
ಸಾಮಾನ್ಯವಾಗಿ ಕೇಕ್ ಶೋ ಎಂದಕೂಡಲೆ ಕ್ರಿಸ್ಮಸ್ ನೆನಪಾಗುತ್ತೆ. ಆದರೆ ಕ್ರಿಸ್ಮಸ್ಗೂ ಮುಂಚೆಯೇ ಅರಮನೆ ಮೈದಾನದಲ್ಲಿ 51ನೇ ವಾರ್ಷಿಕ ಕೇಕ್ ಶೋ ಆಯೋಜಿಸಲಾಗಿದೆ. ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 9ಗಂಟೆಯವರೆಗೆ ಉಚಿತ ಪ್ರದರ್ಶನವಿರಲಿದೆ. ಶೆಫ್ ಗಳ ಕೈಚಳಕದಲ್ಲಿ ತರಹೇವಾರಿ ಕೇಕ್ ಗಳು ಮೂಡಿ ಬಂದಿದ್ದು, 25 ಕ್ಕೂ ಹೆಚ್ಚಿನ ಕೇಕ್ಗಳು ಜನರ ಕಣ್ಮನ ಸೆಳೆದವು.

ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಆಯೋಜನೆ ಮಾಡಿರುವ ಕೇಕ ಶೋ ಜ.4 ರವರೆಗೆ ನಡೆಯಲಿದ್ದು, ಕೇಕ್ನಲ್ಲಿ ಮಾಡಿರುವ ಕಲಾಕೃತಿಗಳು ಜನರ ಗಮನ ಸೆಳೆಯುವುದಕ್ಕೆ ಸಿದ್ಧವಾಗಿವೆ. ಹಿಂದೂ , ಕ್ರಿಶ್ಚಿಯನ್, ಮುಸ್ಲಿಂ ಧರ್ಮಕ್ಕೆ ಸಂಬಂಧಿಸಿದ ದೇವರನ್ನು ಮತ್ತು ದೇವಲಾಯಗಳನ್ನು ಕೇಕ್ ಮೂಲಕ ತಯಾರಿಸಲಾಗಿದೆ. ಕೇವಲ ಕೈಗಳಿಂದ ಮಾತ್ರವಲ್ಲದೇ ಆಧುನಿಕ ತಂತ್ರಜ್ಞಾನವಾದ ಲೇಸರ್ ಲೈಟ್ ಬಳಸಿಕೊಂಡು ಕೇಕ್‌ಗಳನ್ನು ತಯಾರಿಸಲಾಗಿದೆ.

ಡಿಸ್ನಿ ಕ್ಯಾಸ್ಟಲ್, ತಮಿಳುನಾಡಿನ ವೆಲಂಕಿ ಚರ್ಚ್ ಕೇಕ್, ಒಡಿಶಾದ ಜಗನಾಥ ಪುರಿ, ಕಾಂತರ ಸಿನಿಮಾದ ಯಕ್ಷಗಾನ ಕಲೆ, ಮಕ್ಕಳನ್ನು ಆರ್ಕಷಿಸುವ ಪಾಂಡ, ಮಾಸ್ಟರ್ ಶೆಫ್, ವೆಡಿಂಗ್ ಕೇಕ್, ವಿಕ್ಟೋರಿಯಾ ಮಾದರಿಯ ಕೇಕ್, ರ್ಯಾಗ್ ಟು ರಿಚಸ್, ಮೋವಾನಾ ಸಿನಿಮಾದ ಹಡಗು, ಜಿಆರ್ ಬಿ ಬಾಟಲ್, ಕ್ರಿಸ್ ಮಸ್ ಟ್ರೀ, ಹೀಗೆ ವಿವಿಧ ರೀತಿಯ ಸಮಾರು 25ಕ್ಕೂ ಅಧಿಕ ಕೇಕ್ ಕಲಾಕೃತಿಗಳನ್ನು ತಯಾರಿಸಲಾಗಿದೆ

ಕ್ರಿಸ್ ಮಸ್ ಹಾಗೂ ಹೊಸ ವರ್ಷ ಹಿನ್ನಲೆ ರಾಜಧಾನಿಯಲ್ಲಿ ಕೇಕ್ ಉತ್ಸವ ನಡೆಯುತ್ತಿದ್ದು, ಕೇಕ್ ನಲ್ಲಿ ಅರಳಿದ 18 ಅಡಿ ಎತ್ತರದ ರಾಯಲ್ ಡ್ರೀಮ್ ಕ್ಯಾಸಲ್, ಸೇಕ್ರೆಡ್ ಸೀ ಬಾಸಿಲಿಕಾ ವೇಳಾಂಕಣ ಚರ್ಚ್ ಹಾಗೂ ಬಗೆ ಬಗೆಯ ಕೇಕ್ ಪ್ರದರ್ಶನ ಮಾಡಲಾಗಿದೆ. ಅರಮನೆ ಮೈದಾನ ತ್ರಿಪುರ ವಾಸಿನಿಯಲ್ಲಿ ಇಂದಿನಿಂದ ಎರಡು ದಿನಗಳ ಕೇಕ್ ಶೋ ಆಯೋಜಿಸಲಾಗಿದೆ.

51 ನೇ ವರ್ಷದ ಸಂಭ್ರಮದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದೊಂದಿಗೆ ಕಲೆಯ ಸಮ್ಮಿಲನದೊಂದಿಗೆ ನಡೆಯುತ್ತಿರುವ ಕೇಕ್ ಉತ್ಸವ ಈಗ ಮತ್ತೆ ಕೇಕ್ ಪ್ರಿಯರನ್ನು ಕೈ ಬೀಸಿ ಕರೆಯುತ್ತಿದೆ. 25 ಕ್ಕೂ ಹೆಚ್ಚು ಕೇಕ್ ನ ಕಲಾಕೃತಿಗಳಿರುವ ಈ ವರ್ಷದಲ್ಲಿ , ವೈವಿಧ್ಯಮಯ ವಿನ್ಯಾಸಗಳು ಮತ್ತು ಸಂಸ್ಕೃತಿಗಳ ಥೀಮ್ನೊಂದಿಗೆ ಕ್ರಿಸ್ಮಸ್ ಟ್ರೀ, ಚರ್ಚ್ ಗಳು ಕೇಕ್ ನಲ್ಲಿ ಮೂಡಿವೆ.