Rosemary Oil: ರೋಸ್ಮರಿ ಎಣ್ಣೆ ಬಳಸಿ, ಕೂದಲ ಸಮಸ್ಯೆಗಳಿಗೆ ಗುಡ್ಬೈ ಹೇಳಿ
Rosemary Oil For Hair Growth: ರೋಸ್ಮರಿ ಆಯಿಲ್ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಈ ಎಣ್ಣೆಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್ ಗುಣಲಕ್ಷಣಗಳು ನೆತ್ತಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
1 / 20
ಕೂದಲು ಉದುರುವಿಕೆ ಹೆಚ್ಚಾಗಿದೆಯಾ? ನಿಮ್ಮ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ನೋಡುತ್ತಿದ್ದೀರಾ? ಚಿಂತಿಸಬೇಡಿ. ರೋಸ್ಮರಿ ಎಣ್ಣೆಯಂತಹ ಪ್ರಾಕೃತಿಕ ಉತ್ಪನ್ನಗಳನ್ನು ಬಳಸಿ ನೋಡಿ.
2 / 20
ರೋಸ್ಮರಿ ಸಸ್ಯಗಳು ಅನೇಕ ಅಡಿಗೆಮನೆಗಳಲ್ಲಿ ಸಾಮಾನ್ಯವಾಗಿ ಇರುವಂಥದ್ದು. ಅವು ಅಡುಗೆ ಮತ್ತು ಔಷಧ ಎರಡಕ್ಕೂ ಒಳ್ಳೆಯದು.
3 / 20
ರೋಸ್ಮರಿ ಎಣ್ಣೆಯು ಸುದೀರ್ಘ ಇತಿಹಾಸವನ್ನು ಹೊಂದಿದೆ.
4 / 20
ಗ್ರೀಕರು, ರೋಮನ್ನರು, ಈಜಿಪ್ಟಿನವರು ಮತ್ತು ಹೀಬ್ರೂಗಳು ರೋಸ್ಮರಿಯನ್ನು ಬಳಸುತ್ತಿದ್ದರು.
5 / 20
ಜ್ಞಾಪಕಶಕ್ತಿಯನ್ನು ಸುಧಾರಿಸಲು ಮತ್ತು ಸ್ನೇಹದ ಸಂಕೇತವಾಗಿ ರೋಸ್ಮರಿಯನ್ನು ಬಳಸುತ್ತಿದ್ದರು.
6 / 20
ಇದು ನಮ್ಮ ಕಾಲದಲ್ಲಿ ಆರೋಗ್ಯಯುತ ಗಿಡಮೂಲಿಕೆಯಾಗಿ ಬಳಕೆಯಾಗುತ್ತಿದೆ.
7 / 20
ರೋಸ್ಮರಿ ಎಣ್ಣೆಯು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ನೆತ್ತಿಯನ್ನು ಪೋಷಿಸುತ್ತದೆ ಮತ್ತು ಕೂದಲು ಉದುರುವಿಕೆಯನ್ನು ತಡೆಯುತ್ತದೆ.
8 / 20
ರೋಸ್ಮರಿ ಎಣ್ಣೆಯನ್ನು ನೆತ್ತಿಗೆ ಮಸಾಜ್ ಮಾಡುವುದು, ಶಾಂಪೂಗೆ ಮಿಶ್ರಣ ಮಾಡುವ ಮೂಲಕ ಬಳಸಬಹುದಾಗಿದೆ.
9 / 20
ರೋಸ್ಮರಿ ಎಣ್ಣೆಯನ್ನು ಸುರಕ್ಷಿತವೆಂದು ಪರಿಗಣಿಸಲಾಗಿದ್ದರೂ ಅದರ ಅಡ್ಡ ಪರಿಣಾಮಗಳ ಬಗ್ಗೆಯೂ ನಾವು ತಿಳಿದುಕೊಂಡಿರಬೇಕು.
10 / 20
ರೋಸ್ಮರಿ ಎಣ್ಣೆಯನ್ನು ಒಳಗೊಂಡಿರುವ ಕೂದಲಿನ ಉತ್ಪನ್ನಗಳು ಕೂದಲಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
11 / 20
ರೋಸ್ಮರಿ ಎಣ್ಣೆಯು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ.
12 / 20
ಆರೋಗ್ಯಕರ ಕೂದಲ ಬೆಳವಣಿಗೆಗೆ ಪೋಷಕಾಂಶಗಳನ್ನು ಒದಗಿಸಲು ಸಹಾಯ ಮಾಡುತ್ತದೆ.
13 / 20
ಈ ಎಣ್ಣೆಯನ್ನು ಕನಿಷ್ಠ 4ರಿಂದ 6 ತಿಂಗಳು ನಿರಂತರವಾಗಿ ಬಳಸಿದರೆ ಕೂದಲು ಸದೃಢವಾಗುತ್ತದೆ.
14 / 20
ಇದು ತಲೆಹೊಟ್ಟು ಕಡಿಮೆ ಮಾಡುತ್ತದೆ ಮತ್ತು ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ.
15 / 20
ಆರೋಗ್ಯಕರ ನೆತ್ತಿ ಎಂದರೆ ಆರೋಗ್ಯಕರ ಕೂದಲು. ರೋಸ್ಮರಿ ಎಣ್ಣೆಯು ಪ್ರಬಲವಾದ ರೋಗನಿರೋಧಕ ಗುಣಗಳನ್ನು ಹೊಂದಿದೆ. ಇದು ನಿಮ್ಮ ತಲೆಹೊಟ್ಟು, ಅತಿಯಾದ ಎಣ್ಣೆ ಮತ್ತು ಕೂದಲು ಉದುರಲು ಅಥವಾ ಆರೋಗ್ಯಕರ ಕೂದಲಿನ ಬೆಳವಣಿಗೆಯನ್ನು ತಡೆಯುವ ಇತರ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.
16 / 20
ರೋಸ್ಮರಿ ಎಣ್ಣೆಯಲ್ಲಿರುವ ಅಂಶಗಳು ಕೂದಲಿನ ಬೇರುಗಳನ್ನು ಆ್ಯಕ್ಟಿವ್ ಮಾಡುತ್ತದೆ ಮತ್ತು ಕೂದಲು ಬೆಳೆಯಲು ಸಹಾಯ ಮಾಡುತ್ತದೆ.
17 / 20
ರೋಸ್ಮರಿ ಆಯಿಲ್ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ರಕ್ತದ ಹರಿವನ್ನು ಹೆಚ್ಚಿಸುತ್ತದೆ.
18 / 20
ಈ ಎಣ್ಣೆಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್ ಗುಣಲಕ್ಷಣಗಳು ನೆತ್ತಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
19 / 20
ನಿಮ್ಮ ನೆತ್ತಿಯ ಮೇಲೆ ನೇರವಾಗಿ ರೋಸ್ಮರಿ ಎಣ್ಣೆಯನ್ನು ಹಚ್ಚಿಕೊಳ್ಳಬಹುದು. ಲಘುವಾಗಿ ಮಸಾಜ್ ಮಾಡಿಕೊಳ್ಳುವುದರಿಂದ ಈ ಎಣ್ಣೆ ಕೂದಲಿಗೆ ಚೆನ್ನಾಗಿ ಹರಡುತ್ತದೆ. ಇದು ರಕ್ತದ ಹರಿವನ್ನು ಹೆಚ್ಚಿಸುತ್ತದೆ.
20 / 20
ತೆಂಗಿನ ಎಣ್ಣೆಯೊಂದಿಗೆ ಕೆಲವು ಹನಿ ರೋಸ್ಮರಿ ಎಣ್ಣೆಯನ್ನು ಮಿಶ್ರಣ ಮಾಡಿ. ನಂತರ ಅದನ್ನು ನಿಮ್ಮ ನೆತ್ತಿಯ ಮೇಲೆ ನಿಧಾನವಾಗಿ ಮಸಾಜ್ ಮಾಡಿ. ಕನಿಷ್ಠ 5 ರಿಂದ 10 ನಿಮಿಷಗಳ ನಂತರ ತಲೆಯನ್ನು ತೊಳೆಯಿರಿ.