- Kannada News Photo gallery BYD Atto 3 EV Special Edition launched at Rs. 34.49 lakh, check out specs, features and images
Auto Expo 2023: ಐಷಾರಾಮಿ ಫೀಚರ್ಸ್ ಹೊಂದಿರುವ ಬಿವೈಡಿ ಅಟ್ಟೊ 3 ಸ್ಪೆಷಲ್ ಎಡಿಷನ್ ಬಿಡುಗಡೆ
ಬಿವೈಡಿ ಇಂಡಿಯಾ ಕಂಪನಿ ಭಾರತದಲ್ಲಿ ತನ್ನ ಹೊಸ ಅಟ್ಟೊ 3 ಎಲೆಕ್ಟ್ರಿಕ್ ಎಸ್ ಯುವಿ ಕಾರಿನ ಸ್ಪೆಷಲ್ ಎಡಿಷನ್ ಅನ್ನು ದೆಹಲಿ ಆಟೋ ಎಕ್ಸ್ ಪೋದಲ್ಲಿ ಬಿಡುಗಡೆ ಮಾಡಿದೆ. ಹೊಸ ಕಾರು ಮಾದರಿಯು ವಿಶೇಷ ಬಣ್ಣದ ಆಯ್ಕೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಕೇವಲ 1,200 ಯುನಿಟ್ ಮಾತ್ರ ಖರೀದಿಗೆ ಲಭ್ಯವಿರಲಿವೆ.
Updated on:Jan 13, 2023 | 7:50 PM

ದೆಹಲಿಯಲ್ಲಿ ನಡೆಯುತ್ತಿರುವ 2023ರ ಆಟೋ ಎಕ್ಸ್ ಪೋದಲ್ಲಿ ಬಿವೈಡಿ ಹೊಸ ಅಟ್ಟೊ 3 ಎಲೆಕ್ಟ್ರಿಕ್ ಕಾರಿನ ಸ್ಪೆಷಲ್ ಎಡಿಷನ್ ಬಿಡುಗಡೆಯಾಗಿದೆ.

ಭಾರತದಲ್ಲಿ ಕೇವಲ 1,200 ಯುನಿಟ್ ಮಾತ್ರ ಖರೀದಿಗೆ ಲಭ್ಯವಿರುವ ಅಟ್ಟೊ 3 ಸ್ಪೆಷಲ್ ಎಡಿಷನ್ ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 34.49 ಲಕ್ಷ ಬೆಲೆ ಹೊಂದಿದೆ.

ಸ್ಪೆಷಲ್ ಎಡಿಷನ್ ನಲ್ಲಿ ವಿಶೇಷ ಫೀಚರ್ಸ್ ಗಳೊಂದಿಗೆ ಆಕರ್ಷಕವಾದ ಫಾರೆಸ್ಟ್ ಗ್ರಿನ್ ಬಣ್ಣದ ಆಯ್ಕೆಯನ್ನು ಪರಿಚಯಿಸಲಾಗಿದೆ.

ಸ್ಪೆಷಲ್ ಎಡಿಷನ್ ನಲ್ಲಿ ಹೊಸ ಬಣ್ಣದ ಆಯ್ಕೆಯೊಂದಿಗೆ ಡ್ಯುಯಲ್ ಟೋನ್ ಅಲಾಯ್ ವ್ಹೀಲ್, ಕಾಂಟ್ರಾಸ್ಟಿಂಗ್ ಬ್ಲ್ಯಾಕ್ ಕಲರ್ಡ್ ಡೋರ್ ಮತ್ತು ರಿಯರ್ ವ್ಯೂ ಮಿರರ್ ಜೋಡಣೆ ಮಾಡಲಾಗಿದೆ.

ವಿಶೇಷ ಆವೃತ್ತಿಯು ಫಾರೆಸ್ಟ್ ಗ್ರಿನ್ ಬಣ್ಣದ ಆಯ್ಕೆ ಹೊರುತುಪಡಿಸಿ ಸ್ಟ್ಯಾಂಡರ್ಡ್ ಮಾದರಿಯಲ್ಲಿವಂತೆಯೇ ಬಹುತೇಕ ತಾಂತ್ರಿಕ ಅಂಶಗಳನ್ನು ಹೊಂದಿದೆ.

ಹೊಸ ಇವಿ ಕಾರಿನಲ್ಲಿ ಬಿವೈಡಿ ಕಂಪನಿಯು 60.48kWh ಬ್ಲೇಡ್ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದ್ದು, ಇದು ಪ್ರತಿ ಚಾರ್ಜ್ ಗೆ ಗರಿಷ್ಠ 521 ಕಿ.ಮೀ ಮೈಲೇಜ್ ನೀಡುತ್ತದೆ.

ಭಾರತದಲ್ಲಿ ಇ6 ಎಂಪಿವಿ ನಂತರ ಅಟ್ಟೊ 3 ಕಾರಿನ ಮೂಲಕ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿರುವ ಬಿವೈಡಿ ಕಂಪನಿಯು ಇದುವರೆಗೆ ಸುಮಾರು 2 ಸಾವಿರ ಗ್ರಾಹಕರಿಂದ ಬುಕಿಂಗ್ ಪಡೆದುಕೊಂಡಿದೆ.
Published On - 7:50 pm, Fri, 13 January 23



















