ಮನೆಗಳಲ್ಲಿಯೇ ಗಾರ್ಡನ್ ಮಾಡಲು ಸಿಲಿಕಾನ್ ಸಿಟಿ ಜನರ ಒಲವು; ಗ್ರೀನ್ ಪಾಟ್ಗಳಿಗೆ ಹೆಚ್ಚಾದ ಬೇಡಿಕೆ
ಸಿಲಿಕಾನ್ ಸಿಟಿ ದಿನದಿಂದ ದಿನಕ್ಕೆ ಕಾಂಕ್ರೀಟ್ ಕಾಡಾಗುತ್ತಿದೆ. ಎಲ್ಲಿ ನೋಡಿದ್ರೂ ವಾಹನಗಳ ಹೊಗೆಯಿಂದ ಜನ ರೋಸಿ ಹೋಗುತ್ತಿದ್ದಾರೆ. ಈ ಮಧ್ಯೆ ಮರಗಳ ರಕ್ಷಿಸಬೇಕಾದ ಅಧಿಕಾರಿಗಳು ಕೈಕಟ್ಟಿಕುಳಿತಿದ್ದಾರೆ. ಹೀಗಾಗಿ ಸಿಲಿಕಾನ್ ಸಿಟಿಯಲ್ಲಿ ಬ್ಯುಟಿಫುಲ್ ಗಾರ್ಡನ್ ಗಳನ್ನ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಗ್ರೀನ್ ಪಾಟ್ ಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ.
1 / 8
ಗಾರ್ಡನ್ ಸಿಟಿ ಎಂದು ಕರೆಸಿಕೊಳ್ಳುವ ನಮ್ಮ ಬೆಂಗಳೂರು ಇತ್ತೀಚಿಗೆ ಕಾಂಕ್ರೀಟ್ ಕಾಡಾಗಿ ಬದಲಾಗುತ್ತಿದೆ. ಎಲ್ಲಿ ನೋಡಿದರೂ, ಟ್ರಾಫಿಕ್ ಸದ್ದು, ವಾಯುಮಾಲಿನ್ಯ, ಶಬ್ದಮಾಲಿನ್ಯ, ಜಲಮಾಲಿನ್ಯದಂತಹ ಸಮಸ್ಯೆಗಳೇ ಪ್ರತಿದಿನ ನೋಡುವಂತಾಗಿದೆ. ನೈಸರ್ಗಿಕ ಗಾಳಿಗೆ ಜನರು ಹುಡುಕಾಡುವ ಪರಿಸ್ಥಿತಿ ಎದುರಾಗಿದೆ.
2 / 8
ಸಧ್ಯ ಈ ಸಮಸ್ಯಗಳಿಂದ ದೂರವಿದ್ದು ಆರೋಗ್ಯವನ್ನ ಕಾಪಾಡಿಕೊಳ್ಳಲು ಬೇಕಾಗಿರುವುದು ಒಳ್ಳೆಯ ಗಾಳಿ ಹಾಗೂ ಹಸಿರು ವಾತಾವರಣ. ಹೀಗಾಗಿ ಈ ಹಸಿರು ವಾತಾವರಣವನ್ನ ಮನೆಗಳಲ್ಲಿ ಸೃಷ್ಟಿಸಿಕೊಳ್ಳುವ ಸಲುವಾಗಿ ಸಿಲಿಕಾನ್ ಮಂದಿ ಗ್ರೀನ್ ಗಾರ್ಡನ್ ಗಳನ್ನ ಮಾಡುವುದಕ್ಕೆ ಮುಂದಾಗುತ್ತಿದ್ದಾರೆ.
3 / 8
ಸಿಲಿಕಾನ್ ಸಿಟಿಯಲ್ಲಿ ಇತ್ತೀಚೆಗೆ ಗ್ರೀನ್ ಪಾಟ್ ಹಾಟ್ , ವಿವಿಧ ಬಗೆಯ ಗಿಡಗಳಿಗೆ ಬೇಡಿಕೆ ಜಾಸ್ತಿಯಾಗಿದ್ದು, ಜನರ ಬೇಡಿಕೆಗೆ ತಕ್ಕಂತೆ ಔಟ್ ಆಫ್ ಕಂಟ್ರಿಗಳಿಂದಲೂ ವಿವಿಧ ಬಗೆಯ ಗಾರ್ಡೇನಿಯ ಪಾಟ್ ಗಳು ಸಿಲಿಕಾನ್ ಸಿಟಿಗೆ ಎಂಟ್ರಿಕೊಟ್ಟಿವೆ.
4 / 8
ಇತ್ತೀಚೆಗೆ ಸಿಲಿಕಾನ್ ಜನರಿಗೆ ಗ್ರೀನ್ ಗಾರ್ಡಾನ್ ಮಾಡುವುದಕ್ಕೆ ಆಸಕ್ತಿ ಹೆಚ್ಚಾದಂತೆ ವಿವಿಧ ಬಗೆಯ ಹೂ,ಗಿಡಗಳ ಪಾಟ್ ಗಳಿಗೆ ಬೇಡಿಕೆ ಹೆಚ್ಚಾಗಿದೆ. ಅದ್ರಲ್ಲೂ ಉತ್ತರ ಪ್ರದೇಶ ಸಿರಾನೆಕ್ಸ್, ತೈವಾನ್ ಪಾಟ್ಸ್, ಪೆಪ್ಪರ್ ರೋಮಿಯಾ, ಸಿಂಗೋನಿಯಮ್, ಸ್ನೇಕ್ಸ್ ಪ್ಲಾಟ್, ಕಾಲಾತಿಯಾ, ಜೇಡ್, ಆ್ಯಂಗ್ಲೋನಿಮಾ, ಜಾಮಿಯಾ ಆ್ಯಂಕ್ಸಿಜನ್ ಪ್ಲಾಂಟ್, ಲಕ್ಕಿ ಬ್ಯಾಂಬೋ,
5 / 8
ಮನಿ ಪ್ಲಾಂಟ್, ಸೆಕುಲೆಂಟ್ಸ್ , ಬೊನ್ಸಾಯಿ, ಪಾಮ್ , ತುಜಾ, ಅಡಿನಿಯಮ್, ಅಂಥೋರಿಯಮ್, ಕೋರಿಯನ್ ಪೆಪ್ಪರ್, ಪಾನ್ಸ್ ಸ್ಟೇಷಿಯಾ, ಡ್ರೆಕ್ಕೆನಾ ಗೋಲ್ಡ್, ಸಿಲ್ವರ್ ಡಾಲಾರ್, ಅಂಥೋರಿಯಮ್ ಲಿಲ್ಲಿ, ಬ್ಲಾಕ್ ಲಿಲ್ಲಿ, ಪೀಸ್ ಲಿಲ್ಲಿ, ಅಂಥೋರಿಯಾಮ್ ಲಿಲ್ಲಿ, ಚೀನಾ ಡಾಲ್ಡ್, ರಬ್ನರ್ ಪ್ಲಾಂಟ್ , ಲೋಟಸ್ ಬ್ಯಾಂಬು, ಕೋನ್ ಶೇಪ್ ಬ್ಯಾಂಬು, ಸ್ಪೇರಲ್‌ಬ್ಯಾಂಬು ಸೇರಿದಂತೆ ಒಟ್ಟು 150 ರಿಂದ 160 ರಷು ಬಗೆಯ ಪ್ಲಾಂಟ್ಸ್ ಗಳಿಗೆ ಬೇಡಿಕೆ ಹೆಚ್ಚಾಗಿದೆ.
6 / 8
ಇವುಗಳು ಬೆಲೆ 600 ರಿಂದ ಹಿಡಿದು 10 ಸಾವಿರದ ವರೆಗೂ ಇದ್ದು, ಇವುಗಳನ್ನ ನೈಸರ್ಗಿಕವಾಗಿ ಬೆಳೆಸಲಾಗುತ್ತಿದೆ. ಹೀಗಾಗಿ ಸಧ್ಯ ಸಿಲಿಕಾನ್ ಸಿಟಿಯಲ್ಲಿ ಪ್ಲಾಂಟ್ ಗಳಿಗೆ 60% ರಷ್ಟು ಬೇಡಿಕೆ ಹೆಚ್ಚಾಗಿದೆ. ಇನ್ನು, ಸಿಲಿಕಾನ್ ಸಿಟಿಯಲ್ಲಿ ಹಸಿರನ್ನ ನೋಡೊದೇ ಕಷ್ಟವಾಗಿ ಹೋಗಿದೆ.
7 / 8
ಕೊರೊನಾ ಅವಧಿಯಲ್ಲಿ ಆ್ಯಕ್ಸಿಜನ್ ಇಲ್ಲದೇ ಸಾಕಷ್ಟು ಜನರು ರೋಸಿ ಹೋಗಿದ್ದರು. ಹೀಗಾಗಿ ಮನೆಗಳಲ್ಲಿ ಗ್ರೀನ್ ಗಾರ್ಡಾನ್ ಗಳನ್ನ ಮಾಡಿಕೊಳ್ಳುತ್ತಿದ್ದೇವೆ. ಸಧ್ಯ ಆ್ಯಕ್ಸಿಜನ್ ಪ್ಲಾಂಟ್ ಗಳಲ್ಲಿ ತುಂಬ ವೆರೈಟಿಗಳಿವೆ. ಅವುಗಳಿಂದ ಒಳ್ಳೆಯ ಗಾಳಿಯು ಸಿಗತ್ತೆ. ಇತ್ತೀಚಿಗೆ ಪ್ರಾಣಿಗಳನ್ನ ಪ್ರೀತಿ ಮಾಡುವಂತೆ ಗ್ರೀನ್ ಪಾಟ್ ಗಳನ್ನ ಪ್ರೀತಿ ಮಾಡುವವರ ಸಂಖ್ಯೆಯು ಜಾಸ್ತಿಯಾಗಿದೆ ಅಂತ ಗ್ರಾಹಕರು ಹೇಳಿದ್ರು.
8 / 8
ಒತ್ತಡದ ಬದುಕು, ಅನಾರೋಗ್ಯ ಸಮಸ್ಯೆ, ಇವುಗಳಿಂದ ಸ್ವಲ್ಲ ನೆಮ್ಮದಿ ಹಾಗೂ ನೈಸರ್ಗಿಕ ಗಾಳಿ ಬೇಕು ಅಂದ್ರೆ ಮನೆಗಳಲ್ಲಿ ಗಾರ್ಡಾನ್ ಗಳನ್ನ ನಿರ್ಮಾಣ ಮಾಡಿಕೊಳ್ಳುವುದು ಅನಿವಾರ್ಯವಾಗಿದ್ದು, ಮುಂದಿನ ದಿನಗಳಲ್ಲಿ ಸಿಟಿ ಅಭಿವೃದ್ಧಿಯದಂತೆ ಗ್ರೀನ್ ಪಾಟ್ ಗಳಿಗೆ ಮತ್ತಷ್ಟು ಬೇಡಿಕೆ ಹೆಚ್ಚಾಗುವುದಲ್ಲಿ ಡೌಟೇ ಇಲ್ಲ.
Published On - 3:02 pm, Fri, 22 December 23