Weight Reduce Yoga: ತೂಕ ಇಳಿಸಲು ಈ ಐದು ಯೋಗಾಸನ ಮಾಡಿ
TV9 Web | Updated By: sandhya thejappa
Updated on:
Jul 21, 2021 | 12:09 PM
ಸರ್ವ ಕಾಯಿಲೆಗೆ ಯೋಗ ಮದ್ದಿದ್ದಂತೆ. ಪ್ರತಿ ನಿತ್ಯ ಕನಿಷ್ಠ ಅರ್ಧ ಗಂಟೆ ಯೋಗಾಸನ ಮಾಡಿದರೆ ಆರೋಗ್ಯ ದೃಷ್ಟಿಯಿಂದ ತುಂಬಾ ಒಳ್ಳೆಯದು. ತೂಕ ಹೆಚ್ಚಾದಂತೆ ಆರೋಗ್ಯ ಏರುಪೇರಾಗುತ್ತದೆ. ಹೀಗಾಗಿ ಯೋಗಾಸನ ಅಭ್ಯಾಸ ಒಳ್ಳೆಯದು.
1 / 5
ಧನುರಾಸನ: ಮೊದಲು ನೆಲದ ಮೇಲೆ ಮಲಗಬೇಕು. ಕೆಳಮುಖ ಮಾಡಿ ಮಲಗಬೇಕು. ಎರಡು ಕಾಲುಗಳನ್ನು ಬೆನ್ನಿನ ಕಡೆ ಬಗ್ಗಿಸಬೇಕು. ಬಗ್ಗಿಸಿದ ನಂತರ ಎಡ ಕಾಲನ್ನು ಎಡಗೈನಿಂದ ಮತ್ತು ಬಲಗಾಲನ್ನು ಬಲಗೈನಿಂದ ಹಿಡಿದುಕೊಳ್ಳಬೇಕು. ಉಸಿರನ್ನು ಹೊರಗೆ ಬಿಟ್ಟು ಕಾಲುಗಳನ್ನು ನೆಲದಿಂದ ಮೇಲಕ್ಕೆ ಎತ್ತಬೇಕು. ಈ ಆಸನ ಮಾಡಿದಾಗ ಬಿಲ್ಲನಿಂತೆ ಕಾಣುತ್ತದೆ. ಈ ಆಸನದಿಂದ ಎದೆ, ಹೊಟ್ಟೆ ಬಲಿಷ್ಠವಾಗುತ್ತದೆ.
2 / 5
ತ್ರಿಕೋನಾಸನ: ಯೋಗ ಮ್ಯಾಟ್ ಮೇಲೆ ನೇರವಾಗಿ ನಿಂತುಕೊಳ್ಳಿ. ನಂತರ ಕಾಲುಗಳನ್ನು ದೂರವಿಡಿ. ಕೈಗಳನ್ನು ಹೆಗಲಿನ ಮಟ್ಟಕ್ಕೆ ಚಾಚಿ. ಬಲಪಾದವನ್ನು ಬಲ ಕಡೆಗೆ ತಿರುಗಿಸಿ. ಆ ನಂತರ ಉಸಿರನ್ನು ಬಿಟ್ಟು ದೇಹವನ್ನು ಬಲ ಭಾಗಕ್ಕೆ ಬಗ್ಗಿಸಿ. ಬಲಗೈನ ಬಲಗಾಲಿನ ಪಕ್ಕಕ್ಕೆ ಇಟ್ಟು, ಎಡಗೈನ ನೇರವಾಗಿ ಚಾಚಿ. ಕಣ್ಣು ಎಡಗೈನ ನೋಡುತ್ತಿರಬೇಕು.
3 / 5
ನೌಕಾಸನ: ಇದಕ್ಕೆ ಬೋಟ್ ಪೋಸ್ ಅಂತಲೂ ಕರೆಯುತ್ತಾರೆ. ಯೋಗ ಮ್ಯಾಟ್ ಮೇಲೆ ಕುಳಿತುಕೊಳ್ಳಿ. ಎರಡು ಕಾಲುಗಳನ್ನು ಮುಂದಕ್ಕೆ ಚಾಚಿ. ಎರಡು ಕಾಲು ಜೋಡಿಸಿರಬೇಕು. ತೋಳುಗಳು ದೇಹದ ಎರಡು ಬದಿಯಲ್ಲಿ ಇಡಬೇಕು. ಉಸಿರು ತೆಗೆದುಕೊಂಡು ಕಾಲುಗಳನ್ನು ಎತ್ತಬೇಕು. ಕಾಲುಗಳನ್ನು ಮೇಲಕ್ಕೆ ಎತ್ತುವಾಗ ಕೈಗಳನ್ನು ಮುಂದಕ್ಕೆ ಚಾಚಬೇಕು.
4 / 5
ಅರ್ಧ ಕಟಿ ಚಕ್ರಾಸನ ಯೋಗ: ಈ ಆಸನ ಹೊಟ್ಟೆ ಕರಗಿಸುತ್ತದೆ. ಮೊದಲು ನೇರವಾಗಿ ನಿಂತುಕೊಳ್ಳಿ. ಬಲಗೈನ ಮೇಲಕ್ಕೆ ಎತ್ತಿ. ಎಡಗೈ ಮೊದಲಿದ್ದ ಸ್ಥಿತಿಯಲ್ಲೇ ಇರಬೇಕು. ಅಂದರೆ ಎಡಗಾಲಿನ ಪಕ್ಕದಲ್ಲೆ ಇರಬೇಕು. ಬಲಗೈ ಎತ್ತಿದ ನಂತರ ದೇಹದ ಎಡಭಾಗಕ್ಕೆ ಭಾಗಬೇಕು. ಹೀಗೆ ಮಾಡಿದರೆ ಪಕ್ಕೆಲುಬುಗಳಲ್ಲಿರುವ ಕೊಬ್ಬು ಕರಗುತ್ತದೆ.
5 / 5
ಸರ್ವಾಂಗಾಸನ: ಮೊದಲು ನೆಲದ ಮೇಲೆ ಅಂಗಾತವಾಗಿ ಮತ್ತು ನೇರವಾಗಿ ಮಲಗಿ. ನಂತರ ನಿಧಾನವಾಗಿ ಎರಡು ಕಾಲನ್ನು ಮೇಲಕ್ಕೆ ಎತ್ತಿ. ಲಂಬವಾಗಿದ್ದ ಕಾಲನ್ನು ತಲೆಯ ಕಡೆಗೆ ಬಗ್ಗಿಸಬೇಕು. ಸೊಂಟವನ್ನು ಕೈಯಿಂದ ಹಿಡಿದು ಕಾಲು ವಾಪಸ್ ಬರದಂತೆ ಹಿಡಿದುಕೊಳ್ಳಬೇಕು. ಈ ಆಸನದಲ್ಲಿ ಕುತ್ತಿಗೆ, ಹೆಗಲು, ಮೊಣಕೈ ವರೆಗಿನ ತೋಳುಗಳು ಮಾತ್ರ ನೆಲಕ್ಕೆ ತಾಗುತ್ತದೆ.