ಇಳಕಲ್ನಲ್ಲಿ ಬೈಕ್ ಸವಾರರ ದೇಶ ಪ್ರೇಮ: ಫೋಟೋಗಳಲ್ಲಿ ನೋಡಿ
Bagalkote News: ದೇಶದಾದ್ಯಂತ 77 ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅದರಂತೆ ಬಾಗಲಕೋಟೆ ಜಿಲ್ಲೆಯ ಇಳಕಲ್ ನಿವಾಸಿ ವೀರೇಶ್ ಕುಂದರಗಿಮಠ ಎಂಬುವವರು ಇಳಕಲ್ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ತಿರಂಗಾ ಹಿಡಿದು ಬೈಕ್ ಮೇಲೆ ನಿಂತು ಸವಾರಿ ಮಾಡುವ ಮೂಲಕ ದೇಶಾಭಿಮಾನ ಮೆರೆದಿದ್ದಾರೆ.
1 / 6
ಇಂದು(ಆ.15) ದೇಶದಾದ್ಯಂತ 77 ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅದರಂತೆ ಕರ್ನಾಟಕದ ರಾಮನಗರದಲ್ಲಿ ಬರೊಬ್ಬರಿ 600 ಅಡಿ ಎತ್ತರದ ಬೆಟ್ಟದ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಲಾಗಿತ್ತು. ಇದೀಗ ಇಲ್ಲೊಬ್ಬ ಬೈಕ್ ಸವಾರ ಮೇಲೆ ರಾಷ್ಟ್ರಧ್ವಜ ಹಿಡಿದು ಸಂಭ್ರಮಿಸಿದ್ದಾನೆ.
2 / 6
ಹೌದು, ವಿವಿಧ ರೀತಿಯಲ್ಲಿ ಇಂದು ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಗುತ್ತಿದ್ದು, ಅದರಂತೆ ಬಾಗಲಕೋಟೆ ಜಿಲ್ಲೆಯ ಇಳಕಲ್ ನಿವಾಸಿ ವೀರೇಶ್ ಕುಂದರಗಿಮಠ ಎಂಬುವವರು ಇಳಕಲ್ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ತಿರಂಗಾ ಹಿಡಿದು ಬೈಕ್ ಮೇಲೆ ನಿಂತು ಸವಾರಿ ಮಾಡಿದ್ದಾರೆ.
3 / 6
ಕೈಯಲ್ಲಿ ರಾಷ್ಟ್ರಧ್ವಜ ಹಿಡಿದರೆ, ಇತ್ತ ಬೈಕ್ ಹ್ಯಾಂಡಲ್ಗೆ ಕನ್ನಡ ಧ್ವಜವನ್ನು ಕಟ್ಟಿದ್ದಾರೆ. ಜೊತೆಗೆ ಒಂದು ಕಿಮೀ ಸವಾರಿ ಮಾಡುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನು ವೀರೇಶ್ ಕುಂದರಗಿಮಠ ಸಂಭ್ರಮಿಸಿದ್ದಾರೆ.
4 / 6
ಇನ್ನು ವೀರೇಶ್ ಕುಂದರಗಿಮಠ ಈ ಹಿಂದೆ 500 ಕಿಮೀ ಹ್ಯಾಂಡಲ್ ಹಿಡಿಯದೆ ಬೈಕ್ ಓಡಿಸಿ ಸಾಧನೆ ಮಾಡಿದ್ದಾರೆ. ಇದೀಗ 77ನೇ ಸ್ವಾತಂತ್ರ್ಯೋತ್ಸವ ಸಂಭ್ರಮವನ್ನು ತಮ್ಮ ಸ್ಟೈಲ್ನಲ್ಲಿಯೇ ಸಂಭ್ರಮಿಸಿದ್ದಾರೆ.
5 / 6
ಇದೇ ರೀತಿಯಾಗಿ ಬಾಗಲಕೋಟೆ ಜಿಲ್ಲೆಯ ಕೆರಕಲಮಟ್ಟಿ ಗ್ರಾಮದ ಜಮೀನಿನಲ್ಲಿ ರೈತರ ಮಕ್ಕಳು ದ್ವಜಾರೋಹಣ ನೆರವೇರಿಸಿದ್ದಾರೆ.
6 / 6
ಹೌದು, ಮೆಕ್ಕೆಜೋಳದ ಬೆಳೆಯ ನಡುವೆ ರೈತ ಕುಟುಂಬದ ಮಕ್ಕಳು ಜಮೀನನಲ್ಲೂ ದ್ವಜಾರೋಹಣ ಮಾಡುವ ಮೂಲಕ ದೇಶಾಭಿಮಾನ ಮೆರೆದಿದ್ದಾರೆ.