ನಟಿ ಸಾನ್ಯಾ ಐಯ್ಯರ್ ಅವರು ಕಿರುತೆರೆ ಮೂಲಕ ಜನರಿಗೆ ಪರಿಚಯಗೊಂಡರು. ‘ಬಿಗ್ ಬಾಸ್ ಒಟಿಟಿ’ ಹಾಗೂ ‘ಬಿಗ್ ಬಾಸ್’ ಟಿವಿ ಸೀಸನ್ ಮೂಲಕ ಅವರ ಜನಪ್ರಿಯತೆ ಹೆಚ್ಚಿತು.
ಈಗ ಸಾನ್ಯಾ ಐಯ್ಯರ್ ಅವರು ಪದವಿಧರೆ ಆಗಿದ್ದಾರೆ. ಪದವಿ ದಿನದ ಫೋಟೋಗಳನ್ನು ಅವರು ಸೋಶೀಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.
ಸಾನ್ಯಾ ಅವರ ಪದವಿ ದಿನದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಫೋಟೋಗೆ ಫ್ಯಾನ್ಸ್ ಲೈಕ್ಸ್ ಕೊಟ್ಟಿದ್ದಾರೆ.
ಬಿಗ್ ಬಾಸ್ನಿಂದ ಹೊರ ಬಂದ ನಂತರದಲ್ಲಿ ಅನೇಕ ಕಡೆಗಳಲ್ಲಿ ಸ್ಪರ್ಧಿಗಳು ಒಂದೆಡೆ ಸೇರಿದ್ದರು. ಆದರೆ, ಸಾನ್ಯಾ ಐಯ್ಯರ್ ಅವರು ಎಲ್ಲಿಯೂ ಕಾಣಿಸಿಕೊಂಡಿಲ್ಲ.
ಸಾನ್ಯಾ ಐಯ್ಯರ್ಗೆ ಖ್ಯಾತಿ ಹೆಚ್ಚಿದ ಹಿನ್ನೆಲೆಯಲ್ಲಿ ಅವರು ಸಿನಿಮಾ ಒಪ್ಪಿಕೊಳ್ತಾರಾ ಅಥವಾ ಧಾರಾವಾಹಿಗಳಲ್ಲಿ ನಟಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.