IPL 2025: ಐವರಿಗೆ 75 ಕೋಟಿ ರೂ: 20 ಮಂದಿಗೆ 45 ಕೋಟಿ ರೂ.

IPL 2025 player retention rules: ಐಪಿಎಲ್ ಮೆಗಾ ಹರಾಜಿಗಾಗಿ ಈ ಬಾರಿ ಪ್ರತಿ ಫ್ರಾಂಚೈಸಿಗಳು 120 ಕೋಟಿ ರೂ. ಅನ್ನು ವ್ಯಯಿಸಬಹುದು. ಆದರೆ ಮೆಗಾ ಹರಾಜಿಗೂ ಮುನ್ನ 5 ಆಟಗಾರರನ್ನು ರಿಟೈನ್ ಮಾಡಿಕೊಂಡರೆ, ಅವರಿಗೆ 75 ಕೋಟಿ ರೂ. ನೀಡಬೇಕಾಗುತ್ತದೆ. ಹೀಗಾಗಿಯೇ ಈ ಬಾರಿಯ ಮೆಗಾ ಹರಾಜಿನಲ್ಲಿ ಬೃಹತ್ ಮೊತ್ತದ ಪೈಪೋಟಿ ಕಂಡು ಬರುವ ಸಾಧ್ಯತೆಯಿಲ್ಲ.

ಝಾಹಿರ್ ಯೂಸುಫ್
|

Updated on:Sep 29, 2024 | 9:18 PM

ಐಪಿಎಲ್ ಮೆಗಾ ಹರಾಜಿನ ಧಾರಣ ನಿಯಮ ಹೊರಬಿದ್ದಿದೆ. ಹೊಸ ನಿಯಮದ ಪ್ರಕಾರ, ಈ ಬಾರಿ ಒಟ್ಟು 6 ಆಟಗಾರರನ್ನು ಉಳಿಸಿಕೊಳ್ಳಬಹುದು. ಇವರಲ್ಲಿ ಐವರನ್ನು ನೇರವಾಗಿ ಆಯ್ಕೆ ಮಾಡಿದರೆ, ಓರ್ವನ ಮೇಲೆ ರೈಟ್ ಟು ಮ್ಯಾಚ್ (RTM) ಕಾರ್ಡ್ ಬಳಸಿಕೊಳ್ಳಬಹುದು. ಅಂದರೆ ಈ ಬಾರಿಯ ಮೆಗಾ ಹರಾಜಿಗೂ ಮುನ್ನ ಪ್ರತಿ ಫ್ರಾಂಚೈಸಿಗಳಿಗೆ 6 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ.

1 / 7
ಅದರಂತೆ ಫ್ರಾಂಚೈಸಿಗಳು ಬಯಸಿದರೆ 6 ಭಾರತೀಯರನ್ನು ಅಥವಾ 6 ವಿದೇಶಿ ಆಟಗಾರರನ್ನು ಬೇಕಿದ್ದರೂ ರಿಟೈನ್ ಮಾಡಿಕೊಳ್ಳಬಹುದು. ಇದಾಗ್ಯೂ ಅನ್​ಕ್ಯಾಪ್ಡ್ ಆಟಗಾರನನ್ನು (ರಾಷ್ಟ್ರೀಯ ತಂಡದ ಪರ ಆಡದ ಪ್ಲೇಯರ್) ಉಳಿಸಿಕೊಳ್ಳಲು ಬಯಸಿದರೆ ಕೇವಲ ಇಬ್ಬರನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಅಂದರೆ ಫ್ರಾಂಚೈಸಿಯೊಂದು ಒಟ್ಟು 6 ಆಟಗಾರನನ್ನು ರಿಟೈನ್ ಮಾಡಿಕೊಳ್ಳಲು ಮುಂದಾದರೆ, ಅದರಲ್ಲಿ ಇಬ್ಬರಿಗಿಂತ ಹೆಚ್ಚಿನ ಅನ್​ಕ್ಯಾಪ್ಡ್ ಆಟಗಾರರು ಇರಬಾರದು ಎಂದು ಬಿಸಿಸಿಐ ತಿಳಿಸಿದೆ.

2 / 7
ಇನ್ನು ಪ್ರತಿ ಫ್ರಾಂಚೈಸಿಗಳು ಉಳಿಸಿಕೊಳ್ಳುವ ಆಟಗಾರರಿಗೆ ನಿರ್ದಿಷ್ಟ ಮೊತ್ತವನ್ನು ನಿಗದಿ ಮಾಡಲಾಗಿದೆ. ಅಂದರೆ ಫ್ರಾಂಚೈಸಿಯೊಂದು ಐವರು ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಮುಂದಾದರೆ ಮೊದಲ ಆಟಗಾರನಿಗೆ 18 ಕೋಟಿ, ಎರಡನೇ ಆಟಗಾರನಿಗೆ 14 ಕೋಟಿ, ಮೂರನೇ ಆಟಗಾರನಿಗೆ 11 ಕೋಟಿ, ನಾಲ್ಕನೇ ಆಟಗಾರನಿಗೆ 18 ಕೋಟಿ, ಐದನೇ ಆಟಗಾರನಿಗೆ 14 ಕೋಟಿ ರೂ. ನೀಡಬೇಕಾಗುತ್ತದೆ.

3 / 7
ಅಂದರೆ ಒಟ್ಟು ಹರಾಜು ಮೊತ್ತದಿಂದ 75 ಕೋಟಿ ರೂ. ಅನ್ನು ರಿಟೈನ್ ಮಾಡಿದ ಆಟಗಾರರಿಗೆ ನೀಡಬೇಕಾಗುತ್ತದೆ. ಈ ಮೊತ್ತವನ್ನು ಒಟ್ಟು ಮೆಗಾ ಹರಾಜು ಮೊತ್ತದಿಂದ ಕಡಿತ ಮಾಡಲಾಗುತ್ತದೆ. ಐವರನ್ನು ಉಳಿಸಿಕೊಂಡರೆ 120 ಕೋಟಿ ರೂ. ಮೆಗಾ ಹರಾಜು ಮೊತ್ತದಿಂದ 75 ಕೋಟಿ ರೂ. ಕಡಿಮೆಯಾಗಲಿದೆ.

4 / 7
ಹೀಗೆ ಐವರಿಗೆ 75 ಕೋಟಿ ರೂ. ನೀಡಿದರೆ ಪ್ರತಿ ಫ್ರಾಂಚೈಸಿಗಳ ಬಳಿ ಉಳಿಯಳಿರುವುದು ಕೇವಲ 45 ಕೋಟಿ ರೂ. ಮಾತ್ರ ಎಂಬುದೇ ಅಚ್ಚರಿ. ಏಕೆಂದರೆ ಈ ಉಳಿದ 45 ಕೋಟಿ ರೂ. ನಲ್ಲಿ ಉಳಿದ 13 ರಿಂದ 20 ಆಟಗಾರರನ್ನು ಖರೀದಿಸಬೇಕಾಗುತ್ತದೆ.

5 / 7
ಅಂದರೆ ಐಪಿಎಲ್ ನಿಯಮದ ಪ್ರಕಾರ ಒಂದು ತಂಡದಲ್ಲಿ 18 ಆಟಗಾರರು ಇರಬೇಕಿರುವುದು ಕಡ್ಡಾಯ. ಹಾಗೆಯೇ ಗರಿಷ್ಠ 25 ಆಟಗಾರರನ್ನು ಹೊಂದಬಹುದು. ಇಲ್ಲಿ ಐವರನ್ನು ಉಳಿಸಿಕೊಂಡರೆ ಉಳಿದ 45 ಕೋಟಿ ರೂ.ನಲ್ಲಿ 13 ಆಟಗಾರರನ್ನು ಖರೀದಿಸಲೇಬೇಕಾಗುತ್ತದೆ.

6 / 7
ಅದರಲ್ಲೂ ಬಲಿಷ್ಠ ಪಡೆಯನ್ನು ರೂಪಿಸಿಕೊಳ್ಳಲು ಒಂದು ತಂಡದಲ್ಲಿ 22 ರಿಂದ 25 ಆಟಗಾರರು ಇರಬೇಕಾಗುತ್ತದೆ. ಆದರೀಗ ರಿಟೈನ್ ಆಟಗಾರರ ಸಂಭಾವನೆ ಹೆಚ್ಚಳ ಮಾಡಿರುವುದರಿಂದ ಐಪಿಎಲ್ ಫ್ರಾಂಚೈಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೆ ಈ ಬಾರಿ ಅಳೆದು ತೂಗಿ ಪ್ರತಿ ಫ್ರಾಂಚೈಸಿಗಳು 18 ರಿಂದ 20 ಆಟಗಾರರನ್ನು ಖರೀದಿಸುವ ಸಾಧ್ಯತೆಗಳು ಹೆಚ್ಚಿವೆ.

7 / 7

Published On - 8:19 am, Sun, 29 September 24

Follow us
ಎಐಸಿಸಿ ಕಟ್ಟಡಕ್ಕೆ ಗಾಂಧಿ ಭವನ ಅಂತ ಯಾಕೆ ಹೆಸರಿಟ್ಟಿಲ್ಲ? ಆರ್ ಅಶೋಕ

ಪಕ್ಷದ ವಿದ್ಯಮಾನಗಳಿಂದ ತಳಮಟ್ಟದ ಕಾರ್ಯಕರ್ತ ನೊಂದಿದ್ದಾನೆ: ಸುನೀಲ ಕುಮಾರ್

ಬಿಗ್​ಬಾಸ್ ಮನೆಯಲ್ಲಿ ‘ಯಜಮಾನ’, ಝಾನ್ಸಿ ಆವಾಜ್​ಗೆ ತಲೆತಗ್ಗಿಸಿದ ರಜತ್

ಭೈರತಿ ಸುರೇಶ್ ಕಾರಿಗೆ ಎಸ್ಕಾರ್ಟ್ ವಾಹನ ಟಚ್: ಪೊಲೀಸರಿಗೆ ಬೈಯ್ದ ಸಚಿವ

Video: ರಿಯಲ್ ಎಸ್ಟೇಟ್ ಬ್ರೋಕರ್​ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದ

ನೆಲಮಂಗಲ: ಚೆನ್ನಾಗಿದ್ದ ರಸ್ತೆಯನ್ನು ಅಗೆದ ಜಮೀನ್ದಾರರು, ಗ್ರಾಮಸ್ಥರ ಆಕ್ರೋಶ

ದಲಿತ ಕಾಂಗ್ರೆಸ್ ನಾಯಕರು ಪ್ರತ್ಯೇಕ ಬಣವಾಗಿ ಗುರುತಿಸಿಕೊಳ್ಳುತ್ತಿದ್ದಾರೆ

Live: ಬೆಳಗಾವಿ ಗಾಂಧಿ ಭಾರತ ಸಮಾವೇಶ ನೇರ ಪ್ರಸಾರ

ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಗಾಂಧಿ ಪುತ್ಥಳಿಯನ್ನು ಕೆತ್ತಿದ್ದಾರೆ

ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಬಳಿಕ ಸಖತ್​ ಸ್ಟೆಪ್​​​ ಹಾಕಿದ ಟ್ರಂಪ್