‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಭವ್ಯಾ ಗೌಡ ಅವರು ಕಳೆದ ವಾರದ ನಾಮಿನೇಷನ್ನಿಂದ ಬಚಾವ್ ಆಗಿದ್ದಾರೆ. ಅವರು ಕ್ಯಾಪ್ಟನ್ ಕೂಡ ಆಗಿರುವುದರಿಂದ ನಾಮಿನೇಷನ್ನಿಂದ ಅವರು ಬಚಾವ್ ಆಗಿದ್ದಾರೆ. ಅವರ ಫನ್ನಿ ಮೂಮೆಂಟ್ ಈಗ ವೈರಲ್ ಆಗಿದೆ.
ವೀಕೆಂಡ್ನಲ್ಲಿ ಶೂಟಿಂಗ್ ಮಧ್ಯೆ ಗ್ಯಾಪ್ ನೀಡಲಾಗುತ್ತದೆ. ಈ ವೇಳೆ ಸ್ಪರ್ಧಿಗಳು ರಿಲ್ಯಾಕ್ಸ್ ಮಾಡಬಹುದು. ಅದೇ ರೀತಿ ಭವ್ಯಾ ಗೌಡ ಅವರು ನಿದ್ದೆ ಮಾಡುತ್ತಾ ಇದ್ದರು. ಇದನ್ನು ವೇದಿಕೆ ಮೇಲಿಂದ ಸುದೀಪ್ ಅವರು ನೋಡಿದ್ದಾರೆ.
ಸುದೀಪ್ಗೆ ಮಾತ್ರ ಡಿಸ್ಪ್ಲೇನಲ್ಲಿ ಎಲ್ಲವೂ ಕಾಣುತ್ತಾ ಇತ್ತು. ಆದರೆ, ಸ್ಪರ್ಧಿಗಳಿಗೆ ಸುದೀಪ್ ಅವರು ಕಾಣಿಸುತ್ತಾ ಇರಲಿಲ್ಲ. ಹೀಗಾಗಿ, ಸುದೀಪ್ ಅವರು ಯಾವ ರೀತಿಯ ರಿಯಾಕ್ಷನ್ ನೀಡುತ್ತಿದ್ದಾರೆ ಎಂಬುದು ಮನೆಯವರಿಗೆ ಗೊತ್ತಾಗುತ್ತಾ ಇರಲಿಲ್ಲ.
ಭವ್ಯಾ ಗೌಡ ಅವರು ಸೋಫಾ ಮೇಲೆ ಕುಳಿತು ನಿದ್ದೆ ಮಾಡುತ್ತಾ ಇದ್ದರು. ಇದನ್ನು ಸುದೀಪ್ ನೋಡಿ ನಕ್ಕಿದ್ದಾರೆ. ಅವರಿಗೆ ನಗು ತಡೆದುಕೊಳ್ಳಲು ಆಗಲೇ ಇಲ್ಲ.
ಆ ಬಳಿಕ ಸ್ಕ್ರೀನ್ ಬಳಿ ಹೋದ ಸುದೀಪ್ ಅವರು ‘ಭವ್ಯಾ, ಎದ್ದೇಳು ಭವ್ಯಾ’ ಎಂದು ಕರೆದಿದ್ದಾರೆ. ಭವ್ಯಾ ಅವರಿಗೆ ಸುದೀಪ್ ಕಾಣಿಸುತ್ತಾ ಇರಲಿಲ್ಲ. ಈ ಕಾರಣಕ್ಕೆ ಭವ್ಯಾ ಯಾವುದೇ ರಿಯಾಕ್ಷನ್ ನೀಡಿಲ್ಲ.
ಇನ್ನು, ತ್ರಿವಿಕ್ರಂ ಕೂಡ ನಿದ್ದೆ ಮಾಡುತ್ತಾ ಇದ್ದರು. ಅವರು ಸುರೇಶ್ ಅವರ ಭುಜದ ಮೇಲೆ ಮಲಗಿ ನಿದ್ರಿಸಿದ್ದರು. ಇದನ್ನು ನೋಡಿಯೂ ಸುದೀಪ್ ನಕ್ಕಿದ್ದಾರೆ.
‘ತ್ರಿವಿಕ್ರಂ ಅಲ್ಲಿ ಮಲಗಿದ್ದಾರೆ, ಭವ್ಯಾ ಈ ಕಡೆ ಮಲಗಿದ್ದಾರೆ’ ಎಂದು ಸುದೀಪ್ ಅವರು ಹೇಳಿದರು. ಇದು ಸಖತ್ ಫನ್ ಆಗಿತ್ತು.