ಬಸವನಗುಡಿ ಕಡಲೆಕಾಯಿ ಪರಿಷೆಯಲ್ಲಿ ಜನವೋ ಜನ, ಬಿಸಿ ಬಿಸಿ ಕಡಲೆಕಾಯಿ ಸವಿದು ಜನ ಫುಲ್ ಖುಷ್

Edited By:

Updated on: Dec 11, 2023 | 2:07 PM

Basavanagudi Kadalekai parishe: ಬೆಂಗಳೂರಿನ ಬಸವನಗುಡಿ ಕಡಲೆಕಾಯಿ ಪರಿಷೆಗೆ ಅಧಿಕೃತ ಚಾಲನೆ ಸಿಕ್ಕಿದೆ. ಇಂದಿನಿಂದ ಡಿ.13ರ ವರೆಗೆ ಅಂದ್ರೆ ಮೂರು ದಿನಗಳ ಕಾಲ ಪರಿಷೆ ನಡೆಯಲಿದೆ. ದೊಡ್ಡ ಬಸವಣ್ಣನಿಗೆ ಕಡಲೆಕಾಯಿ ತುಲಾಭಾರ ಮೂಲಕ ಪರಿಷೆಗೆ ಚಾಲನೆ ನೀಡಲಾಯಿತು.

1 / 8
ಬೆಂಗಳೂರಿನ ಬಸವನಗುಡಿ ಕಡಲೆಕಾಯಿ ಪರಿಷೆಗೆ ಅಧಿಕೃತ ಚಾಲನೆ ಸಿಕ್ಕಿದೆ. ದೊಡ್ಡ ಬಸವಣ್ಣನಿಗೆ ಕಡಲೆಕಾಯಿ ತುಲಾಭಾರ ಮೂಲಕ ಬಡವನಗುಡಿ ಕಡಲೆಕಾಯಿ ಪರಿಷೆಗೆ ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ರವಿಸುಬ್ರಹ್ಮಣ್ಯ, ಉದಯ್ ಗರುಡಾಚಾರ್ ಚಾಲನೆ ನೀಡಿದ್ದಾರೆ. ವಿಧಾನ ಪರಿಷತ್ ಜೆಡಿಎಸ್​​ ಸದಸ್ಯ ಟಿ.ಎ.ಶರವಣ ಉಪಸ್ಥಿತರಿದ್ದರು.

2 / 8
 ದೊಡ್ಡಗಣಪನಿಗೆ ವಿಶೇಷ ಬೆಣ್ಣೆ ಅಲಂಕಾರ ಮಾಡಲಾಗಿದೆ. 75 ಕೆಜಿ ಬೆಣ್ಣೆಯಿಂದ ಅಲಂಕಾರ ಮಾಡಲಾಗಿದೆ. ನಿನ್ನೆ ಗಣಪನಿಗೆ ಸಾವಿರ ಕೆಜಿ ಕಡಲೆಕಾಯಿಯಿಂದ  ಅಭಿಷೇಕ ಮಾಡಲಾಗಿತ್ತು. ಇಂದು ದೊಡ್ಡಬಸವನಿಗೆ  100 ಸೇರು ಕಡಲೆಕಾಯಿ ಅಭಿಷೇಕ ಮಾಡಲಾಗಿದೆ.

3 / 8
ಇಂದಿನಿಂದ 3 ದಿನಗಳ ಕಾಲ ಪರಿಷೆ ನಡೆಯಲಿದೆ. ಪರಿಷೆಗೆ ಬನ್ನಿ-ಕೈಚೀಲ ತನ್ನಿ’ ಎಂಬ ಆಹ್ವಾನದೊಂದಿಗೆ ಈ ಬಾರಿ ಪರಿಸರ ಸ್ನೇಹಿ ಪರಿಷೆ ನಡೆಸಲಾಗುತ್ತಿದೆ. 65 ವರ್ಷ ಮೇಲ್ಪಟ್ಟವರಿಗೆ ದೇವಸ್ಥಾನದಲ್ಲಿ ವಿಶೇಷ ದರ್ಶನಕ್ಕೆ ಅವಕಾಶ ನೀಡಲಾಗಿದೆ.

4 / 8
ಕಾರ್ತಿಕ ಕಡೆ ಸೋಮವಾದಂದೇ ಕಡಲೆಕಾಯಿ ಪರಿಷೆಗೆ ಚಾಲನೆ ಇದ್ರೂ, ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ನಿನ್ನೆ ದೊಡ್ಡ ಗಣಪತಿಗೆ ವಿಶೇಷ ಪೂಜೆ ಮಾಡಿಸಿದರು.‌ ಚಳಿಗಾಲ ಅಧಿವೇಶನಕ್ಕೆ ಹೋಗುವ ಕಾರಣ ನಿನ್ನೆಯೇ ಪರಿಷೆ ನಡೆಯುವ ಕೆಲವೆಡೆ ಪರಿಶೀಲನೆ ನಡೆಸಿದರು.

5 / 8
 ಈ ಬಾರಿಯ ಕಡಲೆಕಾಯಿ ಪರಿಷೆಯನ್ನು ಪ್ಲಾಸ್ಟಿಕ್ ಮುಕ್ತವಾಗಿ ಮಾಡಲು ಕರೆ ಕೊಡಲಾಗಿದ್ದು ಪರಿಷೆಗೆ ಬನ್ನಿ , ಬಟ್ಟೆ ಬ್ಯಾಗ್ ತನ್ನಿ ಎಂದು ಕರೆ ಕೊಟ್ಟಿದ್ದಾರೆ. ಇಂದು ಸಂಜೆ 6ಕ್ಕೆ ಕೆಂಪಾಬುಧಿ ಕೆರೆಯಲ್ಲಿ ತೆಪ್ಪೋತ್ಸವ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

6 / 8
ಕನಕಪುರ, ದೊಡ್ಡಬಳ್ಳಾಪುರ, ರಾಮನಗರ, ಮಾಗಡಿ, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಮೈಸೂರು, ಭಾಗಗಳಿಂದ ವ್ಯಾಪಾರಸ್ಥರು ಬಂದಿದ್ದಾರೆ. ಎಪಿಎಸ್ ಕಾಲೇಜು ಆಟದ ಮೈದಾನ, ಎನ್ಆರ್ ಕಾಲೋನಿ, ಹಯವಧನರಾವ್ ರಸ್ತೆಯಲ್ಲಿರುವ ಕೊಹಿನೂರು ಆಟದ ಮೈದಾನದಲ್ಲಿ ಪಾರ್ಕಿಂಗ್​ ವ್ಯವಸ್ಥೆ ಮಾಡಲಾಗಿದೆ.

7 / 8
ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಜನ ಬರುವ ಹಿನ್ನೆಲೆ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಬಸವನಗುಡಿ ವ್ಯಾಪ್ತಿಯಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಮತ್ತು ಪಾರ್ಕಿಂಗ್​ಗೆ ವ್ಯವಸ್ಥೆ ಮಾಡಲಾಗಿದೆ.

8 / 8
ಈ ಬಾರಿ ಒಟ್ಟು ನಾಲ್ಕೈ ದು ಕಡಲೆಕಾಯಿ ತಳಿಗಳು ಪರಿಷೆಯಲ್ಲಿ ವ್ಯಾಪಾರವಾಗ್ತಿದೆ. ನಾಟಿ, ಫಾರಂ, ಬೋಂಡಾ ಹಾಗೂ ಬಾದಾಮಿ ಎಂಬಿತ್ಯಾದಿ ಕಡಲೆಕಾಯಿಗಳು ಪರಿಷೆಯಲ್ಲಿ ಮಾರಾಟ ಆಗ್ತಿದೆ. ಕುಟುಂಬ ಸಮೇತ ದೊಡ್ಡಗಣಪನ ದರ್ಶನ ಪಡೆದು ಕಡಲೆಕಾಯಿ ಸವಿಯುವ ದೃಶ್ಯಗಳು ಬೀದಿ ತುಂಬಾ ಕಾಣಸಿಗುತ್ತಿತ್ತು.