Kannada News Photo gallery prosecution Row: governor And DK Shivakumar Lunch In byrathi suresh Son engagement News In kannada
ನಿಗಿ ನಿಗಿ ಕೆಂಡ ಕಾರುತ್ತಿರುವ ಮಧ್ಯ ರಾಜ್ಯಪಾಲರ ಜತೆ ಊಟ ಮಾಡಿದ ಡಿಕೆಶಿ
ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಮುಡಾ ಹಗರಣ ದೊಡ್ಡ ಬಿರುಗಾಳಿ ಎಬ್ಬಿಸಿದೆ. ಇದು ಆಡಳಿತ ಪಕ್ಷ ಕಾಂಗ್ರೆಸ್ ಹಾಗೂ ವಿಪಕ್ಷ ಬಿಜೆಪಿ ಮಧ್ಯೆ ಹೋರಾಟ ಉಂಟಾಗುವ ಜೊತೆಗೆ ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಧ್ಯೆದ ಮುನಿಸಿಗೆ ಕಾರಣವಾಗಿದೆ. ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ ಬೆನ್ನಲ್ಲೆ ಸಿದ್ದರಾಮಯ್ಯ, ಅವರ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ರಾಜ್ಯಪಾಲರ ವಿರುದ್ಧ ನಿಗಿ ನಿಗಿ ಕೆಂಡ ಕಾರುತ್ತಿದ್ದಾರೆ. ಇದರ ಮಧ್ಯ ಡಿಕೆಶಿ ಶಿವಕುಮಾರ್ ಅವರು ರಾಜ್ಯಪಾಲರ ಜೊತೆಗೆ ಭೋಜನ ಮಾಡಿದ್ದಾರೆ. ಇಬ್ಬರು ಆತ್ಮೀಯವಾಗಿ ಮಾತನಾಡುತ್ತ ಊಟ ಸವಿದ ಫೋಟೋಸ್ ಇಲ್ಲಿವೆ ನೋಡಿ.
ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲ ಥಾವರ್ ಚೆಂದ ಗೆಹ್ಲೋಟ್ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದಾರೆ. ಇದರ ಬೆನ್ನಲ್ಲೇ ರಾಜ್ಯಪಾಲರ ವಿರುದ್ಧ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಆದಿಯಾಗಿ ಸಚಿವರು, ಶಾಸಕರು, ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ವರ್ಸಸ್ ರಾಜ್ಯಪಾಲ ನಡುವಿನ ಸಂಘರ್ಷ ಜೋರಾಗಿದೆ. ಇದರ ನಡುವೆ ಡಿಕೆ ಶಿವಕುಮಾರ್ ಇಂದು ಇದೇ ರಾಜ್ಯಪಾಲ ಥಾವರ್ ಚೆಂದ ಗೆಹ್ಲೋಟ್ ಜೊತೆ ಆತ್ಮೀಯವಾಗಿ ಊಟ ಸವಿದಿದ್ದು, ಇದು ಹಲವರ ಅಚ್ಚರಿಗೆ ಕಾರಣವಾಗಿದೆ.
1 / 7
ಸಚಿವ ಬೈರತಿ ಸುರೇಶ್ ಅವರ ಪುತ್ರ ಸಂಜಯ್ ಹಾಗೂ ಶಾಸಕ ಎಸ್ ಆರ್ ವಿಶ್ವನಾಥ್ ಅವರ ಪುತ್ರಿ ಅಪೂರ್ವ ಅವರ ನಿಶ್ಚಿತಾರ್ಥ ಕಾರ್ಯಕ್ರಮ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ನಡೆದಿದೆ. ಈ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಭಾಗಿಯಾಗಿದ್ದರು.
2 / 7
ಸಚಿವ ಬೈರತಿ ಸುರೇಶ್ ಅವರ ಪುತ್ರ ಸಂಜಯ್ ಹಾಗೂ ಶಾಸಕ ಎಸ್ ಆರ್ ವಿಶ್ವನಾಥ್ ಅವರ ಪುತ್ರಿ ಅಪೂರ್ವ ಅವರ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಮತ್ತು ರಾಜ್ಯಪಾಲ ಥಾವರ್ ಚೆಂದ ಗೆಹ್ಲೋಟ್ ಅವರು ಒಟ್ಟಿಗೆ ಕುಳಿತುಕೊಂಡು ಊಟ ಮಾಡಿದ್ದಾರೆ.
3 / 7
ಪ್ರಾಸಿಕ್ಯೂಷನ್ ವಿಚಾರವಾಗಿ ರಾಜ್ಯಪಾಲರ ವಿರುದ್ಧ ಡಿಕೆ ಶಿವಕುಮಾರ್ ಸಿಡಿದು ಕೆಂಡವಾಗಿದ್ದಾರೆ. ಆದ್ರೆ, ಕಾರ್ಯಕ್ರಮದಲ್ಲಿ ಇಬ್ಬರು ಆತ್ಮೀಯವಾಗಿ ನಗು ನಗುತ್ತಲೇ ಮಾತನಾಡುತ್ತ ಭೋಜನ ಸವಿದರು.
4 / 7
ಆಗಸ್ಟ್ 31ರಂದು ರಾಜಭವನ ಚಲೋಗೆ ಡಿಕೆ ಶಿವಕುಮಾರ್ ಕರೆ ಕೊಟ್ಟಿದ್ದಾರೆ. ಹೀಗೆ ರಾಜ್ಯಪಾಲರ ವಿರುದ್ಧ ನಿಗಿ ನಿಗಿ ಕೆಂಡಕಾರುತ್ತಿರುವವರೇ ಪಕ್ಕದಲ್ಲಿ ಕುಳಿತು ಅದು ಹೇಗೆ ಊಟ ಮಾಡಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ.
5 / 7
ಹೊರಗೆ ರಾಜ್ಯಪಾಲರ ವಿರುದ್ಧ ಕೆಂಡಕಾರಿರುವ ಡಿಕೆ ಶಿವಕುಮಾರ್ , ಇಂದು ಕಾರ್ಯಕ್ರಮದಲ್ಲಿ ಖುಷಿ ಖುಷಿಯಾಗಿ ರಾಜ್ಯಪಾಲರ ಜೊತೆ ಕೂತು ಊಟ ಮಾಡಿದರು. ಈ ವೇಳೆ ಇಬ್ಬರು ನಗುಮುಗದಲ್ಲೇ ಕುಶಲೋಪರಿ ವಿಚಾರಿಸಿದರು.
6 / 7
ಮುಡಾ ಹಗರಣದ ಪ್ರಾಸಿಕ್ಯೂಷನ್ ಅನುಮತಿ ನೀಡಿರುವ ಮಧ್ಯ ಸರ್ಕಾರದ 11 ಬಿಲ್ಗಳನ್ನು ರಾಜ್ಯಪಾಲರು ತಿರಸ್ಕರಿಸಿದ್ದಾರೆ. ಇದರಿಂದ ಇಡೀ ಸರ್ಕಾರವೇ ರಾಜ್ಯಪಾಲರ ನಡೆಗೆ ತೀವ್ರವಾಗಿ ವಿರೋಧಿಸುತ್ತಿದೆ. ಆದ್ರೆ, ಕಾರ್ಯಕ್ರಮದಲ್ಲಿ ಇವೆಲ್ಲವೂಗಳನ್ನು ಮರೆತು ಡಿಕೆಶಿ, ಥಾವರ್ ಚೆಂದ ಗೆಹ್ಲೋಟ್ ಖುಷಿ ಖುಷಿಯಲ್ಲಿ ಇರುವುದು ಕಾಣಿಸಿತು.