ಉತ್ತಮ ನಿದ್ರೆಗೆ ಒಮ್ಮೆಯಾದರೂ ಈ ಸ್ಪೆಷಲ್ ಮಸಾಜ್ ಟ್ರೈ ಮಾಡಿ
ಹಿಮಾಲಯನ್ ಉಪ್ಪನ್ನು ದೇಹದ ಆರೋಗ್ಯಕ್ಕೆ ದೀರ್ಘಕಾಲದಿಂದ ಬಳಸಲಾಗುತ್ತಿದೆ. ಪಾಕಿಸ್ತಾನದ ಹಿಮಾಲಯ ಪರ್ವತಗಳ ತಪ್ಪಲಿನಿಂದ ಗಣಿಗಾರಿಕೆ ಮೂಲಕ ತೆಗೆಯಲಾದ ಈ ಶಕ್ತಿಶಾಲಿ ಉಪ್ಪನ್ನು ಭೂಮಿಯ ಮೇಲಿನ ಶುದ್ಧ ಉಪ್ಪು ಎಂದು ಹೇಳಲಾಗುತ್ತದೆ. ಹಿಮಾಲಯನ್ ಉಪ್ಪಿನ ಕಲ್ಲುಗಳನ್ನು ಬಿಸಿ ಮಾಡಿ, ಅದರಿಂದ ದೇಹದ ಮೇಲೆ ಮಸಾಜ್ ಮಾಡಲಾಗುತ್ತದೆ.
1 / 9
ಇದೀಗ ಹೆಚ್ಚು ಜನಪ್ರಿಯವಾಗುತ್ತಿರುವ ಮಸಾಜ್ ಸಾಲ್ಟ್ ಸ್ಟೋನ್ ಮಸಾಜ್. ಒತ್ತಡವನ್ನು ನಿವಾರಿಸಲು ಈ ಹಿಮಾಲಯನ್ ಸ್ಟೋನ್ ಮಸಾಜ್ ಮಾಡಲಾಗುತ್ತದೆ.
2 / 9
ಹಿಮಾಲಯನ್ ಉಪ್ಪಿನ ಕಲ್ಲುಗಳನ್ನು ಬಿಸಿ ಮಾಡಿ, ಅದರಿಂದ ದೇಹದ ಮೇಲೆ ಮಸಾಜ್ ಮಾಡಲಾಗುತ್ತದೆ. ಈ ಸಾಲ್ಟ್ ಸ್ಟೋನ್ಸ್ ಕಬ್ಬಿಣ, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ನಂತಹ 84 ನೈಸರ್ಗಿಕ ಖನಿಜಗಳನ್ನು ಹೊಂದಿರುತ್ತದೆ.
3 / 9
ಈ ಖನಿಜಗಳು ದೇಹದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಕಲ್ಲಿನಿಂದ ಉಷ್ಣತೆಯು ದೇಹದ ಪ್ಯಾರಾಸಿಂಪಥೆಟಿಕ್ ನರಮಂಡಲವನ್ನು ಸಕ್ರಿಯಗೊಳಿಸುತ್ತದೆ. ಇದರಿಂದ ದೇಹಕ್ಕೆ ವಿಶ್ರಾಂತಿ ಸಿಗುತ್ತದೆ.
4 / 9
ಹಿಮಾಲಯನ್ ಉಪ್ಪನ್ನು ದೇಹದ ಆರೋಗ್ಯಕ್ಕೆ ದೀರ್ಘಕಾಲದಿಂದ ಬಳಸಲಾಗುತ್ತಿದೆ. ಪಾಕಿಸ್ತಾನದ ಹಿಮಾಲಯ ಪರ್ವತಗಳ ತಪ್ಪಲಿನಿಂದ ಗಣಿಗಾರಿಕೆ ಮೂಲಕ ತೆಗೆಯಲಾದ ಈ ಶಕ್ತಿಶಾಲಿ ಉಪ್ಪನ್ನು ಭೂಮಿಯ ಮೇಲಿನ ಶುದ್ಧ ಉಪ್ಪು ಎಂದು ಹೇಳಲಾಗುತ್ತದೆ.
5 / 9
ಹಿಮಾಲಯನ್ ಉಪ್ಪು ಗುಲಾಬಿ ಬಣ್ಣವನ್ನು ಹೊಂದಿರುತ್ತದೆ. ನೈಸರ್ಗಿಕವಾಗಿ ಕಂಡುಬರುವ 84 ಖನಿಜಗಳು ಮತ್ತು ಅಂಶಗಳಿಂದ ಇದು ತುಂಬಿರುತ್ತದೆ. ಈ ಖನಿಜಗಳಲ್ಲಿ ಹೆಚ್ಚಿನವು ದೇಹಕ್ಕೆ ಆರೋಗ್ಯ ಒದಗಿಸುತ್ತವೆ.
6 / 9
ಉಪ್ಪು ಮಸಾಜ್ ನಿದ್ರೆಯನ್ನು ಉತ್ತೇಜಿಸುತ್ತದೆ, ನಿದ್ರಾಹೀನತೆಯನ್ನು ಕಡಿಮೆ ಮಾಡುತ್ತದೆ. ಈ ವಿಶೇಷ ಮಸಾಜ್ ಕೇಂದ್ರ ನರಮಂಡಲವನ್ನು ಸಮತೋಲನಗೊಳಿಸುತ್ತದೆ.
7 / 9
ಹಿಮಾಲಯನ್ ಉಪ್ಪು ಉತ್ತಮವಾದ ಎಕ್ಸ್‌ಫೋಲಿಯೇಟರ್ ಮತ್ತು ಮಾಯಿಶ್ಚರೈಸರ್ ಆಗಿದ್ದು ಅದು ಚರ್ಮವನ್ನು ಕಾಂತಿಯುಕ್ತಗೊಳಿಸುತ್ತದೆ.
8 / 9
ಹಿಮಾಲಯನ್ ಉಪ್ಪು ಕಲ್ಲಿನ ಮಸಾಜ್ ಆರೋಗ್ಯಕರ ಉಸಿರಾಟ ಮತ್ತು ಮೂಳೆಯ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ಹಿಮಾಲಯನ್ ಉಪ್ಪು ಕಲ್ಲುಗಳು ರಕ್ತದೊತ್ತಡವನ್ನು ಸುಧಾರಿಸಲು, ಸರಿಯಾದ ಚಯಾಪಚಯ ಕ್ರಿಯೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
9 / 9
ಹಿಮಾಲಯನ್ ಉಪ್ಪು ಚರ್ಮವನ್ನು ಮೃದುವಾಗಿಸುತ್ತದೆ. ದೇಹದ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಸ್ನಾಯು ದೌರ್ಬಲ್ಯ, ತಲೆನೋವು, ಕೀಲು ನೋವು, ಆಯಾಸದಂತಹ ನೋವನ್ನು ನಿವಾರಿಸುತ್ತದೆ.