ಈ ಪಂದ್ಯದಲ್ಲಿ ರಾಯುಡು ಅವರಿಂದ ಉತ್ತಮ ಇನ್ನಿಂಗ್ಸ್ ನಿರೀಕ್ಷಿಸಲಾಗಿತ್ತು. ಆದರೆ ನಿರೀಕ್ಷೆಗೆ ತಕ್ಕಂತೆ ಬ್ಯಾಟ್ ಬೀಸಲು ರಾಯುಡುಗೆ ಸಾಧ್ಯವಾಗಲಿಲ್ಲ. ತಂಡದ ಇನ್ನಿಂಗ್ಸ್ ಸಂಕಷ್ಟದಲ್ಲಿದ್ದಾಗ ಬ್ಯಾಟಿಂಗ್ಗೆ ಬಂದ ರಾಯುಡು, ಇನ್ನಿಂಗ್ಸ್ ನಿಭಾಯಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು ಆದರೆ ಅವರು ಗುಡ್ಕೇಶ್ ಮೋತಿ ಅವರ ಸ್ಪಿನ್‌ಗೆ ಸಿಲುಕಿ, 24 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 32 ರನ್ ಗಳಿಸಿ ಔಟಾದರು.