ಭಾರತ ತಂಡದ ನ್ಯೂಜಿಲೆಂಡ್ (India vs New Zealand) ಪ್ರವಾಸಕ್ಕೆ ಅಂದುಕೊಂಡ ರೀತಿಯಲ್ಲಿ ಚಾಲನೆ ಸಿಗಲಿಲ್ಲ. ಮೂರು ಪಂದ್ಯಗಳ ಟಿ20 ಸರಣಿ ಪೈಕಿ ಮೊದಲ ಕದನ ಸಂಪೂರ್ಣವಾಗಿ ಮಳೆಗೆ ಆಹುತಿಯಾಯಿತು. ಇದೀಗ ಇಂದು ದ್ವಿತೀಯ ಪಂದ್ಯ ಆಯೋಜಿಸಲಾಗಿದೆ.
ಮೌಂಟ್ ಮೌಂಗನು ಬೇ ಓವಲ್ ಮೈದಾನದಲ್ಲಿ ಇಂದು ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಎರಡನೇ ಟಿ20 ಪಂದ್ಯ ನಡೆಯಲಿದೆ. ಆದರೆ, ಈ ಪಂದ್ಯಕ್ಕೂ ವರುಣ ಅಡ್ಡಿ ಪಡಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಮಧ್ಯಾಹ್ನ 12 ಗಂಟೆಗೆ ಶುರುವಾಗಲಿದೆ. ಅದೇ ನ್ಯೂಜಿಲೆಂಡ್ ಕಾಲಮಾನದ ಪ್ರಕಾರ ಪಂದ್ಯ 7:30 PM ಗೆ ಆರಂಭವಾಗುತ್ತದೆ.
ಪಂದ್ಯ ನಡೆಯುವ ದಿನ ಇಂದು ಮೌಂಟ್ ಮೌಂಗನು ಸಿಟಿಯಲ್ಲಿ ಭಾರೀ ಮಳೆ ಆಗಲಿದೆ. ಹವಾಮಾನ ಇಲಾಖೆ ಸೂಚಿಸಿರುವ ಪ್ರಕಾರ ಪಂದ್ಯ ಆರಂಭವಾಗುವ 7 ಗಂಟೆಗೆ ಶೇ. 36 ರಷ್ಟು ಮಳೆಯ ಪ್ರಮಾಣ ಇರಲಿದೆ. ಪಂದ್ಯದ ಮಧ್ಯೆ ಶೇ. 64 ರಷ್ಟು ಮತ್ತು ಪಂದ್ಯ ಮುಗಿಯುವ ಸಮಯದಲ್ಲಿ ಶೇ. 34 ರಷ್ಟು ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಳೆಯ ಪ್ರಮಾಣ ಹೇಗಿರಲಿದೆ?: 07:00 PM – 19 ಡಿಗ್ರಿ (ಶೇ. 36 ರಷ್ಟು ಮಳೆ ಆಗುವ ಸಾಧ್ಯತೆ), 08:00 PM – 18 ಡಿಗ್ರಿ (ಶೇ. 49 ರಷ್ಟು ಮಳೆ ಆಗುವ ಸಾಧ್ಯತೆ), 09:00 PM – 17 ಡಿಗ್ರಿ (ಶೇ. 64 ರಷ್ಟು ಮಳೆ ಆಗುವ ಸಾಧ್ಯತೆ, 10:00 PM – 17 ಡಿಗ್ರಿ (ಶೇ. 64 ರಷ್ಟು ಮಳೆ ಆಗುವ ಸಾಧ್ಯತೆ), 11:00 PM – 15 ಡಿಗ್ರಿ (ಶೇ. 40 ರಷ್ಟು ಮಳೆ ಆಗುವ ಸಾಧ್ಯತೆ), 00:00 AM – 15 ಡಿಗ್ರಿ (ಶೇ. 34 ರಷ್ಟು ಮಳೆ ಆಗುವ ಸಾಧ್ಯತೆ).
ಮೊದಲ ಟಿ20 ನಡೆಯಬೇಕಿದ್ದ ವೆಲ್ಲಿಂಗ್ಟನ್ನಲ್ಲಿ ಎಡೆಬಿಡದೆ ಮಳೆ ಸುರಿದು ಮೈದಾನದಲ್ಲಿ ಹೆಜ್ಜೆ ಇಡಲೂ ಸಾಧ್ಯವಾಗಲಿಲ್ಲ. ಬಳಿಕ ಒಂದೂ ಎಸೆತವಿಲ್ಲದೆ ಪಂದ್ಯವನ್ನು ರದ್ದುಗೊಳಿಸಲಾಯಿತು. ಹೀಗಾಗಿ ದ್ವಿತೀಯ ಟಿ20 ಪಂದ್ಯದ ಮೇಲೆ ಉಭಯ ತಂಡಗಳು ಕಣ್ಣಿಟ್ಟಿದೆ. ಆದರ, ಈ ಪಂದ್ಯ ಕೂಡ ನಡೆಯುವುದು ಅನುಮಾನ ಎಂಬಂತಿದೆ.
ಪಂದ್ಯ ನಡೆದರೆ ಟೀಮ್ ಇಂಡಿಯಾ ಪರ ಓಪನರ್ಗಳಾಗಿ ಯಾರು ಆಡಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ. ರಿಷಬ್ ಪಂತ್, ಇಶಾನ್ ಕಿಶನ್ ಮತ್ತು ಶುಭ್‌ಮನ್ ಗಿಲ್ ಎಂಬ ಮೂರು ಆಯ್ಕೆಗಳಿವೆ. ಸಂಜು ಸ್ಯಾಮ್ಸನ್ ಮಿಂಚಬೇಕಾದ ಒತ್ತಡದಲ್ಲಿದ್ದಾರೆ.
ಸೂರ್ಯಕುಮಾರ್ ಯಾದವ್, ಹಾರ್ದಿಕ್, ಶ್ರೇಯಸ್ ಅಯ್ಯರ್ಮ ದೀಪಕ್ ಹೂಡ ನಂತರದ ಸ್ಥಾನದಲ್ಲಿದ್ದಾರೆ. ಆಲ್ರೌಂಡರ್ ಜಾಗಕ್ಕೆ ವಾಷಿಂಗ್ಟನ್ ಸುಂದರ್ ಆಯ್ಕೆ ಕೂಡ ಇದೆ.
ಟೀಮ್ ಇಂಡಿಯಾ ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್ ಮತ್ತು ಅರ್ಷದೀಪ್ ಸಿಂಗ್ ಹೊಸ ಚೆಂಡಿನೊಂದಿಗೆ ದಾಳಿ ಆರಂಭಿಸುವ ನಿರೀಕ್ಷೆಯಿದೆ.
ಹರ್ಷಲ್ ಪಟೇಲ್ ಮತ್ತು ಮೊಹಮ್ಮದ್ ಸಿರಾಜ್ ಪೈಕಿ ಯಾರಿಗೆ ಸ್ಥಾನ ಎಂಬುದು ನೋಡಬೇಕಿದೆ. ಅಂತೆಯೆ ಟಿ20 ವಿಶ್ವಕಪ್ನಲ್ಲಿ ಒಂದೂ ಪಂದ್ಯವನ್ನು ಆಡದ ಯುಜ್ವೇಂದ್ರ ಚಹಲ್ ಇಂದು ಕಣಕ್ಕಿಳಿಯಲಿದ್ದಾರೆ.
Published On - 9:10 am, Sun, 20 November 22