ಹಾವೇರಿಯಲ್ಲಿ ಭರ್ಜರಿ ಹೋರಿ ಹಬ್ಬ ಆಯೋಜನೆ; ಇಲ್ಲಿದೆ ಅದರ ಝಲಕ್
TV9 Web | Updated By: ಕಿರಣ್ ಹನುಮಂತ್ ಮಾದಾರ್
Updated on:
Nov 14, 2023 | 6:32 PM
ಅಲ್ಲಿ ಸಾವಿರಾರು ಜನರ ದಂಡೆ ಜಮಾಯಿಸಿತ್ತು. ನೆರೆದಿದ್ದ ಜನರ ನಡುವೆ ಭರ್ಜರಿಯಾಗಿ ಅಲಂಕಾರಗೊಂಡಿದ್ದ ಹೋರಿಗಳು ಶರವೇಗದ ಓಟ ಓಡುತ್ತಿದ್ದವು. ಮಿಂಚಿನ ಓಟ ಓಡುತ್ತಿದ್ದ ಹೋರಿಗಳನ್ನು ಹಿಡಿದು ಗೆಲುವಿನ ನಗೆ ಬೀರಲು ಪೈಲ್ವಾನರು ಭರ್ಜರಿ ಕಸರತ್ತು ಮಾಡುತ್ತಿದ್ದರು. ಹೋರಿಗಳು ಮಾತ್ರ ಯಾರ ಕೈಗೂ ಸಿಗದಂತೆ ಶರವೇಗದ ಓಟ ಓಡಿ ನೆರೆದಿದ್ದ ಜನರಿಗೆ ಸಖತ್ ಖುಷಿ ನೀಡಿದವು.
1 / 11
ಬಲೂನ್, ಜೂಲಾ, ಕೊಬ್ಬರಿ ಹಾರಗಳಿಂದ ಅಲಂಕಾರಗೊಂಡಿರೋ ಹೋರಿಗಳು. ಕಿಕ್ಕಿರಿದು ಸೇರಿರುವ ಜನರ ದಂಡು. ನೆರೆದಿದ್ದ ಸಾವಿರಾರು ಜನರ ನಡುವೆ ಶರವೇಗದ ಓಟ ಓಡುತ್ತಿರುವ ಹೋರಿಗಳು
2 / 11
ಹೌದು, ಹಾವೇರಿ ನಗರದ ಮಾರ್ಕೆಟನ್ಲ್ಲಿರುವ ವೀರಭದ್ರೇಶ್ವರ ದೇವಸ್ಥಾನದ ರಸ್ತೆಯಲ್ಲಿ ಕಂಡುಬಂದ ದೃಶ್ಯಗಳಿವು. ಹಾವೇರಿ ನಗರದ ವೀರಭದ್ರೇಶ್ವರ ದೇವಸ್ಥಾನದ ಕಮೀಟಿ ವತಿಯಿಂದ ಪ್ರತಿವರ್ಷ ದೀಪಾವಳಿ ಹಬ್ಬ ಬಲಿಪಾಡ್ಯಮಿ ದಿನದಂದು ಹೋರಿ ಓಡಿಸುವ ಸ್ಪರ್ಧೆ ಆಯೋಜಿಸಿದ್ದರು.
3 / 11
ಇಂದಿನಂದ ಜಿಲ್ಲೆಯ ಹಲವು ಕೆಗಳಲ್ಲಿ ಹೋರಿ ಬೇದರಿಸುವ ಸ್ಪರ್ಧೆಗಳಿಗೆ ಚಾಲನೆ ಸಿಕ್ಕಿದ್ದು, ಸ್ಪರ್ಧೆಗೆ ಹಾವೇರಿ ಜಿಲ್ಲೆಯ ವಿವಿಧ ತಾಲೂಕಿನಿಂದ ಇನ್ನೂರಕ್ಕೂ ಅಧಿಕ ಹೋರಿಗಳು ಬಂದಿದ್ದವು.
4 / 11
ಕೊಬ್ಬರಿ ಹೋರಿ, ಗಗ್ಗರಿ ಹೋರಿ, ಯಾಕ್ಷನ್ ಹೋರಿ, ಪೀಪಿ ಹೋರಿ ಹೀಗೆ ವಿವಿಧ ರೀತಿಯಲ್ಲಿ ಹೋರಿಗಳನ್ನು ವಿಂಗಡಿಸಿ ಹೋರಿಗಳನ್ನು ಓಡಿಸಲಾಯಿತು. ಆಯಾ ಹೋರಿ ಮಾಲೀಕರು ಹಾಗೂ ಹೋರಿ ಅಭಿಮಾನಿಗಳು ಸಂಘಟಕರು ಹೋರಿಯ ಹೆಸರು ಕೂಗಿ ಕರಿತಿದ್ದಂತೆ ಹೋರಿಯನ್ನು ಅಖಾಡಕ್ಕೆ ತಂದು ಬಿಡುತ್ತಿದ್ದರು.
5 / 11
ಅಖಾಡ ಪ್ರವೇಶ ಮಾಡುತ್ತಿದ್ದಂತೆ ಹೋರಿಗಳು, ಯಾರ ಕೈಗೂ ಸಿಗದಂತೆ ಧೂಳೆಬ್ಬಿಸಿಕೊಂಡು ಶರವೇಗದ ಓಟ ಓಡಿ ಗೆಲುವಿನ ದಡ ಮುಟ್ಟುತ್ತಿದ್ದವು.
6 / 11
ಮುಗಿಲೆತ್ತರಕ್ಕೆ ಬಲೂನ್ಗಳನ್ನು ಕಟ್ಟಿದ ಪೀಪಿ ಹೋರಿಗಳು, ಕೊಬ್ಬರಿಯಿಂದ ತಯಾರಿಸಿದ ಕೊಬ್ಬರಿ ಹೋರಿಗಳು, ಆ್ಯಕ್ಷನ್ ಮಾಡುತ್ತಾ ಓಡುವ ಹೋರಿಗಳು, ಹೀಗೆ ವಿವಿಧ ಹೆಸರಿನಿಂದ ಕರೆಯುವ ಹೋರಿಗಳು ಭರ್ಜರಿಯಾಗಿ ಓಡಿ ನೆರೆದಿದ್ದ ಜನರಿಗೆ ಸಖತ್ ಮನರಂಜನೆ ಒದಗಿಸಿದವು.
7 / 11
ಹೋರಿಗಳು ಅಖಾಡಕ್ಕೆ ಬಂದು ಮಿಂಚಿನ ಓಟ ಓಡಲು ಆರಂಭ ಮಾಡುತ್ತಿದ್ದಂತೆ ಅಖಾಡದಲ್ಲಿ ನಿಂತಿದ್ದ ಪೈಲ್ವಾನರು ಓಡುವ ಹೋರಿಗಳನ್ನು ಹಿಡಿದು ಗೆಲುವು ಸಾಧಿಸಲು ಇನ್ನಿಲ್ಲದ ಸರ್ಕಸ್ ಮಾಡುತ್ತಿದ್ದರು. ಪೈಲ್ವಾನರು ಎದುರಾಗುತ್ತಿದ್ದಂತೆ ದಿಟ್ಟಿಸಿ ನೋಡುತ್ತಿದ್ದ ಹೋರಿಗಳು ನನ್ ತಂಟೆಗೆ ಬರಬೇಡ ಎಂದು ಪೈಲ್ವಾನರ ಕೈಗೆ ಸಿಗದಂತೆ ಶರವೇಗದಲ್ಲಿ ಓಡುತ್ತಿದ್ದವು.
8 / 11
ಕೆಲವರು ಓಡುವ ಹೋರಿಯನ್ನು ತಡೆದು ನಿಲ್ಲಿಸಬೇಕು ಎಂದು ಎದ್ದೋ ಬಿದ್ದೋ ಪ್ರಯತ್ನ ಮಾಡುತ್ತಿದ್ದರು. ಹೋರಿಗಳು ಮಿಂಚಿನ ಓಟ ಓಡುತ್ತಿದ್ದಂತೆ ಅಖಾಡದ ಅಕ್ಕಪಕ್ಕದಲ್ಲಿ ಜಮಾಯಿಸಿದ್ದ ಹೋರಿ ಹಬ್ಬದ ಅಭಿಮಾನಿಗಳು ಕೇಕೆ, ಸಿಳ್ಳೆ, ಚಪ್ಪಾಳೆಗಳ ಮೂಲಕ ಹೋರಿಗಳಲ್ಲಿ ಮತ್ತಷ್ಟು ಹುಮ್ಮಸ್ಸು ನೀಡುತ್ತಿದ್ದರು.
9 / 11
ಶರವೇಗದ ಓಟ ಓಡಿ ಗೆಲುವಿನ ದಡ ಮುಟ್ಟುತ್ತಿದ್ದಂತೆ ಆಯಾ ಹೋರಿ ಮಾಲೀಕರು ಹಾಗೂ ಹೋರಿ ಅಭಿಮಾನಿಗಳು ಭರ್ಜರಿ ಸಂತಸ ಆಚರಿಸುತ್ತಿದ್ದರು. ಹೋರಿಗಳ ಮಾಲೀಕರು ಹೋರಿಗಳಿಗೆ ಮೊಟ್ಟೆ, ಕಾಳು, ಹಿಂಡಿ, ಹೊಟ್ಟು ಹೀಗೆ ಪೌಷ್ಟಿಕಾಂಶ ಭರಿತ ಪದಾರ್ಥಗಳನ್ನು ತಿನ್ನಿಸಿ ಹೋರಿಗಳನ್ನು ಕಟ್ ಮಸ್ತಾಗಿ ತಯಾರು ಮಾಡಿ ಹೋರಿ ಓಟದ ಅಖಾಡಕ್ಕೆ ತಂದಿದ್ದರು.
10 / 11
ಬೆಳಿಗ್ಗೆಯಿಂದ ಸಂಜೆಯವರೆಗೂ ಹೋರಿ ಹಬ್ಬ ಭರ್ಜರಿಯಾಗಿ ನಡೀತು. ಬೇರೆ ಬೇರೆ ತಾಲೂಕು ಸೇರಿದಂತೆ ಗ್ರಾಮಗಳಿಂದ ಆಗಮಿಸಿದ್ದ ಹೋರಿಗಳು ಒಂದಕ್ಕಿಂತ ಒಂದು ಚೆಂದ ಎನ್ನುವ ಹಾಗೆ ಅಖಾಡದಲ್ಲಿ ಧೂಳೆಬ್ಬಿಸಿಕೊಂಡು ಓಡಿ, ನೆರೆದಿದ್ದ ಜನರನ್ನು ಖುಷಿ ಪಡಿಸಿದವು. ಹೋರಿ ಮಾಲೀಕರು ಹಾಗೂ ಹೋರಿ ಅಭಿಮಾನಿಗಳಂತೂ ಹೋರಿಗಳ ಮಿಂಚಿನ ಓಟವನ್ನು ಕಣ್ತುಂಬಿಕೊಂಡು ಸಖತ್ ಎಂಜಾಯ್ ಮಾಡಿದರು.
11 / 11
ಹೋರಿಗಳು ಸಹ ನೆರೆದಿದ್ದ ಜನರ ನಿರೀಕ್ಷೆ ಹುಸಿ ಮಾಡದಂತೆ ಯಾರ ಕೈಗೂ ಸಿಗದಂತೆ ಶರವೇಗದ ಓಟ ಓಡಿ ಹೋರಿ ಓಡಿಸುವ ಹಬ್ಬಕ್ಕೆ ಕಳೆ ತಂದವು. ಹೋರಿ ಓಡಿಸುವ ವೇಳೆ ಯಾವುದೇ ರೀತಿಯ ಅನಾಹುತಗಳು ಸಂಭವಿಸದಂತೆ ಸಂಘಟಕರು ಹೋರಿ ಹಬ್ಬವನ್ನು ಆಯೋಜಿಸಿದ್ದರು. ಜನರಂತೂ ಹೋರಿ ಓಟವನ್ನು ನೋಡಿ ಕಣ್ತುಂಬಿಕೊಂಡು ಸಖತ್ ಖುಷಿ ಅನುಭವಿಸಿದರು.