
ನೀವು ಹೊಸ ಫೋನ್ ಖರೀದಿಸಲು ಯೋಚಿಸುತ್ತಿರುವಿರಾ? ನಿಮ್ಮ ಗರಿಷ್ಠ ಬಜೆಟ್ 20 ಸಾವಿರ ರೂ. ಒಳಗೆ ಇದ್ದರೆ ಆಕರ್ಷಕ ಫೀಚರ್ ಗಳುಳ್ಳ ಬೊಂಬಾಟ್ ಸ್ಮಾರ್ಟ್ ಫೋನ್ ಗಳ ಬಗ್ಗೆ ನಾವು ಮಾಹಿತಿ ನೀಡುತ್ತೇವೆ.

ಇಲ್ಲಿ Motorola, Samsung, Poco ಮತ್ತು Oppo ಕಂಪನಿಯ ಪ್ರಮುಖ ನಾಲ್ಕು ಆಕರ್ಷಕ ಫೋನ್ಗಳ ಮಾಹಿತಿ ತಿಳಿಸಲಾಗಿದೆ. ಈ ಫೋನ್ ನಲ್ಲಿರುವ ಕ್ಯಾಮೆರಾ, ಪ್ರೊಸೆಸರ್, ಬ್ಯಾಟರಿ 20,000 ರೂ. ಒಳಗೆ ಲಭ್ಯವಿರುವ ಫೋನ್ ಗೆ ಹೇಳಿ ಮಾಡಿಸಿದ್ದಾಗಿದೆ.

ಈ ಫೋನಿನ 6 GB RAM ಮತ್ತು 128 GB ಸ್ಟೋರೇಜ್ ಮಾದರಿಯ ಬೆಲೆ 18,999 ರೂ. ಅಲ್ಲದೆ 8 GB RAM ಮತ್ತು 128 GB ಸ್ಟೋರೇಜ್ ಕಾನ್ಫಿಗರೇಶನ್ ಬೆಲೆ 20,499 ರೂ.ಆಗಿದೆ. ಈ ಫೋನ್ ಅನ್ನು ಇ-ಕಾಮರ್ಸ್ ಕಂಪನಿ ಅಮೆಜಾನ್ ಇಂಡಿಯಾ ಮತ್ತು ಸ್ಯಾಮ್ಸಂಗ್ ಇಂಡಿಯಾದ ಆನ್ಲೈನ್ ಸ್ಟೋರ್ ನಿಂದ ಖರೀದಿಸಬಹುದು.

Poco M4 Pro 4G ಫೋನ್ ಅನ್ನು ಭಾರತದಲ್ಲಿ ಒಟ್ಟು ಮೂರು ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಫೋನ್ ನ ಬೇಸ್ ಮಾಡೆಲ್ ಅಂದರೆ 8 GB RAM ಮತ್ತು 64 GB ಸ್ಟೋರೇಜ್ ಮಾಡೆಲ್ ಬೆಲೆ 14,999 ರೂ., 8GB RAM ಮತ್ತು 128GB ಸ್ಟೋರೇಜ್ ಸ್ಥಳದೊಂದಿಗೆ ಫೋನ್ ಬೆಲೆ 18,499 ರೂ. ಇತ್ತೀಚಿನ 8GB RAM ಮತ್ತು 256GB ಸ್ಟೋರೇಜ್ ಮಾಡೆಲ್ ಬೆಲೆ 18,999 ರೂ. ಆಗಿದೆ.

Moto G52 - ಭಾರತದಲ್ಲಿ Moto G52 4GB RAM ಮತ್ತು 64GB ಸ್ಟೋರೇಜ್ ಮಾದರಿಗೆ 14,499 ರೂ. ನಿಗದಿ ಮಾಡಲಾಗಿದೆ. ಅಂತೆಯೆ ಈ ಫೋನ್ನ 6 GB RAM ಮತ್ತು 128 GB ಸ್ಟೋರೇಜ್ ಮಾದರಿಯ ಬೆಲೆ 18,499 ರೂ. ಇದೆ. ನೀವು ಈ ಫೋನ್ ಅನ್ನು 20 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದು.

ಅಂತೆಯೆ Oppo K10 ಫೋನ್ ಅನ್ನು ಭಾರತದಲ್ಲಿ ಎರಡು ಸ್ಟೋರೇಜ್ ಕಾನ್ಫಿಗರೇಶನ್ಗಳಲ್ಲಿ ಬಿಡುಗಡೆ ಮಾಡಲಾಗಿದೆ. 6 GB RAM ಮತ್ತು 128 GB ಸ್ಟೋರೇಜ್ ಮಾದರಿಯ ಬೆಲೆ 14,990 ರೂ., 6 GB RAM ಮತ್ತು 128 GB ಸಂಗ್ರಹಣೆಯ ಬೆಲೆ 18,990 ರೂಪಾಯಿಗಳು. Oppo ನ ಆನ್ಲೈನ್ ಸ್ಟೋರ್ ಮತ್ತು ಇ-ಕಾಮರ್ಸ್ ಕಂಪನಿ ಫ್ಲಿಪ್ ಕಾರ್ಟ್ ನಿಂದ ಫೋನ್ ಅನ್ನು ಖರೀದಿಸಬಹುದು.