- Kannada News Photo gallery Cricket photos IND vs SA Rishabh Pant lead Team India Practice in Rajasekhara Reddy Stadium for 3rd T20I vs SA
IND vs SA 3rd T20I: ಇಂದು ತೃತೀಯ ಟಿ20: ಟೀಮ್ ಇಂಡಿಯಾ ಆಟಗಾರರಿಂದ ಭರ್ಜರಿ ಅಭ್ಯಾಸ
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಎರಡು ಟಿ20 ಪಂದ್ಯದಲ್ಲಿ ಸೋತು ಸರಣಿ ಕಳೆದುಕೊಳ್ಳುವ ಭೀತಿಯಲ್ಲಿರುವ ಭಾರತ ತಂಡ ಇಂದು ಮೂರನೇ ಟಿ20 ಪಂದ್ಯವನ್ನು ಆಡಲಿದೆ. ವಿಶಾಖಪಟ್ಟಣದ ಡಾ. ವೈಎಸ್ ರಾಜಶೇಖರ ರೆಡ್ಡಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಹೈವೋಲ್ಟೇಜ್ ಕದನ ನಡೆಯಲಿದೆ. ಇದಕ್ಕಾಗಿ ಭಾರತೀಯ ಆಟಗಾರರು ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ.
Updated on:Jun 14, 2022 | 9:06 AM

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವೆ ಅಂತಿಮ ಐದನೇ ಟಿ20 ಪಂದ್ಯ ನಡೆಯಲಿದೆ. ಈಗಾಗಲೇ 2-2 ಅಂತರದಿಂದ ಸರಣಿ ಸಮಬಲಗೊಂಡಿರುವ ಕಾರಣ ಈ ಪಂದ್ಯ ಸಾಕಷ್ಟು ರೋಚಕತೆ ಸೃಷ್ಟಿಸಿದ್ದು ಬೆಂಗಳೂರಿನಲ್ಲಿ ಹೈವೋಲ್ಟೇಜ್ ಕದನ ನಿರೀಕ್ಷಿಸಲಾಗಿದೆ.

ನಾಯಕ ರಿಷಭ್ ಬ್ಯಾಟಿಂಗ್‌ನಲ್ಲಿ ಲಯ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಶ್ರೇಯಸ್ ಅಯ್ಯರ್ ಕೂಡ ಅಸ್ಥಿರ ಪ್ರದರ್ಶನ ನೀಡುತ್ತಿದ್ದು ಲಯಕ್ಕೆ ಮರಳಬೇಕಿದೆ.

ನಾಯಕನ ಫಾರ್ಮ್ ದೊಡ್ಡ ಚಿಂತೆ ಮಾಡಿದೆ. ಮೂರನೇ ಪಂದ್ಯದಲ್ಲಿ ಗೆಲುವಿನ ಲಯ ಕಂಡುಕೊಂಡರೂ, ಭಾರತಕ್ಕೆ ರಿಷಭ್ ಪಂತ್ ಫಾರ್ಮ್ ತಲೆನೋವು ಆಗಿಯೇ ಉಳಿದುಕೊಂಡಿವೆ. ಮೊದಲ 3 ಪಂದ್ಯಗಳಲ್ಲಿ ಅವರು 29, 5, 6 ರನ್ ಗಳಿಸಿದ್ದು, ಶೀಘ್ರ ಬ್ಯಾಟಿಂಗ್ ಲಯಕ್ಕೆ ಮರಳಬೇಕಾದ ಒತ್ತಡ ಎದುರಿಸುತ್ತಿದ್ದಾರೆ. ಅದರಲ್ಲೂ ಇನಿಂಗ್ಸ್ನ ಕೊನೆಯ ಐದು ಓವರ್ ಗಳಲ್ಲಿ ಹೆಚ್ಚು ರನ್ ಗಳಿಸುವ ಅಗತ್ಯವಿದೆ.

ಅಭ್ಯಾಸದಲ್ಲಿ ನಿರತರಾಅಭ್ಯಾಸದಲ್ಲಿ ನಿರತರಾಗಿರುವ ಶ್ರೇಯಸ್ ಅಯ್ಯರ್.ಗಿರುವ ಶ್ರೇಯಸ್ ಅಯ್ಯರ್.

ರುತುರಾಜ್ ಗಾಯಕ್ವಾಡ್ ಮತ್ತು ಇಶಾನ್ ಕಿಶನ್ ಕಳೆದ ಪಂದ್ಯದಲ್ಲಿ ತೋರಿದ ನಿರ್ವಹಣೆ ಭಾರತದ ಬ್ಯಾಟಿಂಗ್ ವಿಭಾಗಕ್ಕೆ ಶಕ್ತಿ ತುಂಬಿದೆ. ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಹಾರ್ದಿಕ್, ಕಾರ್ತಿಕ್ ಇನ್ನಷ್ಟು ರನ್ ಗಳಿಸಬೇಕಾಗಿದೆ.

ಸತತ 2 ಸೋಲುಗಳ ಹೊರತಾಗಿಯೂ 3ನೇ ಪಂದ್ಯದಲ್ಲಿ ಬದಲಾವಣೆ ಇಲ್ಲದ ತಂಡವನ್ನು ಕಣಕ್ಕಿಳಿಸಿ ಯಶಸ್ಸು ಕಂಡ ಭಾರತ, ಈ ಬಾರಿ ಒಂದು ಬದಲಾವಣೆ ಮಾಡುವ ಸಾಧ್ಯತೆ ಇದೆ. ಆಡಿದ 3 ಪಂದ್ಯಗಳಲ್ಲೂ ವಿಕೆಟ್ ಖಾತೆ ತೆರೆಯಲು ವಿಫಲರಾಗಿರುವ ವೇಗಿ ಆವೇಶ್ ಖಾನ್ ಬದಲಿಗೆ ಅರ್ಷದೀಪ್ ಸಿಂಗ್ ಅವಕಾಶ ಗಿಟ್ಟಿಸಿಕೊಳ್ಳಬಹುದು.

ಭುವನೇಶ್ವರ್ ಕುಮಾರ್ ಪವರ್ ಪ್ಲೇನಲ್ಲಿ ಘಾತವಗಿ ಗೋಚರಿಸಿದ್ದಾರೆ.

ಚಹಲ್ ಮತ್ತು ಅಕ್ಷರ್ ಪಟೇಲ್ ಕಳೆದ ಪಂದ್ಯದಲ್ಲಿ ಸುಧಾರಿತ ಬೌಲಿಂಗ್ ಪ್ರದರ್ಶಿಸಿದ್ದರು. ಇತ್ತ ಆಫ್ರಿಕಾ ಬೌಲಿಂಗ್ ಪಡೆಯೂ ಉತ್ತಮವಾಗಿವೆ.
Published On - 9:06 am, Tue, 14 June 22









