ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಲಾಲ್ ಬಾಗ್ ಸೌಂದರ್ಯಕ್ಕೆ ಕಪ್ಪು ಚುಕ್ಕೆಯಂತಾದ ಬ್ಯಾಂಡ್ ಸ್ಟ್ಯಾಂಡ್
ಕಳೆದ ಮಳೆಗೆ ಸಸ್ಯಕಾಶಿ ಲಾಲ್ ಬಾಗ್ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಹೀಗಾಗಿ ಲಾಲ್ ಬಾಗ್ಗೆ ಭೇಟಿ ನೀಡುವವರ ಸಂಖ್ಯೆಯೂ ಜಾಸ್ತಿಯಾಗಿದೆ. ಒಂದು ಕಡೆ ಜೋಗದ ರೀತಿ ಫಾಲ್ಸ್ ಕಂಗೊಳಿಸುತ್ತಿದ್ದು, ಮತ್ತೊಂದೆಡೆ ಹಸಿರಿನ ಮಧ್ಯೆ ಕಪ್ಪು ಚುಕ್ಕೆಯಂತೆ ಬ್ಯಾಂಡ್ ಸ್ಡಾಂಡ್ ಕಾಣುತ್ತಿದೆ.
1 / 6
ಸಸ್ಯಕಾಶಿ ಲಾಲ್ ಬಾಗ್ ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ. ಕಳೆದ ಮಳೆಗೆ ಲಾಲ್ ಬಾಗ್ ಅಂದ ಚೆಂದ ದುಪ್ಪಟ್ಟಾಗಿದ್ದು, ನೋಡುಗರಿಗೆ ಹಬ್ಬದಂತಿದೆ. ಅದ್ರಲ್ಲೂ ಲಾಲ್ ಬಾಗ್ ನಲ್ಲಿ ನಿರ್ಮಾಣವಾಗಿರುವ ಕೃತಕ ನೀರಿನ ಫಾಲ್ಸ್ ನೋಡುಗರನ್ನ ಆಕರ್ಷಿಸುತ್ತಿದೆ. ಹೀಗಾಗಿ ಲಾಲ್ ಬಾಗ್ ಗೆ ಬಂದಂತಹ ಪ್ರವಾಸಿಗರು ಫಾಲ್ಸ್ ನೋಡಿ ಫೋಟೋ ಕ್ಲಿಕ್ಕಿಸಿಕೊಂಡು ವಿಕೆಂಡ್ ಎಂಜಾಯ್ ಮಾಡ್ತಿದ್ದಾರೆ.
2 / 6
ಹಚ್ಚಹಸಿರಿನ ಮಧ್ಯೆ ಲಾಲ್ ಬಾಗ್ ಸೌಂದರ್ಯ ದುಪ್ಪಟ್ಟಾಗಿದ್ರೆ, ಮತ್ತೊಂದೆಡೆ ಲಾಲ್ ಬಾಗ್ ಗೆ ಆಕರ್ಷವಾಗಿದ್ದ ಬ್ಯಾಂಡ್ ಸ್ಡಾಂಡ್ ಬೀಳುವ ಹಂತದಲ್ಲಿದ್ದು, ಲಾಲ್ ಬಾಗ್ ಸೌಂದರ್ಯಕ್ಕೆ ಕಪ್ಪು ಚುಕ್ಕೆಯಂತಾಗಿದೆ. ಕಲಾವಿದರನ್ನ ಪ್ರೋತ್ಸಾಹಿಸಲೆಂದು ವಾಯುವಿಹಾರಿಗಳಿಗೆ ಹಾಡು ಸಂಗೀತ ರಸದೂತಣ ನೀಡಲೆಂದು ಲಾಲ್ ಬಾಗ್ ನಲ್ಲಿ ಬ್ಯಾಂಡ್ ಸ್ಟ್ಯಾಂಡ್ ಅನ್ನು ನಿರ್ಮಾಣ ಮಾಡಿತ್ತು.
3 / 6
ಲಾಲ್ ಬಾಗ್ ನಲ್ಲಿ ರಮಣೀಯವಾದ ಗಾಜಿನ ಮನೆ ಒಂದು ಆಕರ್ಷಣೆಯಾದ್ರೆ ಗಾಜಿನ ಮುಂಭಾಗದಲ್ಲಿ ಈ ಅದ್ಬುತ ವಾದ್ಯ ಮಂಟಪ ಮತ್ತೊಂದು ಆಕರ್ಷಣೆಯಾಗಿದೆ. ಆದ್ರೆ ಇತ್ತೀಚಿಗೆ ಸರಿಯಾದ ನಿರ್ವಹಣೆ ಇಲ್ಲದೆ ಈಗ ಬ್ಯಾಂಡ್ ಸ್ಟಾಂಡ್ ಕುಸಿದು ಬೀಳುವ ಸ್ಥಿತಿಗೆ ತಲುಪಿದೆ. ಇನ್ನೂ ಬ್ಯಾಂಡ್ ಸ್ಟಾಂಡ್ ಸಂಪೂರ್ಣ ಟೀಕ್ ವುಡ್ ನಿಂದ ನಿರ್ಮಾಣವಾಗಿದ್ದು, ಈ ಮಂಟಪ ಗೆದ್ದಲು ಹಿಡಿದು ಕುಸಿಯೋ ಹಂತಕ್ಕೆ ತಲುಪಿದೆ.
4 / 6
ಐತಿಹಾಸಿಕ ವಾದ್ಯ ರಂಗ ಕುಸಿದು ಬೀಳದಂತೆ ಮಂಟಪದ ಸುತ್ತಾ ಹಗ್ಗ ಕಟ್ಟಿ ಸಾರ್ವಜನಿಕರು ಪ್ರವೇಶಿಸದಂತೆ ಲಾಲ್ ಬಾಗ್ ಆಡಳಿತ ಮಂಡಳಿ ಟೆಂಪರರಿ ವ್ಯವಸ್ಥೆ ಮಾಡಿದ್ದು, ಆದಷ್ಟು ಬೇಗ ಸರಿಪಡಿಸಿ ಅಂತ ಪ್ರವಾಸಿಗರು ಹೇಳ್ತಿದ್ದಾರೆ.
5 / 6
ಇನ್ನೂ ಈ ಕುರಿತಾಗಿ ಲಾಲ್ ಬಾಗ್ ಅಧಿಕಾರಿಗಳನ್ನ ಪ್ರಶ್ನಿಸಿದ್ದಕ್ಕೆ ವಾದ್ಯ ಮಂಟಪವನ್ನ ಟೀಕ್ ವುಡ್ ನಿಂದ ನಿರ್ಮಿಸಲಾಗಿದ್ದು, ಸೂಕ್ತವಾದ ಟೀಕ್ ವುಡ್ ಸಿಗದೇ ಕಾಮಗಾರಿ ವಿಳಂಬ ಆಗುತ್ತಿದೆ. ಅಲ್ಲದೇ ಮಂಟಪ ಹಳೆಯ ಕಟ್ಟಡವಾದ ಕಾರಣ ತಜ್ಞರ ಸಲಹೆಯನ್ನ ಪಡೆದುಕೊಂಡು ಕಟ್ಟಡ ದುರಸ್ತಿ ಕಾರ್ಯ ಮಾಡಲು ಒಂದು ಸುತ್ತು ತಜ್ಞರ ಜೊತೆ ಮಾತನಾಡಿದ್ದು, ಆದಷ್ಟು ಬೇಗ ವಾದ್ಯ ರಂಗವನ್ನ ಸರಿಪಡಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
6 / 6
ವಿಕೆಂಡ್ ಬಂದ್ರೆ ಸಾಕು ದೂರದ ಊರುಗಳಿಗೆ ಹೂಗುತ್ತಿದ್ದ ಸಿಲಿಕಾನ್ ಜನರು, ಇತ್ತೀಚೆಗೆ ನಗರದ ಪಾರ್ಕ್ ಗಳಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಮತ್ತೊಂದೆಡೆ ಇತಿಹಾಸದ ಕಥೆ ಸಾರುವ ವಾದ್ಯ ರಂಗ ಮಂಟಪಕ್ಕೆ ಈ ಸ್ಥಿತಿ ಬಂದಿರೋದು ವಿಪರ್ಯಾಸವಾಗಿದ್ದು, ಆದಷ್ಟೂ ಬೇಗ ತೋಟಗಾರಿಕಾ ಇಲಾಖೆ ಕಾಮಗಾರಿ ಆರಂಭಿಸಲಿ ಅನ್ನೋದು ನಮ್ಮ ಆಶಯ.