Kannada News Photo gallery Jaishankar couple visit Britain: Prime Minister Rishi Sunak gave special gift to Kyoko Jaishankar on the occasion of Diwali
ಜೈಶಂಕರ್ ದಂಪತಿ ಬ್ರಿಟನ್ಗೆ ಭೇಟಿ: ದೀಪಾವಳಿ ಪ್ರಯುಕ್ತ ಪ್ರಧಾನಿ ರಿಷಿ ಸುನಕ್ಗೆ ಸ್ಪೆಷಲ್ ಗಿಫ್ಟ್ ನೀಡಿದ ಕ್ಯೋಕೊ ಜೈಶಂಕರ್
ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ತಮ್ಮ ಪತ್ನಿ ಕ್ಯೋಕೊ ಜೈಶಂಕರ್ ಜತೆಗೆ ಬ್ರಿಟನ್ಗೆ ಭೇಟಿ ನೀಡಿದ್ದಾರೆ. ಅಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ಅವರು ಪತ್ನಿ ಅಕ್ಷತಾ ಮೂರ್ತಿ ಅವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಕ್ಯೋಕೊ ಜೈಶಂಕರ್ ಅವರು ರಿಷಿ ಸುನಕ್ ಅವರಿಗೆ ಸ್ಪೆಷಲ್ ಗಿಫ್ಟ್ ನೀಡಿದ್ದಾರೆ.
ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ತಮ್ಮ ಪತ್ನಿ ಕ್ಯೋಕೊ ಜೈಶಂಕರ್ ಜತೆಗೆ ಬ್ರಿಟನ್ಗೆ ಭೇಟಿ ನೀಡಿದ್ದಾರೆ. ಅಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ಅವರು ಪತ್ನಿ ಅಕ್ಷತಾ ಮೂರ್ತಿ ಅವರನ್ನು ಭೇಟಿಯಾದರು.
1 / 8
ಈ ಸಂದರ್ಭದಲ್ಲಿ ದೀಪಾವಳಿ ಹಬ್ಬದ ಶುಭಾಶಯಗಳನ್ನು ಇಬ್ಬರು ಕೋರಿಕೊಂಡಿದ್ದಾರೆ. ಜತೆಗೆ ಎಸ್ ಜೈಶಂಕರ್ ಪ್ರಧಾನಿ ಮೋದಿ ಮತ್ತು ಭಾರತದ ಪರವಾಗಿ ಬ್ರಿಟನ್ ಪ್ರಧಾನಿಗೆ ಶುಭಾಶಯಗಳನ್ನು ತಿಳಿಸಿದರು.
2 / 8
ಈ ಬಾರಿ ಎಸ್ ಜೈಶಂಕರ್ ಜತೆಗೆ ಅವರ ಪತ್ನಿ ಕ್ಯೋಕೊ ಜೈಶಂಕರ್ ಕೂಡ ಕಾಣಿಸಿಕೊಂಡಿದ್ದಾರೆ. ಭಾನುವಾರದಂದು (ನ.12) ಟೇನ್ ಡೌನಿಂಗ್ ಸ್ಟ್ರೀಟ್‌ನಲ್ಲಿ ಇಬ್ಬರು ನಾಯಕರು ಭೇಟಿಯಾಗಿದ್ದಾರೆ.
3 / 8
ದೀಪಾವಳಿ ದಿನದಂದು ಬ್ರಿಟನ್ ಪ್ರಧಾನ ಮಂತ್ರಿ ರಿಷಿ ಸುನಕ್ ಅವರನ್ನು ಭೇಟಿ ಮಾಡಿರುವುದು ತುಂಬಾ ಸಂತೋಷವಾಗಿದೆ. ಇದರ ಜತೆಗೆ ಪ್ರಧಾನಿ ನರೇಂದ್ರ ಮೋದಿಯವರ ಕೂಡ ಶುಭಾಶಯಗಳನ್ನು ತಿಳಿಸಿದರು. ಭಾರತ ಮತ್ತು ಯುಕೆ ಸಮಕಾಲೀನ ಕಾಲಕ್ಕೆ ಸಂಬಂಧವನ್ನು ಮರುರೂಪಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ. ಅವರ ಆತ್ಮೀಯ ಸ್ವಾಗತ ಮತ್ತು ಆತಿಥ್ಯ ನೀಡಿದಕ್ಕೆ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಅವರಿಗೆ ಧನ್ಯವಾದಗಳು ಎಂದು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
4 / 8
ಜೈಶಂಕರ್ ಅವರ ಪತ್ನಿ ಕ್ಯೋಕೊ ಜೈಶಂಕರ್ ಸುನಕ್ ಅವರಿಗೆ ಗಣೇಶನ ಪ್ರತಿಮೆ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಹಸ್ತಾಕ್ಷರವಿರುವ ಕ್ರಿಕೆಟ್ ಬ್ಯಾಟ್ನ್ನು ನೀಡಿದ್ದಾರೆ. ಈ ಬಗ್ಗೆ ಜೈಶಂಕರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
5 / 8
ಭಾನುವಾರದಂದು ಬ್ರಿಟನ್ ಯುಕೆ ಕೌಂಟರ್ಪಾರ್ಟ್ ಜೇಮ್ಸ್ ಕ್ಲೆವರ್ಲಿಗೆ ಜೈಶಂಕರ್ ಭೇಟಿ ನೀಡಿದರು. ಶನಿವಾರದಂದು ಬ್ರಿಟನ್ಗೆ ಪ್ರಯಾಣ ಬೆಳೆಸಿದರು. ನವೆಂಬರ್ 15 ವರೆಗೆ ಬ್ರಿಟನ್ ಪ್ರವಾಸದಲ್ಲಿ ತೋಡಗಿಕೊಳ್ಳಲಿದ್ದಾರೆ.
6 / 8
ಇದರ ಜತೆಗೆ ಇಸ್ರೇಲ್ ಹಮಾಸ್ ನಡುವಿನ ಬಿಕ್ಕಟ್ಟಿನ ಬಗ್ಗೆಯು ಉಭಯ ನಾಯಕರು ಮಾತುಕತೆ ನಡೆಸಿದ್ದಾರೆ. ಇನ್ನು ಉಗ್ರ ಸಂಘಟನೆಗಳ ಕೃತ್ಯಕ್ಕೆ ಹಾಗೂ ಉಗ್ರವಾದವನ್ನು ಇಬ್ಬರು ನಾಯಕರು ಖಂಡಿಸಿದ್ದಾರೆ.
7 / 8
ಭಾರತ ಮತ್ತು ಯುಕೆ ಅನೇಕ ವಿಚಾರಗಳಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿದೆ. ಅನೇಕ ಒಪ್ಪಂದಗಳನ್ನು ಕೂಡ ಮಾಡಿದೆ. ಆರ್ಥಿಕ ಸಹಕಾರಗಳನ್ನು ಕೂಡ ನೀಡಿದೆ. ಇನ್ನು ಮುಕ್ತ ವ್ಯಾಪರದ ಬಗ್ಗೆಯು ಒಪ್ಪಂದವನ್ನು ಮಾಡಿಕೊಂಡಿದೆ.