Updated on: Sep 08, 2021 | 6:54 PM
ವಿಶ್ವದ ಜನಪ್ರಿಯ ವಾಹನ ಉತ್ಪಾದನಾ ಕಂಪೆನಿ BMW ಹೊಸ ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆ ಮಾಡಿದೆ. ಮಿನಿ ಬೈಕ್ ಲುಕ್ ಹೊಂದಿರುವ ಈ ವಾಹನಕ್ಕೆ BMW CE o2 ಎಂದು ಹೆಸರಿಡಲಾಗಿದೆ. ಸದ್ಯ ಹೊಸ ಎಲೆಕ್ಟ್ರಿಕ್ ಬೈಕ್ನ ಕಾನ್ಸೆಪ್ಟ್ ಮಾಡೆಲ್ ಬಿಡುಗಡೆ ಮಾಡಲಾಗಿದ್ದು, ಶೀಘ್ರದಲ್ಲೇ ಉತ್ಪಾದನೆಯನ್ನು ಆರಂಭಿಸುವುದಾಗಿ ಕಂಪೆನಿ ತಿಳಿಸಿದೆ.
BMW CE o2 ಬೈಕ್ ವೈಶಿಷ್ಟ್ಯತೆಗಳೇನು: BMW ಕಾನ್ಸೆಪ್ಟ್ ಮಿನಿ ಬೈಕ್ನಲ್ಲಿ ನಾಲ್ಕು ಸಣ್ಣ ಸುತ್ತಿನ ಎಲ್ಇಡಿ ಲೈಟ್ಗಳನ್ನು ನೀಡಲಾಗಿದೆ. ಹಾಗೆಯೇ ವೃತ್ತಾಕಾರದ ಡಿಜಿಟಲ್ ಡಿಸ್ಪ್ಲೇ (ಹ್ಯಾಂಡಲ್ ಬಾರ್ ಮಧ್ಯದಲ್ಲಿ) ಹೊಂದಿಸಲಾಗಿದೆ. ಇದು ಸವಾರನಿಗೆ ಅಗತ್ಯ ಮಾಹಿತಿಯನ್ನು ತೋರಿಸುತ್ತದೆ. ಆದಾಗ್ಯೂ, ಇದು ಸ್ಮಾರ್ಟ್ ಡಿಸ್ಪ್ಲೇ ಅಲ್ಲ. ಏಕೆಂದರೆ ಪ್ರಸ್ತುತ ಮಾಹಿತಿ ಪ್ರಕಾರ BMW ಇದರಲ್ಲಿ ಮೊಬೈಲ್ ಕನೆಕ್ಟಿವಿಟಿ ಫೀಚರ್ ನೀಡಿಲ್ಲ.
ಸದ್ಯದ ಮಾಹಿತಿ ಪ್ರಕಾರ BMW CE o2 ಬೈಕ್ ಅನ್ನು ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದ್ರೆ ಬರೋಬ್ಬರಿ 90 ಕಿ.ಮೀ ಓಡಿಸಬಹುದು ಎಂದು ತಿಳಿಸಲಾಗಿದೆ.
ಕಾನ್ಸೆಪ್ಟ್ ಮಾಡೆಲ್ ಬಿಡುಗಡೆಯಲ್ಲೇ BMW CE o2 ಬೈಕ್ ಪ್ರಿಯರ ಗಮನ ಸೆಳೆದಿದ್ದು, ಹೀಗಾಗಿ 2022 ರ ಆರಂಭದಲ್ಲಿ ಬಿಎಂಡಬ್ಲ್ಯೂ ಕಂಪೆನಿಯು ತನ್ನ ನೂತನ ಎಲೆಕ್ಟ್ರಿಕ್ ಬೈಕ್ ಅನ್ನು ರಸ್ತೆಗಿಳಿಸುವ ಸಾಧ್ಯತೆಯಿದೆ.