ಜ್ಯೂ.ಎನ್ಟಿಆರ್ಗೂ ಈ ಯುವಕನಿಗೂ ಎಷ್ಟೊಂದು ಸಾಮ್ಯತೆ!; ಫೋಟೋ ನೋಡಿ ಗೊಂದಲಕ್ಕೆ ಬಿದ್ದ ಅಭಿಮಾನಿಗಳು
Jr NTR: ಖ್ಯಾತ ತಾರೆಯರಂತೆಯೇ ಇರುವ ವ್ಯಕ್ತಿಗಳು ಆಗಾಗ ಸುದ್ದಿಯಾಗುತ್ತಾರೆ. ಇದೀಗ ತೆಲುಗಿನ ಖ್ಯಾತ ನಟ ಜ್ಯೂ.ಎನ್ಟಿಆರ್ ಅವರನ್ನೇ ಹೋಲುವ ವ್ಯಕ್ತಿಯೊಬ್ಬ ನೆಟ್ಟಿಗರ ಮನಗೆದ್ದಿದ್ದಾನೆ. ಈರ್ವರ ನಡುವಿನ ಸಾಮ್ಯತೆಯನ್ನು ತಿಳಿಸುವ ಚಿತ್ರಗಳು ಇಲ್ಲಿವೆ.
Updated on: Sep 18, 2021 | 6:51 PM

ಬಾಲಿವುಡ್ ಹಾಗೂ ಹಾಲಿವುಡ್ ನಟ, ನಟಿಯರ ಮಾದರಿಯಲ್ಲಿಯೇ ಕಾಣುವ ಹಲವರ ಚಿತ್ರಗಳನ್ನು ನೋಡಿರುತ್ತೀರಿ. ಇತ್ತೀಚೆಗಷ್ಟೇ ಐಶ್ವರ್ಯಾ ರೈಯಂತೆ ಕಾಣುವ ಯುವತಿಯೊಬ್ಬಳ ಚಿತ್ರಗಳು ವೈರಲ್ ಆಗಿದ್ದವು. ಆದರೆ ಇದೀಗ ತೆಲುಗಿನ ಜ್ಯೂ.ಎನ್ಟಿಆರ್ ಅವರನ್ನೇ ಹೋಲುವ ವ್ಯಕ್ತಿಯೊಬ್ಬರು ಅಂತರ್ಜಾಲದಲ್ಲಿ ಸಖತ್ ಸೌಂಡ್ ಮಾಡುತ್ತಿದ್ದಾರೆ.

ಪಂಜಾಂಬ್ನ ಬಟಿಂಡಾ ನಿವಾಸಿಯಾಗಿರುವ ಶಮೀಂದ್ರ ಸಿಂಗ್ ಸದ್ಯ ಎಲ್ಲರನ್ನೂ ಗಮನ ಸೆಳೆಯುತ್ತಿರುವ ಯುವಕ. ಅವರು ನೋಡಲು ಥೇಟ್ ಜ್ಯೂ.ಎನ್ಟಿಆರ್ರಂತೆಯೇ ಇದ್ದಾರೆ.

ಸಿಖ್ ಧರ್ಮಕ್ಕೆ ಸೇರಿದ ಶಮೀಂದ್ರ ಮೊದಲು ಉದ್ದನೆಯ ಕೂದಲನ್ನು ಹೊಂದಿದ್ದರು. ಆದರೆ ಅವರು ಕೂದಲನ್ನು ಕತ್ತರಿಸಿದ ನಂತರ, ಅವರು ತಮ್ಮ ಸುತ್ತಮುತ್ತಲಿನ ಜನರಿಂದ ಜ್ಯೂ.ಎನ್ಟಿಆರ್ ಎಂದೇ ಗುರುತಿಸಿಕೊಳ್ಳತೊಡಗಿದರಂತೆ.

ಥೇಟ್ ತೆಲುಗು ನಟನಂತೆ ಕಾಣುವ ಅವರು ಆಗಾಗ ಸಾಮಾಜಿಕ ಜಾಲತಾಣದಲ್ಲಿ, ಜ್ಯೂ.ಎನ್ಟಿಆರ್ ಅವರ ವಿಡಿಯೊಗಳನ್ನು ಹಂಚಿಕೊಳ್ಳುತ್ತಾರೆ.

ಶಮೀಂದ್ರ ಅವರಿಗೆ ಸಂಪೂರ್ಣವಾಗಿ ತೆಲುಗು ಮಾತನಾಡಲು ಅಥವಾ ಅರ್ಥವಾಗುವುದಿಲ್ಲ. ಆದರೆ ಅವರು ಭಾಷೆಗೆ ತುಟಿಯ ಚಲನೆಯನ್ನು ಹೊಂದಿಸಬಲ್ಲರು. ಆದ್ದರಿಂದಲೇ ಅವರು ತಮ್ಮ ವಿಡಿಯೊಗಳಿಂದ ಗಮನ ಸೆಳೆದಿದ್ದಾರೆ.

ಶಮೀಂದ್ರ ಸಿಂಗ್ ಜ್ಯೂ.ಎನ್ಟಿಆರ್ ಅವರ ದೊಡ್ಡ ಅಭಿಮಾನಿಯಂತೆ. ಅವರನ್ನು ಭೇಟಿ ಆಗಬೇಕು ಎನ್ನುವುದು ಶಮೀಂದ್ರರ ಅವರ ಕನಸು.




