ಗ್ರೇಟರ್ ರಾಜಾಸೀಟ್ ಯೋಜನೆಯಡಿ ಪ್ರವಾಸೀತಾಣವನ್ನು ಊಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದಕ್ಕಾಗಿ 4.5 ಕೋಟಿ ರೂ ವೆಚ್ಚ ಮಾಡಲಾಗುತ್ತಿದೆ. ಬೆಟ್ಟದ ತುದಿಯಲ್ಲಿ ಓಡಾಡಲು ಟ್ರ್ಯಾಕ್ ಗಳನ್ನು ನಿರ್ಮಿಸಿ 8 ವ್ಯೂ ಪಾಯಿಂಟ್ಗಳನ್ನು ಮಾಡಲಾಗುತ್ತಿದೆ. ಈ ವ್ಯೂ ಪಾಯಿಂಟ್ನಲ್ಲಿ ಪ್ರವಾಸಿಗರಿಗೆ ಮನಸೋ ಇಚ್ಚೆ ಪ್ರಕೃತಿಯನ್ನು ಆಸ್ವಾದಿಸಬಹದಾಗಿದೆ. ವಿಶಾಲ ಹುಲ್ಲಿನ ಲಾನ್ಗಳನ್ನು ಬೆಳೆಸಲಾಗುತ್ತಿದ್ದು, ಪ್ರವಾಸಿಗರಿಗೆ ವಿಶೇಷ ಅನುಭವ ನೀಡುತ್ತದೆ. (ವರದಿ: ಗೋಪಾಲ್ ಸೋಮಯ್ಯ ಐಮಂಡ, ಟಿವಿ9, ಕೊಡಗು)