Kannada News Photo gallery Bidar: Agneepath recruitment continues for 7th day; A crowd of young people even in the bitter cold
Bidar: 7ನೇ ದಿನಕ್ಕೆ ಕಾಲಿಟ್ಟ ಅಗ್ನಿಪಥ್ ನೇಮಕಾತಿ ರ್‍ಯಾಲಿ ; ಕೊರೆಯುವ ಚಳಿಯಲ್ಲೂ ಯುವಕರ ದಂಡು
TV9 Web | Updated By: ಕಿರಣ್ ಹನುಮಂತ್ ಮಾದಾರ್
Updated on:
Dec 12, 2022 | 7:20 AM
ಬೀದರ್: 7ನೇ ದಿನಕ್ಕೆ ಕಾಲಿಟ್ಟ ಅಗ್ನಿಪಥ್ ನೇಮಕಾತಿ ಱಲಿ-ಜಿಲ್ಲಾ ಕ್ರೀಡಾಂಗಣದಲ್ಲಿ ಡಿಸೆಂಬರ್ 5ರಿಂದ ನಡೆಯುತ್ತಿರುವ ನೇಮಕಾತಿ ಱಲಿಯಲ್ಲಿ ಪ್ರತಿ ದಿನ ಸಾವಿರಕ್ಕೂ ಹೆಚ್ಚು ಯುವಕರ ಭಾಗವಹಿಸುತ್ತಿದ್ದಾರೆ.
1 / 6
ಬೀದರ್ ಜಿಲ್ಲಾ ಕ್ರೀಡಾಂಗಣದಲ್ಲಿ ಡಿ.5ರಿಂದ ನಡೆಯುತ್ತಿರುವ ಅಗ್ನಿಪಥ್ ನೇಮಕಾತಿ ರ್‍ಯಾಲಿ 7ನೇ ದಿನಕ್ಕೆ ಕಾಲಿಟ್ಟಿದೆ.
2 / 6
ಪ್ರತಿ ದಿನ ಸಾವಿರಕ್ಕೂ ಹೆಚ್ಚು ಯುವಕರು ನೇಮಕಾತಿ ರ್‍ಯಾಲಿಯಲ್ಲಿ ಭಾಗಿಯಾಗುತ್ತಿದ್ದು, ರಾತ್ರಿಯಿಡೀ ಚಳಿ ನಡುವೆ ಸರತಿ ಸಾಲಿನಲ್ಲಿ ಯುವಕರ ದಂಡು ನಿಂತಿತ್ತು.
3 / 6
ರಾಜ್ಯದ ಬೆಳಗಾವಿ, ರಾಯಚೂರು, ಕೊಪ್ಪಳ, ವಿಜಯಪುರ, ಕಲಬುರಗಿ, ಯಾದಗಿರಿ ಜಿಲ್ಲೆಯ ಯುವಕರಿಗೆ ಅಗ್ನಿಪಥ್ ನೇಮಕಾತಿಯಲ್ಲಿ ಅವಕಾಶ ಕಲ್ಪಿಸಲಾಗಿತ್ತು.
4 / 6
ದಾಖಲೆ ಚಳಿಯ ನಡುವೆಯೂ ಸರತಿ ಸಾಲಿನಲ್ಲಿ ನಿಂತುಕೊಂಡು ಯುವಕರು, ಸೇನೆಗೆ ಸೇರಬೇಕೆಂಬ ಉತ್ಸಾಹದಲ್ಲಿ ರಾತ್ರಿಯಿಡಿ ಕೊರೆಯುವ ಚಳಿಯ ಮಧ್ಯೆ ಸರತಿ ಸಾಲಿನಲ್ಲಿ ನಿಂತುಕೊಂಡಿದ್ದರು.
5 / 6
ಇನ್ನು ಪ್ರತಿ ದಿನ ಸಾವಿರಾರು ಯುವಕರು ಅಗ್ನಿಪಥ್ ನೇಮಕಾತಿಯಲ್ಲಿ ಭಾಗವಹಿಸುತ್ತಿದ್ದರು. ಮುನ್ನೂರರ ಆಸುಪಾಸಿನಲ್ಲಿನ ಯುವಕರು ಅಂತಿಮ ಹಂತದ ಪರೀಕ್ಷೆಗೆ ಆಯ್ಕೆಯಾಗಿದ್ದಾರೆ.
6 / 6
ರಾತ್ರಿಯಿಡೀ ಚಳಿಯಲ್ಲಿ ಸೇನೆಗೆ ಸೇರಬೇಕೆಂಬ ಹಾತೊರೆತ ಆ ಯುವಕರಲ್ಲಿ ಕಾಣುತ್ತಿತ್ತು, ಎದ್ದು ಬಿದ್ದು ಗುರಿಯ ಕಡೆಗೆ ಓಡುತ್ತಿದ್ದರು.
Published On - 7:15 am, Mon, 12 December 22