- Kannada News Photo gallery Cricket photos Ab De Villiers Suggests New Batting Position For virat Kohli in asia cup 2023
ಕಿಂಗ್ ಕೊಹ್ಲಿ ಈ ಕ್ರಮಾಂಕದಲ್ಲಿ ಬ್ಯಾಟ್ ಬೀಸುವುದೇ ಸೂಕ್ತ ಎಂದ ಎಬಿ ಡಿ ವಿಲಿಯರ್ಸ್
Ab De Villiers: ಈ ಬಗ್ಗೆ ಮಾತನಾಡಿರುವ ಎಬಿಡಿ, ಕೊಹ್ಲಿ ನಾಲ್ಕನೇ ಕ್ರಮಾಂದಲ್ಲಿ ಆಡಬೇಕೆನ್ನುವ ಹೇಳಿಕೆಗೆ ನಾನು ಕೂಡ ಬೆಂಬಲಿಗನಾಗಿದ್ದೇನೆ. ಕೊಹ್ಲಿ 4 ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಪರಿಪೂರ್ಣ ಆಟಗಾರ ಎಂದು ನಾನು ಭಾವಿಸುತ್ತೇನೆ. ಮಧ್ಯಮ ಕ್ರಮಾಂಕದಲ್ಲಿ ಯಾವುದೇ ರೀತಿಯ ಪಾತ್ರವನ್ನು ನಿರ್ವಹಿಸುವ ಸಾಮಥ್ಯ್ರ ಕೊಹ್ಲಿಗಿದೆ ಎಂದಿದ್ದಾರೆ.
Updated on: Aug 26, 2023 | 1:00 PM

ಕೆಲವೇ ತಿಂಗಳ ಅಂತರದಲ್ಲಿ ಟೀಂ ಇಂಡಿಯಾ, ಎರಡು ಪ್ರಮುಖ ಈವೆಂಟ್ಗಳಾದ ಏಷ್ಯಾಕಪ್ ಹಾಗೂ ವಿಶ್ವಕಪ್ ಆಡಲಿದೆ. ಆದರೆ ಅದಕ್ಕೂ ಮುನ್ನ ಟೀಂ ಇಂಡಿಯಾಕ್ಕೆ ಬಹಳ ವರ್ಷಗಳಿಂದ ಕಾಡುತ್ತಿರುವ ನಾಲ್ಕನೇ ಕ್ರಮಾಂಕದ ಬ್ಯಾಟಿಂಗ್ ಸಮಸ್ಯೆಗೆ ಸಂಬಂಧಿಸಿದಂತೆ ಇನ್ನು ಯಾವುದೇ ಪರಿಹಾರ ಸಿಕ್ಕಿಲ್ಲ.

ಈ ಹಿಂದೆ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಿದ್ದ ಶ್ರೇಯಸ್ ಅಯ್ಯರ್ ಇದೀಗ ಇಂಜುರಿಯಿಂದ ತಂಡಕ್ಕೆ ಮರಳಿದ್ದಾರಾದರೂ ಅವರ ಫಾರ್ಮ್ ಹೇಗಿದೆ ಎಂಬುದಕ್ಕೂ ಸ್ಪಷ್ಟತೆ ಸಿಕ್ಕಿಲ್ಲ. ಹೀಗಾಗಿ ಏಷ್ಯಾಕಪ್ ಸನಿಹವಾಗುತ್ತಿದ್ದಂತೆ ವಿರಾಟ್ ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕು ಎಂಬುದು ಟೀಂ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರ ಅಭಿಪ್ರಾಯವಾಗಿದೆ.

ಇದೀಗ ಈ ಪಟ್ಟಿಗೆ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟರ್ ಎಬಿ ಡಿ ವಿಲಿಯರ್ಸ್ ಕೂಡ ರವಿಶಾಸ್ತ್ರಿ ಮಾತಿಗೆ ಪುಷ್ಠಿ ನೀಡುವಂತಹ ಹೇಳಿಕೆ ನೀಡಿದ್ದಾರೆ. ‘360 ಶೋ' ನಲ್ಲಿ ಈ ಬಗ್ಗೆ ಮಾತನಾಡಿರುವ ಎಬಿ ಡಿ ವಿಲಿಯರ್ಸ್ ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರೆ ಒಳಿತು ಎಂದಿದ್ದಾರೆ.

ಈ ಬಗ್ಗೆ ಮಾತನಾಡಿರುವ ಎಬಿಡಿ, ಕೊಹ್ಲಿ ನಾಲ್ಕನೇ ಕ್ರಮಾಂದಲ್ಲಿ ಆಡಬೇಕೆನ್ನುವ ಹೇಳಿಕೆಗೆ ನಾನು ಕೂಡ ಬೆಂಬಲಿಗನಾಗಿದ್ದೇನೆ. ಕೊಹ್ಲಿ 4 ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಪರಿಪೂರ್ಣ ಆಟಗಾರ ಎಂದು ನಾನು ಭಾವಿಸುತ್ತೇನೆ. ಮಧ್ಯಮ ಕ್ರಮಾಂಕದಲ್ಲಿ ಯಾವುದೇ ರೀತಿಯ ಪಾತ್ರವನ್ನು ನಿರ್ವಹಿಸುವ ಸಾಮಥ್ಯ್ರ ಕೊಹ್ಲಿಗಿದೆ.

ಆದರೆ ಈ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಕೊಹ್ಲಿ ಬಯಸುತ್ತಾರೆಯೇ ಎಂದು ನನಗೆ ತಿಳಿದಿಲ್ಲ. ಆದರೆ ತಂಡಕ್ಕೆ ಅವಶ್ಯಕತೆ ಇದ್ದಾಗ ಮತ್ತು ಆ ಪಾತ್ರವನ್ನು ನಿರ್ವಹಿಸುವ ಅನಿವಾರ್ಯತೆ ಇದ್ದಾಗ ಕೊಹ್ಲಿ ಅದಕ್ಕೆ ಸಮ್ಮತಿ ಸೂಚಿಸಬೇಕು ಎಂದು ಡಿವಿಲಿಯರ್ಸ್ ಹೇಳಿದ್ದಾರೆ.

ಆದರೆ ಇದೀಗ ವರದಿಯಾಗಿರುವ ಪ್ರಕಾರ ಟೀಂ ಇಂಡಿಯಾ ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಅವರನ್ನು ಆಡಿಸುವುದು ಪಕ್ಕ ಆಗಿದೆ. ಇದಕ್ಕೆ ಪೂರಕವಾಗಿ ಪ್ರಸ್ತುತ ಟೀಂ ಇಂಡಿಯಾ ಬೆಂಗಳೂರಿನ ಆಲೂರಿನಲ್ಲಿ ತರಬೇತಿ ಶಿಬಿರ ನಡೆಸುತ್ತಿದೆ. ಅಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುವ ವೇಳೆ ಕೊಹ್ಲಿ ತಮ್ಮ ಎಂದಿನ ಕ್ರಮಾಂದಲ್ಲಿ (3ನೇ ಕ್ರಮಾಂಕದಲ್ಲಿ) ಬ್ಯಾಟಿಂಗ್ ಅಭ್ಯಾಸ ಮಾಡಿದ್ದಾರೆ.

ಹೀಗಾಗಿ ಪ್ರಮುಖ ಟೂರ್ನಿಗಳನ್ನು ಮುಂದಿಟ್ಟುಕೊಂಡು ಕೊಹ್ಲಿಯ ಬ್ಯಾಟಿಂಗ್ ಕ್ರಮಾಂಕವನ್ನು ಬದಲಿಸುವ ಗೋಜಿಗೆ ಆಡಳಿತ ಮಂಡಳಿ ಹೋಗವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಇನ್ನು ಈ ಏಷ್ಯಾಕಪ್ನಲ್ಲಿ ಟೀಂ ಇಂಡಿಯಾ ಸೆಪ್ಟಂಬರ್ 2 ರಂದು ತನ್ನ ಮೊದಲ ಪಂದ್ಯವನ್ನಾಡಲಿದ್ದು, ತಂಡದ ಬ್ಯಾಟಿಂಗ್ ಕ್ರಮಾಂಕ ಹೇಗಿರಲಿದೆ ಎಂಬುದು ಆ ಪಂದ್ಯದಲ್ಲಿ ತಿಳಿಯಲಿದೆ.
























