Kannada News Photo gallery TKannada News | bidar dargah has no caste votes, By tying the photo of unmarried people to the trees here, marriage is lucky
ಈ ದರ್ಗಾಕ್ಕೆ ಜಾತಿ ಮತಗಳ ಹಂಗಿಲ್ಲ; ಮದುವೆಯಾಗದವರ ಫೋಟೊವನ್ನು ಇಲ್ಲಿನ ಗಿಡಗಳಿಗೆ ಕಟ್ಟುವುದರಿಂದ ಮದುವೆ ಭಾಗ್ಯ; ಎಲ್ಲಿ ಅಂತೀರಾ? ಇಲ್ಲಿದೆ ನೋಡಿ
ಆ ದರ್ಗಾಕ್ಕೆ ಜಾತಿ ಮತಗಳ ಹಂಗಿಲ್ಲ. ಅದು ಸರ್ವಧರ್ಮೀಯರಿಗೂ ನೆಚ್ಚಿನ ತಾಣ. ಆ ದರ್ಗಾಕ್ಕೆ ನಡೆದುಕೊಂಡರೆ ಸಮಸ್ಯೆಗಳೆಲ್ಲ ಪರಿಹಾರವಾಗುತ್ತವಂತೆ. ಗಡೀ ಜಿಲ್ಲೆಯ ಸಣ್ಣ ಗ್ರಾಮವೊಂದರಲ್ಲಿರುವ ಆ ಮೌಲಾ ಬಾಬಾ ದರ್ಗಾಕ್ಕೆ ಇದೀಗ ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು, ಆಂಧ್ರಪ್ರದೇಶದಿಂದಲೂ ಸಹ ಭಕ್ತರಿದ್ದಾರೆ.
1 / 10
ಆವರಣದ ತುಂಬೆಲ್ಲಾ ಜನರ ದಂಡು. ವಿಚಿತ್ರವಾಗಿ ಕೂಗುತ್ತಾ ಗದ್ದುಗೆ ಸುತ್ತು ಹಾಕುತ್ತಿರುವ ಭಕ್ತರು. ನಿಂಬೆ ಹಣ್ಣಿನ ಗಿಡದ ಕಾಂಡಕ್ಕೆ ಮೊಳೆ ಹೊಡೆದು ಹಾಕಲಾದ ಫೋಟೊಗಳು. ವಿಚಿತ್ರವಾಗಿ ಕಟ್ಟಲಾಗಿರುವ ಗೊಂಬೆಗಳು. ನೋಡಲು ವಿಚಿತ್ರವಾಗಿ ಕಾಣುವ ಇವೆಲ್ಲಾ ದೃಶ್ಯಗಳು ಕಂಡುಬಂದಿದ್ದು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಮರೂರು ಗ್ರಾಮದಲ್ಲಿ.
2 / 10
ಕಳೆದ 45 ವರ್ಷಗಳ ಹಿಂದೆ ಮೌಲಾ ಬಾಬಾ ಎಂಬ ಸೂಫಿಯೊಬ್ಬರಿಂದ ಸ್ಥಾಪಿತವಾದ ಈ ದರ್ಗಾ ಇದೀಗ ಸುತ್ತಮುತ್ತಲ ಗ್ರಾಮಸ್ಥರ ಸಮಸ್ಯೆ ಪರಿಹರಿಸುವ ದೈವವಾಗಿದೆ. ಪ್ರತಿ ಅಮವಾಸ್ಯೆ ದಿನದಂದು ಈ ಗ್ರಾಮದಲ್ಲಿ ಜನಜಾತ್ರೆಯೇ ನೆರೆದಿರುತ್ತೆ. ಅಂದು ಇಂಥ ದೃಶ್ಯಗಳು ಕಾಮನ್.
3 / 10
ಇಲ್ಲಿಗೆ ಬರುವ ಕೆಲ ಯುವತಿಯರು, ಮಹಿಳೆಯರು ಮತ್ತು ಮಕ್ಕಳು ವಿಚಿತ್ರವಾಗಿ ವರ್ತಿಸುತ್ತಾರೆ. ಮೈಮೇಲೆ ಏನೋ ಬಂದಂತೆ ಯರ್ರಾಬಿರ್ರಿಯಾಗಿ ಉರುಳಾಡುತ್ತಾರೆ. ಮತ್ತೆ ಕೆಲವರಂತೂ ಸ್ಥಿಮಿತ ಕಳೆದುಕೊಂಡು ಮನಸ್ಸಿಗೆ ಬಂದ ಹಾಗೆ ಕುಣಿಯುತ್ತಾರೆ.
4 / 10
ಅಂದ ಹಾಗೆ ಇಲ್ಲಿ ಮಾನಸಿಕ ತುಮುಲ, ನರ ದೌರ್ಬಲ್ಯ ಹೀಗೆ ನಾನಾ ರೀತಿಯ ಸಮಸ್ಯೆಗಳಿಂದ ಬಳಲುತ್ತಿರುವವರ ಪಾಲಿಗೆ ಈ ದರ್ಗಾ ಪವಿತ್ರ ತಾಣ. ಹೀಗಾಗಿ ಮೌಲಾ ಬಾಬಾ ದರ್ಗಾಕ್ಕೆ ನಡೆದುಕೊಂಡರೆ ಎಂತಹ ಸಮಸ್ಯೆಯೇ ಇರಲಿ ಪರಿವಾಗುತ್ತವಂತೆ.
5 / 10
ಇನ್ನು ಬೀದರ್ ಜಿಲ್ಲೆಯ ಸಣ್ಣ ಗ್ರಾಮ ಮರೂರಿನಲ್ಲಿರುವ ಮೌಲಾ ಬಾಬಾ ದರ್ಗಾಕ್ಕೆ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ, ಕರ್ನಾಟಕದ ಎಲ್ಲೆಡೆಯಿಂದಲೂ ಭಕ್ತರು ಆಗಮಿಸುತ್ತಾರಂತೆ.
6 / 10
ಈ ದರ್ಗಾಕ್ಕೆ ಭೂತ ಹಿಡಿದವರನ್ನು ಕರೆತರುವುದುಂಟು. ಆ ತರಹದ ಸಮಸ್ಯೆಗಳಿದ್ದವರು ವಿಚಿತ್ರವಾಗಿ ಆಡಲು ಶುರು ಮಾಡುತ್ತಾರೆ. ಅಂಥವರನ್ನು ಕರೆತಂದು ದರ್ಗಾದ ಸುತ್ತ ಪ್ರದಕ್ಷಿಣೆ ಹಾಕಿಸುವುದರೊಳಗಾಗಿ ಅಂಥವರು ವಿಚಿತ್ರವಾಗಿ ಕೂಗಾಡುತ್ತಾ ಪ್ರಾಣಿಗಳಂತೆ ಚೀರಾಡತೊಡಗುತ್ತಾರೆ.
7 / 10
ದರ್ಗಾ ಮುಂದಿನ ಧ್ವಜ ಸ್ತಂಭಕ್ಕೆ ಬೆನ್ನು ಹತ್ತುವಂತೆ ಸುತ್ತು ಹಾಕುವುದರಿಂದ ಭಾನಾಮತಿ, ಮಾಟ-ಮಂತ್ರಗಳ ಪ್ರಭಾವ ತಟ್ಟುವುದಿಲ್ಲ. ಮೈಮೇಲೆ ದೆವ್ವ ಬರುವುದು, ಮಾಟಮಂತ್ರ, ಭಾನಾಮತಿ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಇಲ್ಲಿ ಪರಿಹಾರ ಸಿಗುತ್ತದೆಯಂತೆ. ಜೊತೆಗೆ ಇಷ್ಟಾರ್ಥಸಿದ್ಧಿಯಾಗುವ ಪ್ರತೀತಿಯೂ ಇದೆ.
8 / 10
ಇನ್ನು ಮದುವೆಯಾಗದವರ ಫೋಟೊವನ್ನು ದರ್ಗಾಕ್ಕೆ ಬೇಡಿಕೊಂಡು ಆವರಣದಲ್ಲಿರುವ ಗಿಡಗಳಿಗೆ ಮೊಳೆಯಿಂದ ಹೊಡೆಯುತ್ತಾರೆ. ಹೀಗೆ ಮಾಡುವುದರಿಂದ ಅವರಿಗಿರುವ ಸಮಸ್ಯೆಗಳು ಪರಿಹಾರವಾಗಿ, ಶೀಘ್ರವೇ ಮದುವೆಯಾಗುತ್ತದೆ ಎಂಬ ನಂಬಿಕೆ ದರ್ಗಾಕ್ಕೆ ಬರುವ ಭಕ್ತರದ್ದು.
9 / 10
ಮಾಟ ಮಂತ್ರಗಳ ಪ್ರಭಾವ ತಟ್ಟದಿರಲು ಕರಿಗೊಂಬೆಗಳನ್ನು ತಂದು ಆವರಣದಲ್ಲಿರುವ ಗಿಡಗಳಿಗೆ ಕಟ್ಟುತ್ತಾರೆ. ಹೀಗೆ ಮಾಡುವುದರಿಂದ ಅವರಿಗೆ ಯಾವುದೇ ಸಮಸ್ಯೆಗಳು ಉದ್ಭವಿಸುವುದಿಲ್ಲ ಎನ್ನುತ್ತಾರೆ ಇಲ್ಲಿಗೆ ಬರುವ ಭಕ್ತರು.
10 / 10
ವಿಜ್ಞಾನ ಸಾಕಷ್ಟು ಮುಂದುವರೆದಿರುವ ಈ ದಿನಮಾನಗಳಲ್ಲಿ ಮೌಲಾ ಬಾಬಾ ದರ್ಗಾದಂತಹ ಸಂಗತಿಗಳು ಜಿಜ್ಞಾಸೆಗೆ ಕಾರಣವಾಗುತ್ತವೆ. ಜನ ಮರುಳೋ ಜಾತ್ರೆ ಮರುಳೋ ಎಂಬ ಮಾತಿನ ನೆಲೆಗಟ್ಟಿನಲ್ಲಿ ನೋಡಿದರೂ, ದರ್ಗಾಕ್ಕೆ ಬರಲು ಶುರು ಮಾಡಿದ ಮೇಲೆ ಸಮಸ್ಯೆಗಳೆಲ್ಲ ತೀರಿವಿಯಂತೆ ಆದರೆ ಇದು ಸುಳ್ಳೋ ನಿಜವೋ ಗೊತ್ತಿಲ್ಲ.