Disha Patani: ಬದಲಾಯ್ತು ದಿಶಾ ಪಟಾಣಿ ವೇಷ; ಬಿಕಿನಿ ಬದಿಗಿಟ್ಟು ಮೈ ತುಂಬ ಬಟ್ಟೆ ಧರಿಸಿದ್ದಕ್ಕೆ ನೆಟ್ಟಿಗರಿಗೆ ಅಚ್ಚರಿ

Updated on: Apr 21, 2023 | 5:49 PM

Disha Patani Viral Photos: ಇಷ್ಟು ದಿನ ಬೋಲ್ಡ್​ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದ ದಿಶಾ ಪಟಾಣಿ ಅವರು ಈಗ ಏಕಾಏಕಿ ಲುಕ್​ ಬದಲಾಯಿಸಿಕೊಂಡಿದ್ದಾರೆ. ಅವರ ಫೋಟೋಗಳು​ ವೈರಲ್​ ಆಗಿವೆ.

1 / 5
ನಟಿ ದಿಶಾ ಪಟಾಣಿ ಅವರು ಯಾವಾಗಲೂ ಗ್ಲಾಮರಸ್​ ಆದ ಬಟ್ಟೆ ಧರಿಸಿಯೇ ಜನರನ್ನು ಸೆಳೆಯುತ್ತಾರೆ. ಆದರೆ ಈಗ ಅವರು ಏಕಾಏಕಿ ತಮ್ಮ ವೇಷ ಬದಲಿಸಿದ್ದಾರೆ.

ನಟಿ ದಿಶಾ ಪಟಾಣಿ ಅವರು ಯಾವಾಗಲೂ ಗ್ಲಾಮರಸ್​ ಆದ ಬಟ್ಟೆ ಧರಿಸಿಯೇ ಜನರನ್ನು ಸೆಳೆಯುತ್ತಾರೆ. ಆದರೆ ಈಗ ಅವರು ಏಕಾಏಕಿ ತಮ್ಮ ವೇಷ ಬದಲಿಸಿದ್ದಾರೆ.

2 / 5

ಸದಾ ಕಾಲ ಬಿಕಿನಿ ಧರಿಸಿ, ಬೀಚ್​ನಲ್ಲಿ ಫೋಟೋಶೂಟ್​ ಮಾಡುತ್ತಿದ್ದ ದಿಶಾ ಪಟಾಣಿ ಅವರು ಈಗ ಮೈ ತುಂಬ ಬಟ್ಟೆ ಧರಿಸಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳು ವೈರಲ್​ ಆಗಿವೆ.

3 / 5

ಇತ್ತೀಚೆಗೆ ದಿಶಾ ಪಟಾಣಿ ಅವರು ವಾರಾಣಸಿಗೆ ಭೇಟಿ ನೀಡಿದ್ದಾರೆ. ಅಲ್ಲಿ ಅವರು ಗಂಗಾ ಆರತಿ ಮಾಡಿದ್ದಾರೆ. ಈ ಸಂದರ್ಭದ ಫೋಟೋಗಳನ್ನು ನೋಡಿ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.

4 / 5

ಚಿತ್ರರಂಗದಲ್ಲಿ ದಿಶಾ ಪಟಾಣಿ ಅವರಿಗೆ ಸಖತ್​ ಬೇಡಿಕೆ ಇದೆ. ಹಿಂದಿ ಚಿತ್ರರಂಗದಲ್ಲಿ ಅವರು ಭದ್ರವಾಗಿ ನೆಲೆ ಕಂಡುಕೊಂಡಿದ್ದಾರೆ. ಅವರ ಕೈಯಲ್ಲಿ ಹಲವು ಆಫರ್​ಗಳಿವೆ.

5 / 5

ದಿಶಾ ಪಟಾಣಿ ಅವರು ಈಗ ‘ಕಂಗುವ’ ಚಿತ್ರಕ್ಕೆ ನಾಯಕಿ ಆಗಿದ್ದಾರೆ. ಈ ಸಿನಿಮಾ ಮೂಲಕ ಅವರು ತಮಿಳು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಚಿಯಾನ್​ ವಿಕ್ರಮ್​ ಜೊತೆ ಅವರು ತೆರೆ ಹಂಚಿಕೊಳ್ಳಲಿದ್ದಾರೆ.

Published On - 5:49 pm, Fri, 21 April 23

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us