Mega Star Chiranjeevi: ಪತ್ನಿ ಜೊತೆ ಅಮೆರಿಕಕ್ಕೆ ತೆರಳಿದ ಚಿರಂಜೀವಿ; ಐಷಾರಾಮಿ ವಿಮಾನದೊಳಗೆ ತೆಗೆದ ಫೋಟೋಗಳು ಹೇಗಿವೆ ನೋಡಿ..

|

Updated on: Jul 08, 2023 | 3:06 PM

Mega Star Chiranjeevi Flight: ಸಿನಿಮಾ ಕೆಲಸಗಳಿಗೆ ಬ್ರೇಕ್​ ನೀಡಿರುವ ಚಿರಂಜೀವಿ ಅವರು ಅಮೆರಿಕಕ್ಕೆ ತೆರಳಿದ್ದಾರೆ. ಐಷಾರಾಮಿ ವಿಮಾನದ ಮೂಲಕ ಅವರು ಪ್ರಯಾಣ ಮಾಡಿದ್ದಾರೆ.

1 / 7
ನಟ ‘ಮೆಗಾ ಸ್ಟಾರ್​’ ಚಿರಂಜೀವಿ ಅವರು ಸಖತ್​ ಖುಷಿಯಾಗಿದ್ದಾರೆ. ಕೆಲವೇ ದಿನಗಳ ಹಿಂದೆ ಅವರ ಮಗ ರಾಮ್​ ಚರಣ್​ ಮತ್ತು ಸೊಸೆ ನಿಹಾರಿಕಾಗೆ ಹೆಣ್ಣು ಮಗು ಜನಿಸಿತು. ಆ ಸಂಭ್ರಮದ ನಡುವೆಯೇ ಅವರು ವಿದೇಶಕ್ಕೆ ತೆರಳಿದ್ದಾರೆ.

2 / 7
ಸಿನಿಮಾ ಕೆಲಸಗಳಿಗೆ ಬ್ರೇಕ್​ ನೀಡಿರುವ ಚಿರಂಜೀವಿ ಅವರು ಅಮೆರಿಕಕ್ಕೆ ತೆರಳಿದ್ದಾರೆ. ಅಲ್ಲಿ ರಜೆಯನ್ನು ಎಂಜಾಯ್​ ಮಾಡುತ್ತಿದ್ದಾರೆ. ಅದಕ್ಕಾಗಿ ಐಷಾರಾಮಿ ವಿಮಾನದ ಮೂಲಕ ಅವರು ಪ್ರಯಾಣ ಮಾಡಿದ್ದಾರೆ.

3 / 7
ಟಾಲಿವುಡ್​ನಲ್ಲಿ ಚಿರಂಜೀವಿ ಅವರಿಗೆ ಸಖತ್​ ಬೇಡಿಕೆ ಇದೆ. ಪ್ರತಿ ಸಿನಿಮಾಗೆ ಅವರು ಬಹುಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಅದಕ್ಕೆ ತಕ್ಕಂತೆಯೇ ಅವರ ಲೈಫ್​ ಸ್ಟೈಲ್​ ಇದೆ. ಈ ಫೋಟೋಗಳೇ ಅದಕ್ಕೆ ಸಾಕ್ಷಿ.

4 / 7
ಚಿರಂಜೀವಿ ಅವರ ಜೊತೆ ಪತ್ನಿ ಸುರೇಖಾ ಕೂಡ ಸಾಥ್​ ನೀಡಿದ್ದಾರೆ. ಇಬ್ಬರೂ ಜೊತೆಯಾಗಿ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಈ ಐಷಾರಾಮಿ ವಿಮಾನದ ಒಳಗೆ ಅವರು ಕೆಲವು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ.

5 / 7
ಸೋಶಿಯಲ್​ ಮೀಡಿಯಾದಲ್ಲಿ ಚಿರಂಜೀವಿ ಅವರು ಆ್ಯಕ್ಟೀವ್​ ಆಗಿದ್ದಾರೆ. ಆಗಾಗ ಅವರು ತಮ್ಮ ಬಗ್ಗೆ ಅಪ್​ಡೇಟ್​ ನೀಡುತ್ತಾ ಇರುತ್ತಾರೆ. ವಿಮಾನದಲ್ಲಿ ಕ್ಲಿಕ್ಕಿಸಿದ ಈ ಫೋಟೋಗಳನ್ನು ಅವರು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

6 / 7
ಚಿರಂಜೀವಿ ಅವರು ಪಕ್ಕಾ ಫ್ಯಾಮಿಲಿ ಮ್ಯಾನ್​. ಅವರು ಕುಟುಂಬದ ಸದಸ್ಯರ ಜೊತೆ ಹೆಚ್ಚು ಸಮಯ ಕಳೆಯಲು ಇಷ್ಟ ಪಡುತ್ತಾರೆ. ಸಿನಿಮಾ ಕೆಲಸಗಳ ಬಿಡುವಿನಲ್ಲಿ ಫ್ಯಾಮಿಲಿಗೆ ಅವರು ಟೈಮ್​ ನೀಡುತ್ತಾರೆ.

7 / 7
‘ಮೆಗಾ ಸ್ಟಾರ್​’ ಚಿರಂಜೀವಿ ಅವರಿಗೆ ಈಗ 67 ವರ್ಷ ವಯಸ್ಸು. ಈಗಲೂ ಅವರು ಟಾಲಿವುಡ್​ನಲ್ಲಿ ಹೀರೋ ಆಗಿ ಮಿಂಚುತ್ತಿದ್ದಾರೆ. ಅವರು ನಟಿಸಿರುವ ‘ಭೋಲಾ ಶಂಕರ್​’ ಸಿನಿಮಾ ಆಗಸ್ಟ್​ 11ರಂದು ಬಿಡುಗಡೆ ಆಗಲಿದೆ.