
ಗಿಲ್ಲಿ ನಟ ಬಿಗ್ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಆಗಿದ್ದು, ಭಾರಿ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿದ್ದಾರೆ. ಇದೀಗ ಸಿಎಂ ಸಿದ್ದರಾಮಯ್ಯ ಅವರ ಭೇಟಿಯಾಗಿ ಅವರ ಆಶೀರ್ವಾದ ಸಹ ಪಡೆದಿದ್ದಾರೆ.

ಗಿಲ್ಲಿ ನಟ, ಇಂದು (ಜನವರಿ 22) ವಿಧಾನಸೌಧಕ್ಕೆ ತೆರಳಿ, ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಆಗಿದ್ದಾರೆ. ಬಿಗ್ಬಾಸ್ ಗೆದ್ದಿದ್ದಕ್ಕೆ ಗಿಲ್ಲಿಯನ್ನು ಸಿಎಂ ಅಭಿನಂಧಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರ ಹಸ್ತಲಾಘವ ಮಾಡಿ, ಕಾಲಿಗೆ ಸಹ ನಮಸ್ಕರಿಸಿ ಗಿಲ್ಲಿ ನಟ, ಸಿದ್ದರಾಮಯ್ಯ ಅವರ ಆಶೀರ್ವಾದವನ್ನು ಸಹ ಪಡೆದುಕೊಂಡಿದ್ದಾರೆ.

ಈ ವೇಳೆ ಸಿದ್ದರಾಮಯ್ಯ ಅವರು ಗಿಲ್ಲಿ ನಟನಿಗೆ ಹಾರ ಮತ್ತು ಶಾಲು ಹಾಕಿ ಕಿರು ಸನ್ಮಾನವನ್ನೂ ಸಹ ಮಾಡಿದ್ದು, ಒಳಿತಾಗಲಿ ಎಂದು ಹಾರೈಸಿದ್ದಾರೆ.

ಗಿಲ್ಲಿ ನಟ ಕೆಲ ದಿನಗಳ ಹಿಂದೆಯಷ್ಟೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ಸಹ ಭೇಟಿ ಆಗಿ ಅವರ ಆಶೀರ್ವಾದವನ್ನು ಸಹ ಪಡೆದುಕೊಂಡಿದ್ದರು.