New Year 2024: ಹೊಸವರ್ಷಕ್ಕೆ ಸಜ್ಜಾಗುತ್ತಿದೆ ಬ್ರಿಗೇಡ್ ರೋಡ್, ರಸ್ತೆಯುದ್ದಕ್ಕೂ ಕಲರ್ ಫುಲ್ ಲೈಟಿಂಗ್ಗಳ ಅಲಂಕಾರ
ಹೊಸವರ್ಷ ಹಾಗೂ ಕ್ರಿಸ್ಮಸ್ ಹಬ್ಬದ ಸಲುವಾಗಿ ಪ್ರತಿವರ್ಷ ಬ್ರಿಗೇಡ್ ರೋಡ್ ನಲ್ಲಿ ವಿಶೇಷವಾಗಿ ದೀಪಾಲಂಕಾರದ ಮಾಡಲಾಗುತ್ತೆ. ಈ ವರ್ಷವು 14 ಲಕ್ಷ ವೆಚ್ಚದಲ್ಲಿ ಬ್ರಿಗೇಡ್ ರಸ್ತೆಗೆ ಲೈಟಿಂಗ್ ಅಳವಡಿಸಿದ್ದು, ಎಂಜಿ ರಸ್ತೆ ಎಂಟ್ರಿಯಿಂದ ಬ್ರಿಗೇಡ್ ನಾ 400 ಮೀಟರ್ ವರೆಗೂ ಹೈ ಫೈ ಲೈಟಿಂಗ್ಸ್ ಅಳವಡಿಸಲಾಗಿದೆ.
1 / 7
ರಾಜಧಾನಿ ಬೆಂಗಳೂರಿನಲ್ಲಿ ಕ್ರಿಸ್ಮಸ್ ಹಾಗೂ ಹೊಸವರ್ಷದ ಸೊಬಗು ಜೋರಾಗಿದೆ. ಹೀಗಾಗಿ ನಗರದ ಬ್ರಿಗೇಡ್ ರೋಡ್ ಹಾಗೂ ಕಮರ್ಷಿಯಲ್ ಸ್ಟ್ರೀಟ್ ರಸ್ತೆಯಲ್ಲಿ ಕಲರ್ ಫುಲ್ ಲೈಟಿಂಗ್ಸ್ ಅಳವಡಿಸಿದ್ದು, ಜನರು ಎಂಜಾಯ್ ಮಾಡ್ತಿದ್ದಾರೆ.
2 / 7
ಹೊಸವರ್ಷ ಹಾಗೂ ಕ್ರಿಸ್ಮಸ್ ಹಬ್ಬದ ಸಲುವಾಗಿ ಪ್ರತಿವರ್ಷ ಬ್ರಿಗೇಡ್ ರೋಡ್ ನಲ್ಲಿ ವಿಶೇಷವಾಗಿ ದೀಪಾಲಂಕಾರ ಮಾಡಲಾಗುತ್ತೆ. ಈ ವರ್ಷವೂ 14 ಲಕ್ಷ ವೆಚ್ಚದಲ್ಲಿ ಬ್ರಿಗೇಡ್ ರಸ್ತೆಗೆ ಲೈಟಿಂಗ್ ಅಳವಡಿಸಿದ್ದು, ಎಂಜಿ ರಸ್ತೆ ಎಂಟ್ರಿಯಿಂದ ಬ್ರಿಗೇಡ್ ನಾ 400 ಮೀಟರ್ ವರೆಗೂ ಹೈ ಫೈ ಲೈಟಿಂಗ್ಸ್ ಅಳವಡಿಸಲಾಗಿದೆ.
3 / 7
ಹೊಸ ವರ್ಷಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನ ಮಾಡಿಕೊಳ್ಳಲಾಗುತ್ತಿದೆ. ಮತ್ತೊಂದೆಡೆ ಬಿಬಿಎಂಪಿ ಹೊಸವರ್ಷದ ದಿನ ಯಾರಿಗೂ ಸಮಸ್ಯೆಯಾಗಬಾರದು ಎನ್ನುವ ಕಾರಣಕ್ಕೆ ಸಿಸಿಟಿವಿ ಅಳವಡಿಕೆಯ ಸ್ಥಳ, ಯಾವ್ಯಾವ ರಸ್ತೆಗಳನ್ನ ಕ್ಲೋಸ್ ಮಾಡಬೇಕು ಎನ್ನುವ ಬಗ್ಗೆ ಸೂಚನೆ ನೀಡಿದೆ.
4 / 7
ಪೊಲೀಸ್ ಇಲಾಖೆಯಿಂದ ಸಿಸಿಟಿವಿ, ಮಹಿಳಾ ಚೌಕಿ, ಬ್ಯಾರಿಕೇಟ್ ಅಳವಡಿಕೆ ಮಾಡಲಾಗುತ್ತಿದೆ. ಇನ್ನು ಹೊಸ ವರ್ಷದ ದಿನ ಬ್ರಿಗೇಡ್ ರಸ್ತೆಗೆ ಸಂಪರ್ಕ ಕಲ್ಪಿಸುವ ಮೆಲ್ಸೆತುವೆಗಳು ಕ್ಲೋಸ್ ಆಗಲಿದ್ದು, 2024ರ ವರ್ಷವನ್ನ ಅದ್ದೂರಿಯಿಂದ ಬರಮಾಡಿಕೊಳ್ಳಲು ಬ್ರಿಗೇಡ್ ಸಜ್ಜಾಗಿದ. ಅದ್ದೂರಿಯಾ ಲೈಟಿಂಗ್ಸ್ ನಿಂದ ಬ್ರಿಗೇಡ್ ರೋಡ್ ಕಂಗೋಳಿಸುತ್ತಿದೆ.
5 / 7
ಹೊಸ ವರ್ಷ ಅಂದ್ರೆ ಬ್ರಿಗೇಡ್ ರೋಡ್ ನೋಡುವುದೇ ಚೆಂದ. ರಾತ್ರಿ ವೇಳೆ ಕಣ್ಣುಗಳಿಗಂತೊ ಹಬ್ಬವಾಗಿರುತ್ತೆ. ಹೊಸ ವರ್ಷಕ್ಕೆ ನಾವು ಬರೋದಿಕ್ಕೆ ಆಗೋದಿಲ್ಲ. ಹೀಗಾಗಿ ಇಂದೇ ಫ್ಯಾಮಿಲಿ ಸಮೇತವಾಗಿ ಬಂದು ಎಂಜಾಯ್ ಮಾಡ್ತಿದಿವಿ ಅಂತ ಸಿಲಿಕಾನ್ ಮಂದಿ ಸಂತೋಷ ವ್ಯಕ್ತಪಡಿಸಿದ್ರು.
6 / 7
ಬ್ರೀಗೇಡ್ ರೋಡ್ ಒಂದು ಕಡೆಯಾದ್ರೆ, ಮತ್ತೊಂದೆಡೆ ಕಮರ್ಷಿಯಲ್ ಸ್ಟ್ರೀಟ್ ನಾ ಕಲರ್ ಫುಲ್ ಲೈಟಿಂಗ್ಸ್ ಜನರನ್ನ ಹಿಡಿದಿಟ್ಟುಕೊಳ್ಳುತ್ತಿದ್ದು, ವಿಜೃಂಭಿಸುವ ಲೈಟಿಂಗ್ಸ್ ಮಧ್ಯೆ ಜನರು ಎಂಜಾಯ್ ಮಾಡ್ತಿದ್ದಾರೆ.
7 / 7
ಹೊಸ ವರ್ಷಕ್ಕೆ ಕೌಂಟ್ ಡೌನ್ ಆರಂಭವಾಗಿದ್ದು, ಹೊಸ ವರ್ಷವನ್ನ ಅದ್ದೂರಿಯಿಂದ ಬರಮಾಡಿಕೊಳ್ಳಲು ಸಿಲಿಕಾನ್ ಸಿಟಿ ಜನರು ಕಾತುರದಿಂದ ಕಾಯುತ್ತಿದ್ದಾರೆ.