Tech Tips: ನಿಮ್ಮ ಸ್ಮಾರ್ಟ್​ಫೋನ್ ಹೈ ಸ್ಪೀಡ್​ನಲ್ಲಿ ಚಾರ್ಜ್ ಆಗಬೇಕಾ?: ಈ ಟ್ರಿಕ್ ಫಾಲೋ ಮಾಡಿ

Fast Charging Tricks: ವೇಗದ ಚಾರ್ಜಿಂಗ್ ಬಂದಿದ್ದರೂ ಚಾರ್ಜ್ ಆದಷ್ಟೇ ವೇಗದಲ್ಲಿ ಖಾಲಿಯಾಗುತ್ತದೆ. ಹಾಗಿದ್ದರೆ, ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ಸುರಕ್ಷವಾಗಿ ವೇಗದಿಂದ ಚಾರ್ಜ್‌ ಮಾಡಲು ಏನು ಮಾಡಬೇಕು ಎಂಬುದಕ್ಕೆ ಇಲ್ಲಿ ಕೆಲ ಟಿಪ್ಸ್ ನೀಡಲಾಗಿದೆ.

TV9 Web
| Updated By: Vinay Bhat

Updated on: Nov 20, 2022 | 6:59 AM

ಇಂದಿನ ವೇಗದ ಜಗತ್ತಿನಲ್ಲಿ ಸ್ಮಾರ್ಟ್​ಫೋನ್ ಬಳಸದೇ ಇರುವವರ ಸಂಖ್ಯೆ ತೀರಾ ಕಡಿಮೆ. ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದವರ ಕೈಗೂ ಸ್ಮಾರ್ಟ್​ಫೋನ್ ಬಂದು ಸೇರಿಕೊಂಡಿದೆ. ಆದರೆ, ಈಗಿನ ಫೋನಿನಲ್ಲಿ 4500mAh, 5000mAh, ಅಷ್ಟೇ ಏಕೆ 6000mAh ಸಾಮರ್ಥ್ಯದ ಬ್ಯಾಟರಿ ಬಂದರೂ ಚಾರ್ಜ್ ಬೇಗನೆ  ಖಾಲಿಯಾಗುತ್ತದೆ.

1 / 9
ಒಮ್ಮೆ ಚಾರ್ಜ್ ಖಾಲಿಯಾದರೆ ಪುನಃ ಚಾರ್ಜ್ ಫುಲ್ ಆಗಲು ಗಂಟೆಗಟ್ಟಲೆ ಕಾಯಬೇಕು. ವೇಗದ ಚಾರ್ಜಿಂಗ್ ಬಂದಿದ್ದರೂ ಚಾರ್ಜ್ ಆದಷ್ಟೇ ವೇಗದಲ್ಲಿ ಖಾಲಿಯಾಗುತ್ತದೆ. ಹಾಗಿದ್ದರೆ, ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ಸುರಕ್ಷವಾಗಿ ವೇಗದಿಂದ ಚಾರ್ಜ್‌ ಮಾಡಲು ಏನು ಮಾಡಬೇಕು ಎಂಬುದಕ್ಕೆ ಇಲ್ಲಿ ಕೆಲ ಟಿಪ್ಸ್ ನೀಡಲಾಗಿದೆ.

2 / 9
ಮೊದಲನೆಯದಾಗಿ ನಿಮಗೆ ಫೋನ್ ಆದಷ್ಟು ಬೇಗ ಚಾರ್ಜ್ಆಗಬೇಕು ಎಂದಿದ್ದಲ್ಲಿ ವಾಲ್‌ಪ್ಲಗ್‌ ಬಳಸಿ. ಗುಣಮಟ್ಟದ ಎಸಿ ವಾಲ್‌ಪ್ಲಗ್‌ಗಳು 1 ಆಂಪ್‌ ವಿದ್ಯುತ್‌ ಅನ್ನು ಸ್ಮಾರ್ಟ್‌ಫೋನ್‌ಗೆ ಹರಿಸುತ್ತವೆ. ಇದು ಸಾಮಾನ್ಯ ಯುಎಸ್‌ಬಿ 2.0 ಸಾಕೆಟ್‌ಗಿಂತ ಎರಡು ಪಟ್ಟು ಹೆಚ್ಚಾಗಿರುತ್ತದೆ.

3 / 9
ಥರ್ಡ್‌ ಪಾರ್ಟಿ ಎಸಿ ವಾಲ್‌ಪ್ಲಗ್‌ಗಳು 2.4 ಆಂಪ್‌ವರೆಗೆ ವಿದ್ಯುತ್‌ ಅನ್ನು ಹರಿಸುವುದರಿಂದ ನಿಮ್ಮ ಸ್ಮಾರ್ಟ್‌ಫೋನ್‌ ಮತ್ತು ಯುಎಸ್‌ಬಿ ಕೇಬಲ್‌ಗೆ ಯಾವ ವಾಲ್‌ಪ್ಲಗ್‌ ಸೂಕ್ತ ಎಂಬುದನ್ನು ಅರಿಯುವುದು ಒಳ್ಳೆಯದು.

4 / 9
ಈಗಂತು ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಮತ್ತು ಐಫೋನ್‌ ಸೇರಿದಂತೆ ಕೆಲ ಸ್ಮಾರ್ಟ್‌ಫೋನ್‌ಗಳು ವೈಯರ್‌ಲೆಸ್‌ ಚಾರ್ಜಿಂಗ್‌ ವ್ಯವಸ್ಥೆಯನ್ನು ಪರಿಚಯಿಸಿದೆ. ವೈಯರ್‌ ಚಾರ್ಜಿಂಗ್‌ಗಿಂತ ವೈರ್‌ಲೆಸ್‌ ಚಾರ್ಜಿಂಗ್‌ ನಿಧಾನವಾದರೂ, Qi ಚಾರ್ಜಿಂಗ್‌ಗೆ ಬೆಂಬಲ ನೀಡಿದರೆ 7.5 ವ್ಯಾಟ್‌ನಷ್ಟು ವಿದ್ಯುತ್‌ ಪ್ರವಹಿಸುತ್ತದೆ.

5 / 9
ಅಂತೆಯೆ ಹೆಚ್ಚಿನ ಆಂಪ್‌ ಸಾಮರ್ಥ್ಯದ ವಾಲ್‌ಚಾರ್ಜರ್‌ನಂತೆ 1 ಆಂಪ್‌ಗಿಂತ ಹೆಚ್ಚಿನ ಸಾಮರ್ಥ್ಯದ ಕಾರ್‌ ಚಾರ್ಜರ್‌ಗಳು ವೇಗದ ಚಾರ್ಜಿಂಗ್‌ಗೆ ಹೆಸರುವಾಸಿಯಾಗಿವೆ. ಇದನ್ನು ಕೂಡ ಬಳಕೆ ಮಾಡಬಹುದು.

6 / 9
ಪೊರ್ಟೆಬಲ್‌ ಚಾರ್ಜರ್‌ಗಳು ಕೂಡ ಕ್ವಿಕ್‌ ಚಾರ್ಜ್‌ ಸಾಮರ್ಥ್ಯ ಹೊಂದಿದ್ದು, ವೈಯರ್‌ ಅಥವಾ ವೈಯರ್‌ಲೆಸ್‌ ಸಾಧನಗಳಿಗೆ ವೇಗದ ಚಾರ್ಜಿಂಗ್‌ ಅವಕಾಶ ನೀಡುತ್ತವೆ. ಕ್ವಿಕ್ ಚಾರ್ಜ್‌ 3.0 ಮತ್ತು Qi 7.5 ವ್ಯಾಟ್‌ನಷ್ಟು ವೇಗದ ಚಾರ್ಜಿಂಗ್‌ ನೀಡುವ ಸಾಧನಗಳನ್ನು ಈ ಪ್ರಕಾರಗಳಲ್ಲಿ ಕಾಣಬಹುದು.

7 / 9
ಐಪೋನ್‌ 6 ಮತ್ತು ಇತ್ತೀಚಿನ ಐಫೋನ್‌ಗಳಿಗೆ ಐಪ್ಯಾಡ್‌ ಚಾರ್ಜರ್‌ ಬಳಸಿದರೂ ಆಗಬಹುದು. ಈ ಚಾರ್ಜರ್‌ಗಳು 1 ಆಂಪ್‌ಕ್ಕಿಂತ ಹೆಚ್ಚಿನ ವಿದ್ಯುತ್‌ ಪ್ರವಹಿಸುವುದರಿಂದ ಸ್ಮಾರ್ಟ್‌ಫೋನ್‌ ವೇಗವಾಗಿ ಚಾರ್ಜ್‌ ಆಗುತ್ತದೆ.

8 / 9
ನಿಮ್ಮ ಮೊಬೈಲ್‌ ವೇಗವಾಗಿ ಚಾರ್ಜಿಂಗ್‌ ಆಗಬೇಕೆಂದರೆ ಚಾರ್ಜಿಂಗ್‌ ಸಮಯದಲ್ಲಿ ಸ್ಮಾರ್ಟ್‌ಫೋನ್‌ನ್ನು ಸ್ವಿಚ್‌ ಆಫ್‌ ಮಾಡಿ. ಸ್ವಿಚ್‌ ಆಫ್‌ ಮಾಡುವುದರಿಂದ ಬ್ಯಾಕ್‌ಗ್ರೌಂಡ್‌ನಲ್ಲಿ ಆ್ಯಪ್‌ಗಳು ಕಾರ್ಯನಿರ್ವಹಿಸುವುದಿಲ್ಲ. ಈ ಸಂದರ್ಭ ಸಾಮನ್ಯಕ್ಕಿಂತ ವೇಗವಾಗಿ ಚಾರ್ಜ್ ಆಗುತ್ತದೆ.

9 / 9
Follow us