ಚಿಕ್ಕಬಳ್ಳಾಪುರದಲ್ಲಿ ಸೌಂಡ್ ಕಿರಿಕಿರಿಗೆ ಬ್ರೇಕ್​;​ ಸೈಲೆನ್ಸರ್​ಗಳ ಮೇಲೆ ರೋಡ್ ರೋಲರ್ ಹತ್ತಿಸಿ ಎಚ್ಚರಿಕೆ

Edited By: ಕಿರಣ್ ಹನುಮಂತ್​ ಮಾದಾರ್

Updated on: Aug 28, 2024 | 5:54 PM

ಶಾಲಾ-ಕಾಲೇಜು, ಲೇಡಿಸ್ ಹಾಸ್ಟೆಲ್ ಸೇರಿದಂತೆ ಕಾಲೇಜು ಕನ್ಯೆಯರು ಸಂಚರಿಸುವ ರಸ್ತೆಗಳಲ್ಲಿ ಐಶಾರಾಮಿ ಬೈಕ್​ಗಳನ್ನೇರಿ, ಅವುಗಳ ಸೈಲೆನ್ಸರ್ ಮಾಡಿಫೈ ಮಾಡಿ ದೊಡ್ಡ ಶಬ್ದಮಾಡಿಕೊಂಡು ಹುಡುಗಿಯರಿಗೆ ಚಮಕ್ ಕೊಡುತ್ತಿದ್ದ ರೋಡ್ ರೋಮಿಯೋಗಳಿಗೆ ಪೊಲೀಸರು ಬುದ್ದಿ ಕಲಿಸಿ ಎಚ್ಚರಿಕೆ ನೀಡಿದರು. ಅದು ಹೇಗೆ ಅಂತೀರಾ? ಈ ವರದಿ ಓದಿ.

1 / 6
ಮಾಡಿಫೈ ಮಾಡಿಸಿದ ಸೈಲೆನ್ಸರ್​ಗಳನ್ನ ಐಷಾರಾಮಿ ಬೈಕ್​ಗಳಿಗೆ ಅಳವಡಿಸಿ ಶಾಲಾ-ಕಾಲೇಜು, ಲೇಡಿಸ್ ಹಾಸ್ಟೆಲ್ ಸೇರಿದಂತೆ ಕಾಲೇಜು ಕನ್ಯೆಯರು ಸಂಚರಿಸುವ ರಸ್ತೆಗಳಲ್ಲಿ ಬೈಕ್​ಗಳನ್ನೇರಿ ಕಾಲೇಜು ಯುವತಿಯರಿಗೆ ಚಮಕ್ ಕೊಡುತ್ತಿದ್ದ ಪುಂಡರಿಗೆ ಪೊಲೀಸರು ಬುದ್ದಿ ಕಲಿಸಿದ್ದಾರೆ.

ಮಾಡಿಫೈ ಮಾಡಿಸಿದ ಸೈಲೆನ್ಸರ್​ಗಳನ್ನ ಐಷಾರಾಮಿ ಬೈಕ್​ಗಳಿಗೆ ಅಳವಡಿಸಿ ಶಾಲಾ-ಕಾಲೇಜು, ಲೇಡಿಸ್ ಹಾಸ್ಟೆಲ್ ಸೇರಿದಂತೆ ಕಾಲೇಜು ಕನ್ಯೆಯರು ಸಂಚರಿಸುವ ರಸ್ತೆಗಳಲ್ಲಿ ಬೈಕ್​ಗಳನ್ನೇರಿ ಕಾಲೇಜು ಯುವತಿಯರಿಗೆ ಚಮಕ್ ಕೊಡುತ್ತಿದ್ದ ಪುಂಡರಿಗೆ ಪೊಲೀಸರು ಬುದ್ದಿ ಕಲಿಸಿದ್ದಾರೆ.

2 / 6

ಚಿಕ್ಕಬಳ್ಳಾಪುರ ಸಂಚಾರಿ ಠಾಣೆ ಪೊಲೀಸರು, ನಿರ್ಬಂಧಿತ ಬೈಕ್​ಗಳ ಸೈಲೆನ್ಸ್​ರ್​ಗಳನ್ನ ಕಿತ್ತು ಬರೋಬ್ಬರಿ 138 ಬೈಕ್​ಗಳ ಸೈಲೆನ್ಸರ್​ಗಳ ಮೇಲೆ ರೋಡ್ ರೋಲರ್ ಹತ್ತಿಸಿ ನಾಶಗೊಳಿಸುವ ಮೂಲಕ ಖಡಕ್​ ಎಚ್ಚರಿಕೆ ಕೊಟ್ಟಿದ್ದಾರೆ.

3 / 6

5 ಸಾವಿರದಿಂದ ಲಕ್ಷಾಂತರ ರೂಪಾಯಿ ಮೌಲ್ಯದ ವರೆಗೂ ಸೈಲೆನ್ಸ್​ರ್​ಗಳನ್ನ ಮಾಡಿಫೈ ಮಾಡಿಕೊಂಡು ಬೈಕ್​ಗಳಿಗೆ ಅಳವಡಿಸಿ, ಹೆದ್ದಾರಿಗಳು, ಜನನಿ ಬೀಡರಸ್ತೆಗಳು, ಕಾಲೇಜು ಕ್ಯಾಂಪಸ್​ ಗಳು ಸೇರಿದಂತೆ ಹಲವೆಡೆ ರೂಂಂಂ.. ರೂಂಂಂ ಎಂದು ಕರ್ಕಶ ಶಬ್ದ ಮಾಡುತ್ತಾ ಸಾರ್ವಜನಿಕರಿಗೆ ಕಿರಿಕಿರಿ ಮಾಡುತ್ತಿದ್ದರು.

4 / 6

ಇನ್ನು ಇತ್ತೀಚೆಗೆ ಕೋಲಾರದಲ್ಲಿ ಬೈಕ್ ವೀಲಿಂಗ್​ಗೆ ವ್ಯಕ್ತಿಯೊಬ್ಬ ಬಲಿಯಾದ ನಂತರ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸರು ಎಚ್ಚೆತ್ತುಕೊಂಡು ರಸ್ತೆ ಸಂಚಾರಿ ನಿಯಮಗಳನ್ನ ಉಲ್ಲಂಘಿಸಿದವರಿಗೆ ಖಡಕ್​ ಎಚ್ಚರಿಕೆ ಮೂಲಕ ತಿಳಿಸಿದ್ದಾರೆ.

5 / 6

ಇದೀಗ ಸೈಲೆನ್ಸ್​ರ್​ಗಳ ಮೂಲಕ ಪರಿಸರ ಮಾಲಿನ್ಯ ಉಂಟುಮಾಡಿ ಪುಂಡಾಟ ಮೆರೆದಿದ್ದ ಬೈಕ್ ಸವಾರರಿಗೆ, ಪೊಲೀಸರು ಎಚ್ಚರಿಗೆ ನೀಡಿದ್ದಾರೆ.

6 / 6

ರಸ್ತೆ ಸಾರಿಗೆ, ಸಂಚಾರ ನಿಯಮಗಳನ್ನ ಉಲ್ಲಂಘಿಸಿ ಮನಸೋ ಇಚ್ಚೆ ಸೈಲೆನ್ಸ್​ರ್​ಗಳನ್ನ ಮಾರ್ಪಡಿಸಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಪುಂಡರಿಗೆ ಚಿಕ್ಕಬಳ್ಳಾಪುರ ಸಂಚಾರಿ ಠಾಣೆ ಪೊಲೀಸರು, ಸರಿಯಾಗಿ ಬುದ್ದಿ ಕಲಿಸಿದ್ದಾರೆ.

ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಎಂಬ ಸುಂದರ ಊರು ನನಗೆ ಸುಂದರವಾದ ಬದುಕನ್ನು ಕಟ್ಟಿಕೊಟ್ಟಿದೆ. 18 ವರ್ಷಗಳಿಂದ ಹಗಲುರಾತ್ರಿ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಜನ ಸೇವೆಯಲ್ಲಿದ್ದೇನೆ. ಶಿಕ್ಷಣವೆಲ್ಲ ಬೆಂಗಳೂರಿನಲ್ಲಿ. ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಪದವಿ. ಬೆಂಗಳೂರು ವಿವಿಯಲ್ಲಿ ಬಿ.ಸಿ.ಎ ವ್ಯಾಸಂಗ. ವಿದ್ಯಾರ್ಥಿದೆಸೆಯಿಂದಲೆ ಟಿವಿ9 ಕನ್ನಡದಲ್ಲಿ ಕೆಲಸ.

Read More
Loading...
Unable to load recommendations.
Follow Us