ಜೈಸ್ವಾಲ್ ಅವರು ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ 700 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಇತಿಹಾಸದ ಮೊದಲ ಭಾರತೀಯ ಬ್ಯಾಟರ್ ಮತ್ತು ಒಟ್ಟಾರೆ ಮೂರನೇ ಆಟಗಾರನಾಗುವ ಅವಕಾಶಹೊಂದಿದ್ದಾರೆ. ಸದ್ಯಕ್ಕೆ, ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಗ್ರಹಾಂ ಗೂಚ್ ಹೆಸರಿನಲ್ಲಿದೆ, ಅವರು 1990 ರಲ್ಲಿ ಇಂಗ್ಲೆಂಡ್‌ನಲ್ಲಿ ಆಡಿದ ಸರಣಿಯಲ್ಲಿ ಒಟ್ಟು 752 ರನ್ ಗಳಿಸಿದ್ದರು.