High Blood Pressure Control: ಒತ್ತಡದ ಜೀವನದ ಮಧ್ಯೆ, ಯೋಗಾಭ್ಯಾಸಕ್ಕೆ ಒಂದಿಷ್ಟು ಹೊತ್ತು ಸಮಯ ಮೀಸಲಿಡಿ

|

Updated on: Jan 31, 2023 | 12:10 PM

ಅಧಿಕ ರಕ್ತದೊತ್ತಡವು ಹೃದಯಾಘಾತಗಳು ಅಥವಾ ಪಾರ್ಶ್ವವಾಯುಗಳಂತಹ ಗಂಭೀರ ಆರೋಗ್ಯ ಪರಿಸ್ಥಿತಿಗಳಿಗೆ ಅಪಾಯವನ್ನುಂಟುಮಾಡುತ್ತದೆ. ಅಧಿಕ ರಕ್ತದೊತ್ತಡವನ್ನು ಸುಧಾರಿಸಲು ಅಥವಾ ತಡೆಗಟ್ಟಲು ನೀವು ಕೆಲವೊಂದು ಯೋಗಾಸನಗಳನ್ನು ನಿಮ್ಮ ಪ್ರತಿ ದಿನದ ಜೀವನಶೈಲಿಯಲ್ಲಿ ರೂಡಿಸಿಕೊಳ್ಳಿ.

1 / 7

2 / 7
ಬಾಲಾಸನ: ಈ ಆಸನವು ನಿಮ್ಮನ್ನು ಮಾನಸಿಕವಾಗಿ ಶಾಂತಿಗೊಳಿಸುತ್ತದೆ. ಇದು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಿ, ನಿಮ್ಮನ್ನು ಹೃದಯಾಘಾತದಂತಹ ಸಮಸ್ಯೆಯಿಂದ ದೂರವಿಡುತ್ತದೆ. ಚಿತ್ರದಲ್ಲಿ ತೋರಿಸಿರುವಂತೆ ಭಂಗಿಯನ್ನು ಪ್ರಯತ್ನಿಸಿ.

3 / 7
ಪಶ್ಚಿಮೋತ್ತನಾಸನ: ಈ ಆಸನವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯಕವಾಗಿದೆ. ಇದು ನಿಮಗೆ ಮಾನಸಿಕವಾಗಿ ಆರಾಮವನ್ನು ನೀಡಿ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

4 / 7
ಬದ್ಧ ಕೋನಾಸನ: ಈ ಆಸನದಲ್ಲಿ ಕಾಲುಗಳನ್ನು ಮಡಚಿ ಕೋನಾಕೃತಿಯ ಭಂಗಿಯಲ್ಲಿ ಇಡುವುದರಿಂದ ಬದ್ಧ ಕೋನಾಸನ ಎಂದು ಕರೆಯಲಾಗುತ್ತದೆ. ಇದು ನಿಮ್ಮ ದೇಹದ ರಕ್ತ ಪರಿಚಲನೆಯನ್ನು ಸರಾಗಗೊಳಿಸಿ, ರಕ್ತದೊತ್ತಡದಂತಹ ಸಮಸ್ಯೆಯಿಂದ ನಿಮ್ಮನ್ನು ದೂರವಿರಿಸುತ್ತದೆ.

5 / 7
ಜಾನು ಶೀರ್ಸಾಸನ: ನಿಮ್ಮ ಒತ್ತಡದಿಂದ ಜೀವನಶೈಲಿಯಿಂದಾಗಿ ಮಾನಸಿಕ ಆತಂಕ, ಉದ್ವೇಗದಂತಹ ಅನೇಕ ಮಾನಸಿಕ ಸಮಸ್ಯೆಗಳಿಗೆ ಒಳಗಾಗುತ್ತೀರಿ. ಆದ್ದರಿಂದ ಜಾನು ಶೀರ್ಸಾಸನ ನಿಮ್ಮನ್ನು ಮಾನಸಿಕವಾಗಿ ಆರೋಗ್ಯವಾಗಿರಿಸುವುದರ ಜೊತೆಗೆ  ಅಧಿಕ ರಕ್ತದೊತ್ತಡವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

6 / 7
ವೀರಾಸನ: ನೀವು ಪ್ರತಿದಿನ ವೀರಾಸನ ಮಾಡುವುದರಿಂದ ಇದು ನಿಮಗೆ ಮಾನಸಿಕವಾಗಿ ಒತ್ತಡದಿಂದ ಮುಕ್ತಿ ನೀಡಿ ಅಧಿಕ ರಕ್ತದೊತ್ತಡವನ್ನು ಸುಧಾರಿಸಲು ಅಥವಾ ತಡೆಗಟ್ಟಲು ಸಹಾಯ ಮಾಡುತ್ತದೆ. ಜೊತೆಗೆ ಅಜೀರ್ಣದ ಸಮಸ್ಯೆಯಿಂದ ಹೊರಬರಲು ವೀರಾಸನದ ಅಭ್ಯಾಸವು ಬಹಳ ಸಹಾಯಕಾರಿಯಾಗಿದೆ.

7 / 7
ಶವಾಸನ: ಅಧಿಕ ರಕ್ತದೊತ್ತಡಕ್ಕೆ ಪ್ರಮುಖ ಕಾರಣ ಅಧಿಕ ಒತ್ತಡದ ಜೀವನ ಶೈಲಿ. ಶವಾಸನ ಸುಮ್ಮನೆ ಮಲಗುವುದು, ಅದರಲ್ಲೇನಿದೆ? ಎಂದು ನಿರ್ಲಕ್ಷ್ಯಿಸಬೇಡಿ. ಶವಾಸನದಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ. ಇದು ನಿಮಗೆ ಒತ್ತಡದ ಜೀವನದಿಂದ ಸಾಕಷ್ಟು ವಿಶ್ರಾಂತಿಯನ್ನು ನೀಡಿ, ನಿಮ್ಮನ್ನು ಮಾನಸಿಕವಾಗಿ ಆರೋಗ್ಯಗೊಳಿಸುತ್ತದೆ ಹಾಗೂ ಅಧಿಕ ರಕ್ತದೊತ್ತಡವನ್ನು ಸುಧಾರಿಸುತ್ತದೆ.

Published On - 12:04 pm, Tue, 31 January 23