Cardamom Benefits: ದಿನವೂ ಏಲಕ್ಕಿ ಬಳಸುವುದರಿಂದಾಗುವ 10 ಪ್ರಯೋಜನಗಳಿವು
ನೀವೇನಾದರೂ ತೂಕ ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಪ್ರತಿದಿನ ಒಂದು ಏಲಕ್ಕಿಯನ್ನು ತಿನ್ನಬೇಕು. ಮಲಬದ್ಧತೆ ನಿವಾರಿಸಲು ಕೂಡ ಏಲಕ್ಕಿ ಸಹಕಾರಿಯಾಗಿದೆ. ಏಲಕ್ಕಿಯನ್ನು ಮೌತ್ ಫ್ರೆಷನರ್ ರೀತಿಯಲ್ಲೂ ಬಳಸಬಹುದು. ಏಲಕ್ಕಿ ಸೇವನೆಯಿಂದ ಜೀರ್ಣಶಕ್ತಿಯೂ ವೃದ್ಧಿಯಾಗುತ್ತದೆ.
1 / 12
ನಾವು ಅಡುಗೆಗೆ ಬಳಸುವ ಮಸಾಲೆ ಪದಾರ್ಥಗಳಲ್ಲಿ ಇರುವ ಏಲಕ್ಕಿ ಆರೋಗ್ಯದ ದೃಷ್ಟಿಯಿಂದಲೂ ಬಹಳ ಉಪಯುಕ್ತವಾದುದು. ಬಾಯಿ ವಾಸನೆ ನಿವಾರಿಸುವುದರಿಂದ ಹಿಡಿದು ತೂಕ ಇಳಿಕೆ ಮಾಡುವವರೆಗೆ ಏಲಕ್ಕಿಯಿಂದ ಹಲವು ಪ್ರಯೋಜನಗಳಿವೆ.
2 / 12
ರಾತ್ರಿ ಮಲಗುವ ಮುನ್ನ ಒಂದು ಸಣ್ಣ ಏಲಕ್ಕಿಯನ್ನು ಕಚ್ಚಿ ಬಾಯಲ್ಲಿ ಇಟ್ಟುಕೊಂಡರೆ ಅದರಿಂದ ಸಾಕಷ್ಟು ಉಪಯೋಗವಾಗುತ್ತದೆ. ನೀವೇನಾದರೂ ತೂಕ ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಪ್ರತಿದಿನ ಒಂದು ಏಲಕ್ಕಿಯನ್ನು ತಿನ್ನಬೇಕು.
3 / 12
ಏಲಕ್ಕಿಯ ಒಳಗೆ ಒಂದು ವಿಧವಾದ ಎಣ್ಣೆ ಇರುತ್ತದೆ. ಮಲಗುವಾಗ ಅದನ್ನು ಬಾಯಿಯಲ್ಲಿ ಇಟ್ಟಾಗ, ಎಣ್ಣೆಯು ದೇಹದ ಒಳಗೆ ಹೋಗುತ್ತದೆ. ಇದು ಹೊಟ್ಟೆಯ ಒಳಭಾಗವನ್ನು ಬಲಪಡಿಸುತ್ತದೆ. ಕಿಬ್ಬೊಟ್ಟೆಯಲ್ಲಿ ಸೇರಿರುವ ಆಮ್ಲವನ್ನು ಕ್ರಮೇಣ ತೆಗೆದುಹಾಕಲಾಗುತ್ತದೆ.
4 / 12
ಗೊರಕೆ ಸಮಸ್ಯೆಗೆ ಪರಿಹಾರವೇನೆಂದು ಬಹಳಷ್ಟು ಜನರು ನಾನಾ ಪ್ರಯೋಗಗಳನ್ನು ಮಾಡುತ್ತಾರೆ. ಆದರೆ, ರಾತ್ರಿ ಏಲಕ್ಕಿ ತಿಂದರೆ ಗೊರಕೆ ಸಮಸ್ಯೆಯೂ ಕಡಿಮೆಯಾಗುತ್ತದೆ.
5 / 12
ಮಲಬದ್ಧತೆ ನಿವಾರಿಸಲು ಕೂಡ ಏಲಕ್ಕಿ ಸಹಕಾರಿಯಾಗಿದೆ.
6 / 12
ಏಲಕ್ಕಿಯನ್ನು ಮೌತ್ ಫ್ರೆಷನರ್ ರೀತಿಯಲ್ಲೂ ಬಳಸಬಹುದು.
7 / 12
ಏಲಕ್ಕಿ ಸೇವನೆಯಿಂದ ಜೀರ್ಣಶಕ್ತಿಯೂ ವೃದ್ಧಿಯಾಗುತ್ತದೆ.
8 / 12
ಅಸ್ತಮಾ, ಮಧುಮೇಹ (ಡಯಾಬಿಟಿಸ್), ಹೃದಯ ಸಂಬಂಧಿ ಸಮಸ್ಯೆಗಳಿಗೂ ಏಲಕ್ಕಿಯಿಂದ ಪರಿಹಾರ ಸಿಗುತ್ತದೆ.
9 / 12
ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರು ಕೂಡ ನಿಯಮಿತವಾಗಿ ಏಲಕ್ಕಿ ಬಳಸಿದರೆ ಪರಿಣಾಮ ಖಂಡಿತ ಗೊತ್ತಾಗಲಿದೆ.
10 / 12
ಏಲಕ್ಕಿಯಲ್ಲಿರುವ ಸಂಯುಕ್ತಗಳು ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
11 / 12
ಪುರುಷರು ದಿನವೂ ರಾತ್ರಿ ಒಂದು ಏಲಕ್ಕಿ ತಿನ್ನುವುದರಿಂದ ಲೈಂಗಿಕ ದೌರ್ಬಲ್ಯದಿಂದ ಪಾರಾಗಿ, ಲೈಂಗಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಬಹುದು ಎಂದು ಸಂಶೋಧನೆಯೊಂದು ಹೇಳಿದೆ.
12 / 12
ಪುಡಿ ರೂಪದಲ್ಲಿ ತೆಗೆದುಕೊಂಡಾಗ, ಏಲಕ್ಕಿಯು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುತ್ತದೆ.