ದಾವಣಗೆರೆ ಪ್ರಸಿದ್ಧ ರಸ್ತೆಯಲ್ಲಿ ಚಿತ್ರ ಸಂತೆ ಆಯೋಜನೆ; ಇಲ್ಲಿದೆ ಝಲಕ್
ಈ ರಸ್ತೆಯಲ್ಲಿ ನಿತ್ಯ ವಾಹನ ದಟ್ಟಣೆ, ರಸ್ತೆ ದುರಂತ, ಮೇಲಾಗಿ ಇದೊಂದು ಬೆಣ್ಣೆ ನಗರಿಗರ ಪಾಲಿಗೆ ಬೆಂಗಳೂರಿನ ಎಂಜಿ ರೋಡ್ ಇದ್ದಂತೆ. ಇಂತಹ ರಸ್ತೆಯಲ್ಲಿ ಇಂದು ಹಕ್ಕಿಗಳ ಹಾರಾಟ, ಕ್ಯಾನ್ವಾಸ್ ಮೇಲೆ ಅರಳಿದ ಅದ್ಬುತ ನಿಸರ್ಗದ ನೋಟ. ಮುಂದೆ ಬಂದು ಕುಳಿತರೇ ಸಾಕು ಕ್ಷಣಾರ್ಧದಲ್ಲಿ ನಿಮ್ಮ ಕಲಾಕೃತಿಗೆ ಪೆನ್ಸಿಲ್ನಲ್ಲಿ ಜೀವ. ಹೀಗೆ ಹತ್ತಾರು ಆಯಾಮಗಳಿಗೆ ವೇದಿಕೆ ಆಗಿತ್ತು ಆ ಪ್ರಸಿದ್ಧ ರಸ್ತೆ. ಇಲ್ಲಿದೆ ನೋಡಿ ವಿಶೇಷ ಚಿತ್ರ ಸಂತೆಯ ಝಲಕ್.
1 / 6
ದಾವಣಗೆರೆ ಇತಿಹಾಸದಲ್ಲಿಯೇ ಕಲಾ ಆಸಕ್ತರು ಇಷ್ಟು ಸಂಖ್ಯೆಯಲ್ಲಿ ಇದ್ದಾರೆ ಎಂದು ನಿನ್ನೆ(ಮಾ.02) ದಾವಣಗೆರೆ ಪ್ರಸಿದ್ಧ ರಸ್ತೆಯಲ್ಲಿ ಆಯೋಜಿಸಿದ್ದ ಚಿತ್ರಸಂತೆಯಿಂದ ಗೊತ್ತಾಗಿದೆ. ನಗರದ ಎವಿಕೆ ರಸ್ತೆ ಅಂದ್ರೆ ಇಲ್ಲಿ ಪ್ರಸಿದ್ದಿ, ಎವಿ ಕಮಲಮ್ಮ ಎಂಬ ಮಹಿಳಾ ಕಾಲೇಜು ಕೂಡ ಇದೆ. ಈ ಕಾಲೇಜಿನ ಹೆಸರನ್ನೇ ಈ ರಸ್ತೆಗೆ ಇಡಲಾಗಿದೆ. ಇದೇ ಕಾರಣಕ್ಕೆ ಈ ರಸ್ತೆಗೆ ಇನ್ನಷ್ಟು ಮೆರಗು ಬಂದಿದೆ.
2 / 6
ಹೊಸ ದಾವಣಗೆರೆಯಿಂದ ಹಳೇ ದಾವಣಗೆರೆಗೆ ಸಂಪರ್ಕ ಕಲ್ಪಿಸುವ ಎಕಮುಖ ರಸ್ತೆ ಇದಾಗಿದ್ದು, ಇಡೀ ನಗರದಲ್ಲಿ ಇಷ್ಟು ಸ್ಮಾರ್ಟ ಇರುವ ಯಾವುದೇ ರಸ್ತೆ ಕಾಣಲ್ಲ. ಪ್ರಸಿದ್ಧ ಅಂಗಡಿಗಳು. ರಸ್ತೆ ಬದಿ ವ್ಯಾಪಾರಕ್ಕೆ ಇದು ಪ್ರಸಿದ್ಧ ರಸ್ತೆ. ಇಂತಹ ರಸ್ತೆಯಲ್ಲಿ ಅಂಗಡಿಗಳು ಬಂದ್ ಆಗಿದ್ದವು. ಬದಲಿಗೆ ರಸ್ತೆಯ ಎರಡು ಬದಿಯಲ್ಲಿ ಸ್ಟಾಲ್ಗಳು ತಲೆ ಎತ್ತಿದ್ದವು.
3 / 6
ದಾವಣಗೆರೆ ಕಲಾ ಅಕಾಡಮೆಯವರು ಒಂದು ದಿನದ ಚಿತ್ರ ಸಂತೆ ಆಯೋಜಿಸಿದ್ದರು. ಮಹಾರಾಷ್ಟ್ರ, ರಾಜಸ್ತಾನ ಸೇರಿ ಹಲವಾರು ರಾಜ್ಯ ಹಾಗೂ ಬೀದರ್ದ ಕಟ್ಟಕಡೆಯ ಬಸವಕಲ್ಯಾಣದಿಂದ ಹಿಡಿದು, ಇತ್ತ ಕೊಳ್ಳೇಗಾಲದವರೆಗಿನ ನೂರಾರು ಕಲಾವಿದರು ಇಲ್ಲಿ ಪಾಲ್ಗೊಂಡಿದ್ದರು.
4 / 6
ಲೆಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ವಿಶೇಷ ಅಂದರೆ ಪೋಟೋ ಸ್ಟುಡಿಯೋದಲ್ಲಿ ಕುಳಿತಂತೆ ಹತ್ತು ನಿಮಿಷ ಕುಳಿತರೇ ಸಾಕು ನಿಮ್ಮ ಭಾವ ಚಿತ್ರ ಇಲ್ಲಿ ಕಲಾವಿದರು ಬಿಡಿಸಿಕೊಡುತ್ತಿದ್ದರು. ಯುವ ಕಲಾವಿದರಂತು ಸಖತ್ ಖುಷಿಯಾಗಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರು ಚಿತ್ರ ಸಂತೆಗೆ ಚಾಲನೆ ನೀಡಿದರು.
5 / 6
ನೂರಾರು ಮಹಾತ್ಮರ ಮೂರ್ತಿಗಳನ್ನು ರಾಗಿ,ಗೋಧಿ ಸೇರಿದಂತೆ ಧಾನ್ಯಗಳನ್ನು ಬಳಸಿ ಚಿತ್ರಿಸಲಾಗಿತ್ತು. ಹೀಗೆ ಒಂದಲ್ಲ ಎರಡು ಸಾವಿರಾರು ಪ್ರಕಾರದ ಕಲಾಕೃತಿಗಳ ಪ್ರದರ್ಶನ ಇಲ್ಲಿ ಆಯೋಜನೆ ಆಗಿತ್ತು.
6 / 6
ಒಂದೇ ದಿನದಲ್ಲಿ ಇಲ್ಲಿನ ಲಕ್ಷಾಂತರ ರೂಪಾಯಿ ವ್ಯವಹಾರ ಸಹ ನಡೆಯಿತು ಎಂಬ ಮಾತುಗಳು ಕೇಳಿ ಬಂದವು. ಮೇಲಾಗಿ ಚಿತ್ರ ಸಂತೆ ಪರಿಕಲ್ಪನೆಯೂ ವಿಭಿನ್ನವಾಗಿತ್ತು. ನಗರದ ಪ್ರಮುಖ ರಸ್ತೆಯೇ ಬಂದ್ ಮಾಡಿ ಚಿತ್ರ ಸಂತೆ ನಡೆಸಲಾಗಿತ್ತು. ದಾವಣಗೆರೆ ಚಿತ್ರಕಲಾ ಪರಿಷತ್ತಿನ ಹತ್ತಾರು ಗೆಳೆಯರು ಸೇರಿಕೊಂಡು ಸತತ ಮೂರು ವರ್ಷಗಳಿಂದ ಇಂತಹ ಚಿತ್ರ ಸಂತೆ ರೂಪಿಸಿದ್ದರು. ನಿಜಕ್ಕೂ ದಾವಣಗೆರೆ ಮಟ್ಟಿಗೆ ಇದೊಂದು ಅದ್ಭುತ ಪ್ರಯೋಗ ಅಂದ್ರೆ ತಪ್ಪಾಗಲಿಕ್ಕಿಲ್ಲ.