
ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಮಾನತೆಯ ಮೂರ್ತಿ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸಿದ ಚಿನ್ನ ಜೀಯರ್ ಸ್ವಾಮೀಜಿ

ಪ್ರತಿಮೆ ಸ್ಥಾಪನೆಯ ಹಿಂದಿನ ಆಶಯವನ್ನರಿತು ಪ್ರಧಾನಿ ನರೇಂದ್ರ ಮೋದಿ ಹರ್ಷಗೊಂಡು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ರಾಮಾನುಜಾಚಾರ್ಯರ 1000ನೇ ಜನ್ಮೋತ್ಸವಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿದ ಚಿನ್ನ ಜೀಯರ್ ಸ್ವಾಮೀಜಿ. ಈಮುನ್ನ ಚಿನ್ನ ಜೀಯರ್ ಸ್ವಾಮೀಜಿ ಗೃಹ ಸಚಿವ ಅಮಿತ್ ಶಾ ಅವರಿಗೂ ಆಹ್ವಾನ ನೀಡಿದ್ದರು.

ಹೈದರಾಬಾದ್ನ ಶಮ್ಸಾಬಾದ್ನ ಆಶ್ರಮದಲ್ಲಿ ರಾಮಾನುಜರ ಪ್ರತಿಮೆಗೆ ಪೂಜೆ ಸಲ್ಲಿಸುವ ಮೂಲಕ 100ನೇ ಜನ್ಮ ದಿನೋತ್ಸವವನ್ನು ಆರಂಭಿಸಲಾಗುವುದು.

ಈ ಪ್ರತಿಮೆಯು 216 ಅಡಿ ಎತ್ತರವಿದ್ದು, ಸಮಾನತೆಯ ಪ್ರತಿಮೆ ಎಂದು ಹೆಸರಿಸಲಾಗಿದೆ. ಜಾತಿಬೇಧ ಇಲ್ಲದೆ, ಮಾನವಸಂಕುಲದ ಉನ್ನತಿಗೆ ಕೆಲಸ ಮಾಡಿದ ರಾಮಾನುಜರ ನೆನಪಿಗೆ ಈ ಪ್ರತಿಮೆ ನಿರ್ಮಿಸಲಾಗಿದೆ. ಈ ಶೂಭ ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಚಿನ್ನ ಜೀಯಾರ ಸ್ವಾಮೀಜಿ ಆಹ್ವಾನಿಸಿದರು.

ಸಮಾನತೆಯ ಮೂರ್ತಿ: ಈ ಸಮಾನತೆಯ ಪ್ರತಿಮೆಯನ್ನು 200 ಎಕರೆ ಭೂಮಿಯಲ್ಲಿ ನಿರ್ಮಿಸಲಾಗಿದೆ. ಹೈದರಾಬಾದ್ನ ಹೊರವಲಯದಲ್ಲಿ ಇರುವ ಶಮ್ಸಾಬಾದ್ನ ಮುಚಿಂತಾಲ್ ಎಂಬಲ್ಲಿ ಇದೆ.

ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಕೂಡ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ಈ ಭವ್ಯ ಕಾರ್ಯಕ್ರಮಕ್ಕೆ ಸಂಬಂಧಿಸಿ ಹೆಚ್ಚಿನ ಮಾಹಿತಿಗಾಗಿ +91 790 14 2 2022 ಅಥವಾ Srs.samaroham@statueofequality.org ಮೈಲ್ ಮೂಲಕ ಸಂಪರ್ಕಿಸಬಹುದು. ಅಥವಾ Statueofequality.org ಜಾಲತಾಣ ವೀಕ್ಷಿಸಬಹುದು.

ಸಿಜೆಐ ಎನ್ವಿ ರಮಣರನ್ನು ಆಹ್ವಾನಿಸಿದ ಚಿನ್ನ ಜೀಯರ್ ಸ್ವಾಮಿ

ರಾಮಾನುಜಾಚಾರ್ಯರ 1000ನೇ ಜನ್ಮೋತ್ಸವಕ್ಕೆ ರಾಷ್ಟ್ರಪತಿಗಳನ್ನು ಆಹ್ವಾನಿಸಿದ ಚಿನ್ನ ಜೀಯರ್ ಸ್ವಾಮಿ

ಸಂತ ಶ್ರೀರಾಮಾನುಜಾಚಾರ್ಯರ ಸಹಸ್ರಮಾನೋತ್ಸವಕ್ಕೆ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಗೆ ಆಮಂತ್ರಣ ನೀಡಲಾಗಿದೆ. ಶ್ರೀ ಚಿನ್ನ ಜೀಯರ್ ಸ್ವಾಮೀಜಿ ಸಿಎಂ ಸ್ಟಾಲಿನ್ ಅವರನ್ನು ಆಹ್ವಾನಿಸಿದರು. ಮೈ ಹೋಮ್ ಗ್ರೂಪ್ ಚೇರ್ಮನ್ ಡಾ.ಜೆ.ರಾಮೇಶ್ವರ್ ರಾವ್ ಅವರು ಶ್ರೀರಾಮಾನುಜಾಚಾರ್ಯರ ಸಮಾನತೆ ಪ್ರತಿಮೆ ಹಾಗೂ ಸಹಸ್ರಾಬ್ಧಿ ಉತ್ಸವದ ಬಗ್ಗೆ ಮಾಹಿತಿ ನೀಡಿದ್ರು. 2022ರ ಫೆಬ್ರವರಿ 2ರಿಂದ 14ರವರೆಗೂ ಮಹೋತ್ಸವ ನಡೆಯಲಿದೆ.
Published On - 5:19 pm, Sat, 18 September 21