮ ಕಣ್ಣಿನ ಅಂದವನ್ನು ಹೆಚ್ಚಿಸುವ ಕಾಡಿಗೆಯನ್ನು ಹಚ್ಚುವ ಸರಿಯಾದ ಕ್ರಮದ ಬಗ್ಗೆ ತಿಳಿದುಕೊಳ್ಳಿ. ಇದು ದಿನ ಪೂರ್ತಿ ಕಾಡಿಗೆ ಉಳಿದುಕೊಳ್ಳಲು ಸಹಾಯ ಮಾಡುತ್ತದೆ.

ಕಾಡಿಗೆ ಹಚ್ಚುವ ಮೊದಲು ನಿಮ್ಮ ಕಣ್ಣಿನ ಪ್ರದೇಶವು ಸ್ವಚ್ಛವಾಗಿ ಎಣ್ಣೆ ಮುಕ್ತವಾಗಿರಬೇಕು. ಮುಖ ತೊಳೆದ ನಂತರ ಎಣ್ಣೆ-ಮುಕ್ತವಾಗಿರುವ ಟೋನರನ್ನು ಬಳಸುವುದು ಸೂಕ್ತ.

ಕಾಡಿಗೆಯನ್ನು ಕಣ್ಣಿನ ಒಳಭಾಗದಲ್ಲಿ ಹಚ್ಚದಿರಿ. ಇದು ಕಣ್ಣು ಉರಿ ಬರಲು ಕಾರಣವಾಗುತ್ತದೆ. ಆದ್ದರಿಂದ ಕಣ್ಣಿನ ರೆಪ್ಪೆಗೂದಲಿನ ಮಧ್ಯೆ ಹಚ್ಚಿ.

ಕಣ್ಣಿಗೆ ಕಾಡಿಗೆ ಹಚ್ಚಿದ ನಂತರ ಐಶ್ಯಾಡೋ ಬ್ರೆಶ್ ಅಥವಾ ಬೆರಳುಗಳಿಂದ ಕಣ್ಣಿನ ಅಂಚಿನಲ್ಲಿ ತೆಳುವಾಗಿ ಪೌಡರ್ ಹಚ್ಚಿ. ಇದು ನಿಮ್ಮ ಕಾಡಿಗೆ ದಿನ ಪೂರ್ತಿ ಉಳಿಯಲು ಸಹಾಯ ಮಾಡುತ್ತದೆ.
Published On - 11:41 am, Thu, 15 June 23