ಮಾಜಿ ಪ್ರಧಾನಿ ವಾಜಪೇಯಿ ಜನ್ಮದಿನದ ಪ್ರಯುಕ್ತ ಮಲ್ಲೇಶ್ವರಂನಲ್ಲಿ ಮಿಡ್​ನೈಟ್ ವಾಕಥಾನ್

ಮಾಜಿ ಪ್ರಧಾನಿ ದಿವಂಗತ ಎ.ಬಿ ವಾಜಪೇಯಿ ಅವರ ಹುಟ್ಟುಹಬ್ಬದ ಅಂಗವಾಗಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿ 'ಮಿಡ್‌ನೈಟ್ ವಾಕಥಾನ್' ನಡೆಯಿತು.

ಮಾಜಿ ಪ್ರಧಾನಿ ವಾಜಪೇಯಿ ಜನ್ಮದಿನದ ಪ್ರಯುಕ್ತ ಮಲ್ಲೇಶ್ವರಂನಲ್ಲಿ ಮಿಡ್​ನೈಟ್ ವಾಕಥಾನ್
| Updated By: Rakesh Nayak Manchi

Updated on:Dec 25, 2022 | 8:46 AM

ಭಾರತವು ಇಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಅವರ 98 ನೇ ಜನ್ಮದಿನವನ್ನು (Birth Anniversery) ಆಚರಿಸುತ್ತಿದೆ. 2014 ರಿಂದ ವಾಜಪೇಯಿ ಅವರ ಜನ್ಮದಿನವನ್ನು ವಾರ್ಷಿಕವಾಗಿ ಉತ್ತಮ ಆಡಳಿತ ದಿನ (Good Governance Day) ವನ್ನಾಗಿ ಆಚರಿಸಲಾಗುತ್ತದೆ. 1924 ರಲ್ಲಿ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಜನಿಸಿದ ವಾಜಪೇಯಿ ಅವರು ‘ಜನಸಾಮಾನ್ಯರ ಮನುಷ್ಯ’ ಎಂದು ಜನಪ್ರಿಯರಾಗಿದ್ದರು. ಇಂದು ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ವಾರ್ಷಿಕೋತ್ಸವ. ಈ ಪ್ರಯುಕ್ತ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ‘ಮಿಡ್‌ನೈಟ್ ವಾಕಥಾನ್’ (Midnight Walkathon) ನಡೆಯಿತು. ಮಿಡ್‌ನೈಟ್ ವಾಕಥಾನ್​​ನಲ್ಲಿ ನೂರಾರು ಜನ ಭಾಗಿ ವಹಿಸಿದ್ದರು. ಸಚಿವ ಅಶ್ವತ್ಥ್‌ನಾರಾಯಣ ಸೇರಿದಂತೆ ನೂರಾರು ವಾಜಪೇಯಿ ಅಭಿಮಾನಿಗಳು ವಾಕ್‌ಥಾನ್‌ನಲ್ಲಿ ಭಾಗವಹಿಸಿದ್ದರು. ಇನ್ನೂ, ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವ ಡಾ.ಅಶ್ವತ್ಥ್‌ನಾರಾಯಣ್, ಭಾರತ ರತ್ನ ವಾಜಪೇಯಿ ರವರು ಆಡಳಿತ ಅವರ ವ್ಯಕ್ತಿತ್ವ, ಆದರ್ಶ ಎಲ್ಲಾರಿಗೂ ಪ್ರೇರಣೆ ಎಂದರು.

Published On - 8:46 am, Sun, 25 December 22

Follow us