ಹೀಗೆ ಡೊಳ್ಳು, ತಮಟೆಗಳ ವಾದ್ಯಕ್ಕೆ ತಕ್ಕಂತೆ ಮೈಮೇಲೆ ಸಾಕ್ಷತ್ ಸರ್ಕಲ್ ಮಾರಮ್ಮನೆ ಬಂದಿರುವಂತೆ ಮಹಿಳಾಮಣಿಗಳು ಕುಣಿದು, ತಮ್ಮ ಭಕ್ತಿ ಭಾವ ತೊರ್ಪಡಿಸುತ್ತಿರುವುದು ಚಿಕ್ಕಬಳ್ಳಾಪುರದಲ್ಲಿ.
ಹೌದು, ಕೊರೊನಾ ಸೋಂಕು ಮಾಯವಾದ ಮೇಲೆ ಚಿಕ್ಕಬಳ್ಳಾಪುರ ಗ್ರಾಮ ಜಾತ್ರೆಯ ಪ್ರಯುಕ್ತ ಸ್ವತಃ ಬೆಂಗಳೂರಿನ ಸರ್ಕಲ್ ಮಾರಮ್ಮಳೆ ಚಿಕ್ಕಬಳ್ಳಾಪುರ ನಗರದ ಸರ್. ಎಂ.ವಿ ವೃತ್ತದಲ್ಲಿ ಆಗಮಿಸಿ ಪವಡಿಸಿದ್ದಾಳೆ.
ಬೆಂಗಳೂರಿನ ಸರ್ಕಲ್ ಮಾರಮ್ಮಳನ್ನು ನೋಡಿ ದರ್ಶನ ಪಡೆಯಲು ಆಕೆ ಸಹೋದರ ಸಂಬಂಧಿಗಳು, ಸುತ್ತಮುತ್ತ ಇರುವ ದೇವಾನು ದೇವತೆಗಳು ಮೆರವಣಿಗೆಯಲ್ಲಿ ಆಗಮಿಸಿದ್ರು. ದೇವರ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಮಹಿಳೆಯರು, ತಮಟೆಗಳ ವಾದ್ಯಕ್ಕೆ ತಕ್ಕಂತೆ ಕುಣಿದಿದ್ದು ವಿಶೇಷವಾಗಿತ್ತು.
ಇನ್ನೂ ಕೊರೊನಾ ಸೋಂಕು ಮಾಯವಾದ ನಂತರ ಜನ, ದೇವರ ಜಾತ್ರೆ, ಊರ ಜಾತ್ರೆ, ದೇವರುಗಳಿಗೆ ಶಾಂತಿ-ಸಮಧಾನವೆಂದು ಅತ್ಯಂತ ಸಂತಸ ಸಂಭ್ರಮ ಸಡಗರದಲ್ಲಿ ಮಿಂದು ಸಂತೋಷ ಪಡುತ್ತಿದ್ದಾರೆ.
ಈಗಂತೂ ಚಿಕ್ಕಬಳ್ಳಾಪುರದಲ್ಲಿ ಊರ ಜಾತ್ರೆ ಇರುವ ಕಾರಣ ಎಲ್ಲಿ ನೋಡಿದರೂ, ಎತ್ತ ನೋಡಿದರೂ ಮಹಿಳೆಯರ ಸಂಭ್ರಮ ಸಂತಸ ಮುಗಿಲು ಮುಟ್ಟಿದೆ.
ಚಿಕ್ಕಬಳ್ಳಾಪುರ ಊರ ಹಬ್ಬದ ಪ್ರಯುಕ್ತ ಬೆಂಗಳೂರು ಸೇರಿದ್ದ ಮಹಿಳೆಯರು, ಬಂದು-ಬಳಗ ಕುಟುಂಬ ಸಮೇತರಾಗಿ ಚಿಕ್ಕಬಳ್ಳಾಪುರಕ್ಕೆ ಆಗಮಿಸಿ ಊರ ಜಾತ್ರೆಯಲ್ಲಿ ಸಂತಸ ಪಟ್ಟಿದ್ದಾರೆ.
ಬೆಂಗಳೂರಿನ ಸರ್ಕಲ್ ಮಾರಮ್ಮ, ಬೆಂಗಳೂರಿನಿಂದ ಆಚೆ ಹೋಗಿ ಚಿಕ್ಕಬಳ್ಳಾಪುರ ನಗರದಲ್ಲಿ ಪ್ರತಿಷ್ಠಾಪನೆ ಆಗಿದ್ದು, ಹೀಗೆ ದೇವಾನು ದೇವತೆಗಳ ಉತ್ಸವ ಮೂರ್ತಿಗಳ ಮೆರವಣಿಗೆಯಲ್ಲಿ ಮಹಿಳೆಯರು ಮುಗಿಬಿದ್ದು ನಾನಾ ನೀನಾ ಎಂದು ಕುಣಿದು ಕುಪ್ಪಳಿಸಿದರು.