Updated on: Apr 06, 2024 | 3:23 PM
ನಟಿ ಚೈತ್ರಾ ಆಚಾರ್ ಅವರು ಸಮಯ ಸಿಕ್ಕಾಗಲೆಲ್ಲ ಹೊಸ ಹೊಸ ಫೋಟೋಶೂಟ್ ಮಾಡಿಸುತ್ತಾ ಇರುತ್ತಾರೆ. ಈಗ ಅವರು ಹಂಚಿಕೊಂಡಿರೋ ಫೋಟೋಗಳು ಗಮನ ಸೆಳೆದಿವೆ. ಈ ಫೋಟೋಗೆ ಭರ್ಜರಿಗೆ ಲೈಕ್ಸ್ ಸಿಕ್ಕಿದೆ.
ಚೈತ್ರಾ ಅವರು ಸಖತ್ ಬೋಲ್ಡ್ ಆಗಿ ಕಾಣಿಸಿಕೊಳ್ಳೋಕೆ ಇಷ್ಟಪಡುತ್ತಾರೆ. ಈಗ ಹಂಚಿಕೊಂಡಿರುವ ಫೋಟೋಗಳಲ್ಲೂ ಅವರಿಗೆ ಮಾದಕ ಲುಕ್ ಇದೆ. ಈ ಕಾರಣಕ್ಕೆ ಅವರು ಸಖತ್ ಇಷ್ಟ ಆಗಿದ್ದಾರೆ.
ಚೈತ್ರಾ ಆಚಾರ್ ಅವರು ಫೋಟೋ ಹಂಚಿಕೊಂಡರೆ ಒಂದಷ್ಟು ಮಂದಿ ನೆಗೆಟಿವ್ ಕಮೆಂಟ್ ಮಾಡೋಕೆ ಕಾಯುತ್ತಾ ಇರುತ್ತಾರೆ. ಈ ಕಾರಣಕ್ಕೆ ಅವರು ಫೋಟೋಗಳಿಗೆ ಕಮೆಂಟ್ ಆಯ್ಕೆಯನ್ನು ಆಫ್ ಮಾಡಿದ್ದಾರೆ.
ಅಭಿಮಾನಿಗಳು ಬಟ್ಟೆ ಬಗ್ಗೆ ಕಮೆಂಟ್ ಮಾಡೋದು ಚೈತ್ರಾಗೆ ಯಾವಾಗಲೂ ಇಷ್ಟ ಆಗುವುದೇ ಇಲ್ಲ. ಈ ವಿಚಾರವನ್ನು ಅವರು ಸಂದರ್ಶನದಲ್ಲಿ ಈ ಮೊದಲು ಹೇಳಿಕೊಂಡಿದ್ದು ಇದೆ. ಈ ವೇಳೆ ಕಣ್ಣೀರು ಹಾಕಿದ್ದಾರೆ.
ಹಲವು ಸಿನಿಮಾಗಳಲ್ಲಿ ಚೈತ್ರಾ ಆಚಾರ್ ನಟಿಸಿದ್ದಾರೆ. ‘ಟೋಬಿ’, ‘ಸಪ್ತ ಸಾಗರದಾಚೆ ಎಲ್ಲೋ 2’ ರೀತಿಯ ಸಿನಿಮಾಗಳು ಅವರ ಜನಪ್ರಿಯತೆಯನ್ನು ಹೆಚ್ಚಿಸಿವೆ. ನಟನೆಯಲ್ಲಿ ಅವರು ತಮ್ಮನ್ನು ತಾವು ಸಾಬೀತು ಮಾಡಿಕೊಂಡಿದ್ದಾರೆ.