ಬೆಂಗಳೂರು ರೈಲು ಪ್ರಯಾಣಿಕರು ಗಮನಿಸಿ: KSR ಟರ್ಮಿನಲ್ ಬದಲಾವಣೆ, ಹೊಸ ನಿಲ್ದಾಣಗಳು ಇಲ್ಲಿವೆ

Edited By:

Updated on: Jan 10, 2026 | 2:41 PM

ಕೆಎಸ್‌ಆರ್ ಬೆಂಗಳೂರು ನಿಲ್ದಾಣದಲ್ಲಿ ಪಿಟ್ ಲೈನ್ ಕಾಮಗಾರಿ ನಡೆಯುತ್ತಿರುವ ಕಾರಣ, ಜ.16ರಿಂದ ಮಾ.11ರವರೆಗೆ ಕೆಲವು ರೈಲುಗಳ ಟರ್ಮಿನಲ್ ನಿಲ್ದಾಣಗಳಲ್ಲಿ ಬದಲಾವಣೆ ಮಾಡಲಾಗಿದೆ. ಎರ್ನಾಕುಲಂ, ಹಜೂರ್ ಸಾಹಿಬ್ ನಾಂದೇಡ್, ಕಣ್ಣೂರು ರೈಲುಗಳು ಬೆಂಗಳೂರು ಕಂಟೋನ್ಮೆಂಟ್, ಯಶವಂತಪುರ, ಎಸ್‌ಎಂವಿಟಿ ನಿಲ್ದಾಣಗಳಲ್ಲಿ ಕೊನೆಗೊಳ್ಳಲಿವೆ ಅಥವಾ ಅಲ್ಲಿಂದಲೇ ಹೊರಡಲಿವೆ. ಪ್ರಯಾಣಿಕರು ಗಮನಿಸಿ ಸಹಕರಿಸಬೇಕು.

1 / 7
ಬೆಂಗಳೂರಿನಿಂದ ವಿವಿಧ ಊರುಗಳಿಗೆ ರೈಲಿನಲ್ಲಿ ಹೋಗುವ ಜನರು ಈ ಬದಲಾವಣೆಗಳನ್ನು ಗಮನಿಸಲೇಬೇಕು. ಕೆಎಸ್‌ಆರ್ ಬೆಂಗಳೂರು ನಿಲ್ದಾಣದಲ್ಲಿ ಪಿಟ್ ಲೈನ್ ಪುನರ್ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಕಾರಣ ರೈಲುಗಳ ಟರ್ಮಿನಲ್ ನಿಲ್ದಾಣಗಳಲ್ಲಿ ಬದಲಾವಣೆಯನ್ನು ಮಾಡಲಾಗಿದೆ.

2 / 7
ಜ.16ರಿಂದ ಮಾರ್ಚ್​​​ 10ರವರೆಗೆ ಹೊರಡುವ ರೈಲು ಸಂಖ್ಯೆ 12678 ಎರ್ನಾಕುಲಂ ಜಂಕ್ಷನ್ - ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲುಬೆಂಗಳೂರು ಕಂಟೋನ್ಮೆಂಟ್ ಮತ್ತು ಕೆಎಸ್ಆರ್ ಬೆಂಗಳೂರು ನಡುವೆ ಭಾಗಶಃ ರದ್ದು ಮಾಡಲಾಗಿದೆ. ಈ ರೈಲು ಕೆಎಸ್ಆರ್ ಬೆಂಗಳೂರಿಗೆ  ಬದಲಾಗಿ  ಬೆಂಗಳೂರು  ಕಂಟೋನ್ಮೆಂಟ್‌ ನಿಲ್ದಾಣದವರೆಗೆ ಮಾತ್ರ ಹೋಗಲಿದೆ.

3 / 7
ಇನ್ನು ಜ.17ರಿಂದ ಮಾರ್ಚ್ 11ರವರೆಗೆ ರೈಲು ಸಂಖ್ಯೆ 12677 ಕೆಎಸ್ಆರ್ ಬೆಂಗಳೂರು - ಎರ್ನಾಕುಲಂ ಜಂಕ್ಷನ್ ಎಕ್ಸ್‌ಪ್ರೆಸ್ ರೈಲು ಕೆಎಸ್ಆರ್ ಬೆಂಗಳೂರು ಮತ್ತು ಬೆಂಗಳೂರು ಕಂಟೋನ್ಮೆಂಟ್ ನಡುವೆ ಭಾಗಶಃ ರದ್ದಾಗಲಿದೆ. ಈ ರೈಲು ಕೆಎಸ್ಆರ್ ಬೆಂಗಳೂರು ನಿಲ್ದಾಣಕ್ಕೆ ಬದಲಾಗಿ ಬೆಂಗಳೂರು ಕಂಟೋನ್ಮೆಂಟ್‌ ನಿಲ್ದಾಣದಿಂದ ಬೆಳಿಗ್ಗೆ 06:20 ಕ್ಕೆ ಹೊರಡುತ್ತದೆ.

4 / 7
ಜ.16ರಿಂದ ಮಾರ್ಚ್​​ 10 ವರೆಗೆ  ಸಂಖ್ಯೆ 16594 ಹಜೂರ್ ಸಾಹಿಬ್ ನಾಂದೇಡ್ - ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಕೆಎಸ್‌ಆರ್​​​​​​​​​​​​ ಬೆಂಗಳೂರಿನಿಂದ ಹೊರಬೇಕಿತ್ತು. ಆದರೆ ಕಾಮಗಾರಿ ನಡೆಯುತ್ತಿರುವ ಕಾರಣ ಯಶವಂತಪುರ ನಿಲ್ದಾಣದಲ್ಲಿ ಕೊನೆಗೊಳ್ಳಲಿದೆ. ಈ ರೈಲು ಯಲಹಂಕ, ಲೊಟ್ಟೆಗೊಲ್ಲಹಳ್ಳಿ ಮತ್ತು ಯಶವಂತಪುರ ಮಾರ್ಗವಾಗಿ ಸಂಚರಿಸಲಿದ್ದು ಬೆಂಗಳೂರು ಕಂಟೋನ್ಮೆಂಟ್ ಮತ್ತು ಕೆಎಸ್‌ಆರ್ ಬೆಂಗಳೂರಿನ ನಿಲುಗಡೆ  ಇರುವುದಿಲ್ಲ.

5 / 7
ಜ.17ರಿಂದ ಮಾರ್ಚ್​​ 11 ವರೆಗೆ ಕೆಎಸ್‌ಆರ್ ಬೆಂಗಳೂರು - ಹಜೂರ್ ಸಾಹಿಬ್ ನಾಂದೇಡ್ ಎಕ್ಸ್‌ಪ್ರೆಸ್ ರೈಲು ಕೂಡ ಕೆಎಸ್‌ಆರ್ ಬೆಂಗಳೂರಿಗೆ ಬದಲಾಗಿ ಯಶವಂತಪುರದಿಂದ ರಾತ್ರಿ 11:55 ಕ್ಕೆ ಹೊರಡಲಿದೆ. ಈ ರೈಲು ಯಶವಂತಪುರ, ಲೊಟ್ಟೆ ಗೊಲ್ಲಹಳ್ಳಿ ಮತ್ತು ಯಲಹಂಕ ಮಾರ್ಗವಾಗಿ ಸಂಚರಿಸಲಿದ್ದು ಕೆಎಸ್‌ಆರ್ ಬೆಂಗಳೂರು ಮತ್ತು ಬೆಂಗಳೂರು ಕಂಟೋನ್ಮೆಂಟ್‌ ನಿಲ್ದಾಣ ಸ್ಟಾಫ್​​​ ಇರುವುದಿಲ್ಲ.

6 / 7
ಕಣ್ಣೂರು - ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಸಂಚಾರ ಕೂಡ ಜ.16ರಿಂದ ಮಾರ್ಚ್​ 10ರವೆರಗೆ ಬದಲಾಗಲಿದೆ. ಕೆಎಸ್‌ಆರ್ ಬೆಂಗಳೂರಿಗೆ ಬದಲಾಗಿ ಎಸ್‌ಎಂವಿಟಿ ಬೆಂಗಳೂರು ನಿಲ್ದಾಣದಲ್ಲಿ ಕೊನೆಗೊಳ್ಳಲಿದೆ. ಈ ರೈಲು ಯಶವಂತಪುರ, ಹೆಬ್ಬಾಳ, ಬಾಣಸವಾಡಿ ಮತ್ತು ಎಸ್‌ಎಂವಿಟಿ ಬೆಂಗಳೂರು ಮಾರ್ಗದಲ್ಲಿ ಸಂಚರಿಸಲಿದೆ.

7 / 7
ಕೆಎಸ್‌ಆರ್ ಬೆಂಗಳೂರು - ಕಣ್ಣೂರು ಎಕ್ಸ್‌ಪ್ರೆಸ್ ರೈಲು ಕೂಡ ಜ.17ರಿಂದ ಮಾರ್ಚ್​​ 11 ವರೆಗೆ ಕೆಎಸ್‌ಆರ್ ಬೆಂಗಳೂರಿಗೆ ಬದಲಾಗಿ ಎಸ್‌ಎಂವಿಟಿ ಬೆಂಗಳೂರಿನಿಂದ ರಾತ್ರಿ 8:00 ಗಂಟೆಗೆ ಹೊರಡಲಿದೆ.  ಈ ರೈಲು ಎಸ್‌ಎಂವಿಟಿ ಬೆಂಗಳೂರು, ಬಾಣಸವಾಡಿ, ಹೆಬ್ಬಾಳ ಮತ್ತು ಯಶವಂತಪುರ ಮಾರ್ಗವಾಗಿ ಸಂಚರಿಸಲಿದೆ.