ವಿಶ್ವದ ನಂ.1 ಶೆಟ್ಲರ್​ಗೆ ಸೋಲುಣಿಸಿದ ಎಚ್‌ಎಸ್ ಪ್ರಣಯ್! ಸೆಮಿಫೈನಲ್‌ ಸುತ್ತಿಗೆ ಎಂಟ್ರಿ

|

Updated on: Aug 26, 2023 | 10:02 AM

BWF World Championships 2023: BWF ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ವಿಶ್ವದ ನಂಬರ್ ಒನ್ ಶ್ರೇಯಾಂಕದ ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸೆನ್ ಅವರನ್ನು ಸೋಲಿಸಿದ ಭಾರತದ ಹಿರಿಯ ಬ್ಯಾಡ್ಮಿಂಟನ್ ಸ್ಟಾರ್ ಎಚ್‌ಎಸ್ ಪ್ರಣಯ್ ಸೆಮಿಫೈನಲ್‌ಗೆ ಎಂಟ್ರಿಕೊಟ್ಟಿದ್ದು, ಪದಕವನ್ನು ಖಚಿತಪಡಿಸಿಕೊಂಡಿದ್ದಾರೆ.

1 / 7
BWF ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ವಿಶ್ವದ ನಂಬರ್ ಒನ್ ಶ್ರೇಯಾಂಕದ ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸೆನ್ ಅವರನ್ನು ಸೋಲಿಸಿದ ಭಾರತದ ಹಿರಿಯ ಬ್ಯಾಡ್ಮಿಂಟನ್ ಸ್ಟಾರ್ ಎಚ್‌ಎಸ್ ಪ್ರಣಯ್ ಸೆಮಿಫೈನಲ್‌ಗೆ ಎಂಟ್ರಿಕೊಟ್ಟಿದ್ದು, ಪದಕವನ್ನು ಖಚಿತಪಡಿಸಿಕೊಂಡಿದ್ದಾರೆ.

2 / 7
31 ವರ್ಷದ ಪ್ರಣಯ್, ಹಾಲಿ ವಿಶ್ವ ಚಾಂಪಿಯನ್ ಆಕ್ಸೆಲ್ಸನ್ ಅವರನ್ನು 13-21, 21-15, 21-16 ರಿಂದ ಸೋಲಿಸಿ ಸೆಮಿಫೈನಲ್‌ನಲ್ಲಿ ಟಿಕೆಟ್ ಖಚಿತಪಡಿಸಿಕೊಂಡಿದ್ದಾರೆ. ಇದೀಗ ವಿಶ್ವ ಚಾಂಪಿಯನ್‌ಶಿಪ್‌ನ ನಿಯಮಗಳ ಅಡಿಯಲ್ಲಿ ಸೆಮಿಫೈನಲ್‌ಗೆ ತಲುಪಿರುವ ಪ್ರಣಯ್​ಗೆ ಪದಕ ಖಚಿತವಾಗಿದೆ.

3 / 7
ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಇದೇ ಮೊದಲ ಬಾರಿಗೆ ಪದಕದ ಸುತ್ತಿಗೆ ಪ್ರಣಯ್ ಅರ್ಹತೆ ಪಡೆದಿದ್ದು, ಇದರೊಂದಿಗೆ ವಿಶ್ವ ಚಾಂಪಿಯನ್‌ಶಿಪ್‌ನ ಪುರುಷರ ಸಿಂಗಲ್ಸ್‌ನಲ್ಲಿ ಪದಕ ಗೆದ್ದ ಐದನೇ ಭಾರತೀಯ ಶಟ್ಲರ್ ಎಂಬ ಹೆಗ್ಗಳಿಕೆಗೆ ಪ್ರಣಯ್ ಪಾತ್ರರಾಗಿದ್ದಾರೆ.

4 / 7
ಎರಡು ಬಾರಿಯ ವಿಜೇತ ಮತ್ತು ಹಾಲಿ ಚಾಂಪಿಯನ್ ಅಕ್ಸೆಲ್ಸೆನ್ ಮೊದಲ ಗೇಮ್‌ನಲ್ಲಿ ಪ್ರಣಯ್ ಅವರನ್ನು 21-13 ರಿಂದ ಸೋಲಿಸಿದರು. ಆದರೆ ಪ್ರಣಯ್ ಮುಂದಿನ ಎರಡು ಗೇಮ್‌ಗಳಲ್ಲಿ ಡ್ಯಾನಿಶ್ ಸೂಪರ್‌ಸ್ಟಾರ್‌ಗೆ ಯಾವುದೇ ಅವಕಾಶವನ್ನು ನೀಡದೆ ಪಂದ್ಯವನ್ನು ಗೆದ್ದರು.

5 / 7
ಅಲ್ಲದೆ, ಆಕ್ಸೆಲ್‌ಸೆನ್ ವಿರುದ್ಧದ 10 ಪಂದ್ಯಗಳಲ್ಲಿ ಪ್ರಣಯ್ ಅವರ ಮೂರನೇ ಗೆಲುವು ಇದಾಗಿದ್ದು, ಈ ಗೆಲುವನ್ನು ಇನ್ನಷ್ಟು ವಿಶೇಷಗೊಳಿಸಿದೆ.ಇದೀಗ ಆಗಸ್ಟ್ 26 ರ ಶನಿವಾರದಂದು ಸಿಂಗಲ್ಸ್ ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ಪ್ರಣಯ್ ಥಾಯ್ಲೆಂಡ್‌ನ ಕುನ್ಲವುತ್ ವಿದಿತ್ಸನ್ ಅವರನ್ನು ಎದುರಿಸಲಿದ್ದಾರೆ.

6 / 7
ಪ್ರಣಯ್ ಅವರ ಈ ಗೆಲುವಿಗೂ ಮೊದಲು ಭಾರತ ಪುರುಷರ ಡಬಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ನಿರಾಸೆಯನ್ನು ಎದುರಿಸಬೇಕಾಯಿತು. ಟೂರ್ನಿಯಲ್ಲಿ ದೇಶದ ನಂಬರ್ ಒನ್ ಜೋಡಿ ಹಾಗೂ ಎರಡನೇ ಶ್ರೇಯಾಂಕದ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಡ್ಯಾನಿಶ್ ಜೋಡಿಯ ವಿರುದ್ಧ 18-21, 19-21 ಅಂತರದಲ್ಲಿ ಸೋಲು ಕಂಡರು.

7 / 7
ಚಿರಾಗ್ ಮತ್ತು ಸಾತ್ವಿಕ್ ಕಳೆದ ವರ್ಷ ಈ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದಿದ್ದರು. ಇದರೊಂದಿಗೆ ಈ ಸಾಧನೆ ಮಾಡಿದ ಮೊದಲ ಭಾರತೀಯ ಜೋಡಿ ಎನಿಸಿಕೊಂಡಿದ್ದರು. ಆದರೆ ಈ ಬಾರಿಯ ಚಿರಾಗ್ ಮತ್ತು ಸಾತ್ವಿಕ್​ಗೆ ಪದಕದ ಸುತ್ತಿಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ.