ನಿಮ್ಮ ಸೌಂದರ್ಯವನ್ನು ಹೆಚ್ಚಿಸುವ ವಿಭಿನ್ನ ಶೈಲಿಯ ಹೂವಿನ ಆಭರಣಗಳು
TV9 Web | Updated By: ಅಕ್ಷತಾ ವರ್ಕಾಡಿ
Updated on:
Nov 19, 2022 | 5:00 PM
ಮಧ್ಯಮ ಕುಟುಂಬಗಳಿಗೂ ಅಗ್ಗದ ಬೆಲೆಯಲ್ಲಿ ಖರೀದಿಸಬಹುದಾದ ವಿಭಿನ್ನ ಶೈಲಿಯ ಹೂವಿನ ಆಭರಣಗಳು ಇಲ್ಲಿವೆ. ಸಾವಿರಾರು ಜನರ ಮಧ್ಯೆ ನಿಮ್ಮನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ ಈ ಜ್ಯುವೆಲರಿ ಡಿಸೈನ್ಸ್.
1 / 6
ಇಂದಿನ ಜೀವನಶೈಲಿಯಲ್ಲಿ ಚಿನ್ನದ ಆಭರಣಗಳಿಗಿಂತ ಹೆಚ್ಚಾಗಿ ಕ್ರಿಯಾತ್ಮಕ ಶೈಲಿಯ ಆಭರಣಗಳಿಗೆ ಹೆಚ್ಚಿನ ಬೇಡಿಕೆ ಇದೆ. ಮಧ್ಯಮ ಕುಟುಂಬಗಳಿಗೂ ಅಗ್ಗದ ಬೆಲೆಯಲ್ಲಿ ಖರೀದಿಸಬಹುದಾದ ವಿಭಿನ್ನ ಶೈಲಿಯ ಹೂವಿನ ಆಭರಣಗಳು ಇಲ್ಲಿವೆ.
2 / 6
ಹಳದಿ ಹೂವಿನ ಜ್ಯುವೆಲರಿ ಡಿಸೈನ್ಸ್:
ದಕ್ಷಿಣ ಭಾರತದ ಮದುವೆಯ ಹಿಂದಿನ ದಿನ ಅರಶಿನ ಶಾಸ್ತ್ರಗಳಲ್ಲಿ ಈ ಶೈಲಿಯ ಹೂವಿನ ಆಭರಣಗಳನ್ನು ಹೆಚ್ಚಾಗಿ ಕಾಣಬಹುದು. ಇದು ವಧುವಿನ ಅರಶಿನ ಶಾಸ್ತ್ರಕ್ಕೆ ಆಕರ್ಷಕ ಲುಕ್ ನೀಡುತ್ತದೆ.
3 / 6
ಗುಲಾಬಿ ಹೂವಿನ ಜ್ಯುವೆಲರಿ ಡಿಸೈನ್ಸ್:
ಹಿಂದಿನ ಸಂಪ್ರದಾಯದ ಪ್ರಕಾರ ಹೂವುಗಳಿಂದ ಜಡೆಗಳನ್ನು ಅಲಂಕರಿಸಲಾಗುತ್ತಿತ್ತು. ಆದರೆ ಕೂದಲಿನ ಜೊತೆಗೆ ಕೈಗಳಿಗೆ ಹಾಗೂ ಮೂಗಿನ ಆಭರಣಗಳಾಗಿ ಈ ಗುಲಾಬಿ ಹೂವಿನ ಆಭರಣಗಳನ್ನು ತಯಾರಿಸಲಾಗುತ್ತದೆ.
4 / 6
ನವಿಲುಗರಿಗಳ ಜ್ಯುವೆಲರಿ ಡಿಸೈನ್ಸ್:
ಇದು ನಿಮಗೆ ಗ್ರ್ಯಾಂಡ್ ಲುಕ್ ನೀಡುವಲ್ಲಿ ಸಂದೇಹವಿಲ್ಲ. ಇಂದಿನ ಟ್ರೆಂಡಿಂಗ್ ಬಟ್ಟೆಗಳಿಗೆ ಈ ಜುವೆಲ್ಲರಿ ಹೇಳಿ ಮಾಡಿಸಿದ ಜೋಡಿ. ಅತಿ ಕಡಿಮೆ ಬೆಲೆಗೆ ನಿಮ್ಮ ಸೌಂದರ್ಯವನ್ನು ಹೆಚ್ಚಿಸುವ ಈ ಜ್ಯುವೆಲರಿಗಳನ್ನು ಖರೀದಿಸಿ.
5 / 6
ಕವಡೆ ಜ್ಯುವೆಲರಿ ಡಿಸೈನ್ಸ್:
ಸಂಪ್ರದಾಯಿಕವಾಗಿ ಕವಡೆ ಶಾಸ್ತ್ರಗಳಲ್ಲಿ ಬಳಸಲಾಗುತ್ತಿದ್ದ ಕವಡೆಗಳು ಇವು. ಇಂದೂ ಇವುಗಳ ಮೂಲಕ ಸಾಕಷ್ಟು ವಿಭಿನ್ನ ಶೈಲಿಯ ಜ್ಯುವೆಲರಿ ಡಿಸೈನ್ಸ್ ಟ್ರೆಂಡ್ ಆಗಿ ಬಿಟ್ಟಿದೆ. ಕವಡೆ ಜ್ಯುವೆಲರಿ ಡಿಸೈನ್ಸ್ ನಿಮಗೆ ವಿಶೇಷ ದಿನಗಳಲ್ಲಿ ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.
6 / 6
ಗುಲಾಬಿ ಬಣ್ಣದ ಜ್ಯುವೆಲರಿ ಡಿಸೈನ್ಸ್:
ಇದು ವಧುವಿನ ಅಲಂಕಾರಕ್ಕಾಗಿ ಹೇಳಿ ಮಾಡಿಸಿರುವ ಜ್ಯುವೆಲರಿ ಡಿಸೈನ್. ಇದು ವಧುವಿನ ಗುಲಾಬಿ ಬಣ್ಣದ ಗ್ರ್ಯಾಂಡ್ ಗೌನ್ ಗೆ ಸೂಪರ್ ಲುಕ್ ನೀಡುತ್ತದೆ.