ನಾವು ಇಂಗ್ಲೆಂಡ್ ಬಗ್ಗೆ ಮಾತನಾಡುವುದಾದರೆ, ಆಂಗ್ಲರು ತಮ್ಮ ತವರು ನೆಲದಲ್ಲಿ ಒಟ್ಟು 36 ಪಂದ್ಯಗಳನ್ನು ಗೆದ್ದಿದ್ದರೆ, ಭಾರತದಲ್ಲಿ 14 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. ಭಾರತಕ್ಕೆ ಹೋಲಿಸಿದರೆ ಇಂಗ್ಲೆಂಡ್ ಮೇಲುಗೈ ಸಾಧಿಸಿರುವುದು ಇದರಿಂದ ಸ್ಪಷ್ಟವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಭಾರತ ತಂಡ ಪ್ರದರ್ಶನ ನೀಡುತ್ತಿರುವ ರೀತಿಯನ್ನು ನೋಡಿದರೆ ಭಾರತವನ್ನು ಭಾರತದಲ್ಲಿ ಸೋಲಿಸುವುದು ಇಂಗ್ಲೆಂಡ್‌ಗೆ ಸುಲಭದ ಮಾತಲ್ಲ.