Clove Benefits: ದಿನಕ್ಕೆ ಒಂದು ಲವಂಗದ ಎಸಳು ಜಗಿಯುವುದರಿಂದ ಪ್ರಯೋಜನವೇನು?

Updated on: Jan 22, 2024 | 1:50 PM

ಲವಂಗದ ಸೇವನೆ ಹಲವಾರು ರೋಗಲಕ್ಷಣಗಳನ್ನು ನಿವಾರಿಸುತ್ತದೆ. ಲವಂಗ ಕೊಲೆಸ್ಟ್ರಾಲ್, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸುವುದರಿಂದ ಹಿಡಿದು ಮೂಳೆಯ ಆರೋಗ್ಯವನ್ನು ಸುಧಾರಿಸುವವರೆಗೆ ಅನೇಕ ಪ್ರಯೋಜನಗಳನ್ನು ಹೊಂದಿದೆ.

1 / 13
ಲವಂಗದಿಂದ ನಮ್ಮ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಲವಂಗ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿರುವ ಮಸಾಲೆ ಪದಾರ್ಥವಾಗಿದೆ.

ಲವಂಗದಿಂದ ನಮ್ಮ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಲವಂಗ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿರುವ ಮಸಾಲೆ ಪದಾರ್ಥವಾಗಿದೆ.

2 / 13

ಲವಂಗ ನಿಮ್ಮ ದೇಹಕ್ಕೆ ಅನೇಕ ಪೋಷಕಾಂಶಗಳನ್ನು ಒದಗಿಸುತ್ತದೆ. ಇದು ರೋಗಗಳು ಮತ್ತು ಸೋಂಕುಗಳನ್ನು ದೂರ ಇಡುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

3 / 13

ಲವಂಗ ಕೀಲು ನೋವು, ವಾಕರಿಕೆ, ಹೊಟ್ಟೆನೋವು, ಗ್ಯಾಸ್ಟ್ರಿಕ್, ಹಲ್ಲಿನ ಆರೋಗ್ಯದ ತೊಂದರೆಯನ್ನು ಕಡಿಮೆ ಮಾಡುತ್ತದೆ.

4 / 13

ಲವಂಗದ ಸೇವನೆ ಹಲವಾರು ರೋಗಲಕ್ಷಣಗಳನ್ನು ನಿವಾರಿಸುತ್ತದೆ. ಲವಂಗ ಕೊಲೆಸ್ಟ್ರಾಲ್, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸುವುದರಿಂದ ಹಿಡಿದು ಮೂಳೆಯ ಆರೋಗ್ಯವನ್ನು ಸುಧಾರಿಸುವವರೆಗೆ ಅನೇಕ ಪ್ರಯೋಜನಗಳನ್ನು ಹೊಂದಿದೆ.

5 / 13

ಲವಂಗ ಹೃದ್ರೋಗ ಮತ್ತು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ದಿನಕ್ಕೆ ಒಂದು ಲವಂಗವನ್ನು ಅಗಿಯುವುದರಿಂದ ನಿಮ್ಮ ಆರೋಗ್ಯಕ್ಕೆ ಅನೇಕ ಲಾಭಗಳಿವೆ.

6 / 13

ದಿನವೂ ಬೆಳಿಗ್ಗೆ ಲವಂಗವನ್ನು ಅಗಿಯುವುದರಿಂದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದು ಲಾಲಾರಸದ ಉತ್ಪಾದನೆಯನ್ನು ಹೆಚ್ಚಿಸುತ್ತದೆ.

7 / 13

ಲವಂಗವು ವಾಕರಿಕೆ ಮತ್ತು ಆಮ್ಲೀಯತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಲವಂಗವನ್ನು ಕೆಮ್ಮು ನಿವಾರಕವಾಗಿ ಬಳಸಬಹುದು.

8 / 13

ಒಣಗಿದ ಲವಂಗ ಲಿವರ್​​ನ ಮೇಲೆ ಹೆಪಾಟೊ ರಕ್ಷಣಾತ್ಮಕ ಪರಿಣಾಮವನ್ನು ಬೀರುತ್ತದೆ.

9 / 13

ಇದು ಹೊಸ ಕೋಶಗಳ ಬೆಳವಣಿಗೆ, ಲಿವರ್​​ನ ನಿರ್ವಿಶೀಕರಣವನ್ನು ಉತ್ತೇಜಿಸುವ ಮೂಲಕ ಲಿವರ್​​ನ ಆರೋಗ್ಯವನ್ನು ಹೆಚ್ಚಿಸುತ್ತದೆ.

10 / 13

ಒಂದುವೇಳೆ ಲವಂಗವನ್ನು ಹಸಿಯಾಗಿ ಸೇವಿಸಲು ನಿಮಗೆ ಇಷ್ಟವಿಲ್ಲದಿದ್ದರೆ ನಿಮ್ಮ ಆಹಾರದಲ್ಲಿ ಬೇರೆ ಪದಾರ್ಥಗಳ ಜೊತೆ ಲವಂಗವನ್ನು ಸೇರಿಸಿಕೊಳ್ಳಬಹುದು.

11 / 13

ನಿಮ್ಮ ಬೆಳಗಿನ ಓಟ್ ಮೀಲ್‌, ಮೊಸರಿನ ಮೇಲೆ ಲವಂಗದ ಪುಡಿಯನ್ನು ಸಿಂಪಡಿಸಿ.

12 / 13

ಬೇರೆ ಅಡುಗೆಯಲ್ಲೂ ಲವಂಗ ಹಾಕಿ. ಇದರಿಂದ ಅಡುಗೆಯ ಪರಿಮಳ ಚೆನ್ನಾಗಿರುತ್ತದೆ.

13 / 13

ಲವಂಗದ ಟೀ ಮಾಡಿ ಸೇವಿಸಿ.

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Loading...
Unable to load recommendations.
Follow Us