AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಕೊಹ್ಲಿ ಬದಲು ಟೆಸ್ಟ್ ತಂಡದಲ್ಲಿ ಯಾರಿಗೆ ಸಿಗಲಿದೆ ಅವಕಾಶ? ರೇಸ್​ನಲ್ಲಿ ಮೂವರು

IND vs ENG, Virat Kohli: ಇಂಗ್ಲೆಂಡ್‌ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಿಂದ ವಿರಾಟ್ ಕೊಹ್ಲಿ ಹಿಂದೆ ಸರಿಯಲು ತೀರ್ಮಾನಿಸಿದ್ದಾರೆ. ಇದುವರೆಗೂ ಬಿಸಿಸಿಐ ಕೊಹ್ಲಿ ಬದಲಿ ಆಟಗಾರನನ್ನು ಆಯ್ಕೆ ಮಾಡಿಲ್ಲ. ಆದರೆ ತಂಡದಲ್ಲಿ ವಿರಾಟ್ ಸ್ಥಾನವನ್ನು ತುಂಬಲು 3 ಆಟಗಾರರು ರೇಸ್​ನಲ್ಲಿದ್ದಾರೆ.

ಪೃಥ್ವಿಶಂಕರ
|

Updated on: Jan 22, 2024 | 6:36 PM

Share
ಇಂಗ್ಲೆಂಡ್‌ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಿಂದ ವಿರಾಟ್ ಕೊಹ್ಲಿ ಹಿಂದೆ ಸರಿಯಲು ತೀರ್ಮಾನಿಸಿದ್ದಾರೆ. ಇದುವರೆಗೂ ಬಿಸಿಸಿಐ ಕೊಹ್ಲಿ ಬದಲಿ ಆಟಗಾರನನ್ನು ಆಯ್ಕೆ ಮಾಡಿಲ್ಲ. ಆದರೆ ತಂಡದಲ್ಲಿ ವಿರಾಟ್ ಸ್ಥಾನವನ್ನು ತುಂಬಲು 3 ಆಟಗಾರರು ರೇಸ್​ನಲ್ಲಿದ್ದಾರೆ.

1 / 8
ಭಾರತ ಮತ್ತು ಇಂಗ್ಲೆಂಡ್ ನಡುವೆ ಜನವರಿ 25 ರಿಂದ 5 ಟೆಸ್ಟ್ ಪಂದ್ಯಗಳ ಸರಣಿ ನಡೆಯಲಿದೆ. ಸರಣಿಯ ಮೊದಲ ಪಂದ್ಯ ಹೈದರಾಬಾದ್‌ನಲ್ಲಿ ಮತ್ತು ಎರಡನೇ ಟೆಸ್ಟ್ ವಿಶಾಖಪಟ್ಟಣದಲ್ಲಿ ನಡೆಯಲಿದೆ. ಆದರೆ ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾಕ್ಕೆ ಎದುರಾಗಿದ್ದು, ತಂಡದ ಸ್ಟಾರ್ ಬ್ಯಾಟ್ಸ್​ಮನ್ ವಿರಾಟ್ ಕೊಹ್ಲಿ ಈ 2 ಪಂದ್ಯಗಳಿಂದಲೂ ಹಿಂದೆ ಸರಿದಿದ್ದಾರೆ.

2 / 8
ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಗಳಿಂದ ಸರಣಿಯ ಮೊದಲ ಎರಡು ಪಂದ್ಯಗಳಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ ಎಂದು ಬಿಸಿಸಿಐ ಮಾಹಿತಿ ನೀಡಿದೆ. ಆದರೆ ಕೊಹ್ಲಿ ಬದಲು ಯಾರಿಗೆ ಅವಕಾಶ ನೀಡಲಾಗಿದೆ ಎಂಬುದನ್ನು ಬಿಸಿಸಿಐ ಇನ್ನು ಖಚಿತಪಡಿಸಿಲ್ಲ.

3 / 8
ಅದಾಗ್ಯೂ ಕೊಹ್ಲಿ ಬದಲು ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಪ್ರಮುಖವಾಗಿ ಮೂರು ಆಟಗಾರರು ರೇಸ್​ನಲ್ಲಿದ್ದಾರೆ. ಈ ಮೂವರು ಪ್ರಸ್ತುತ ನಡೆಯುತ್ತಿರುವ ರಣಜಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಹಾಗೆಯೇ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಅಭ್ಯಾಸ ಪಂದ್ಯದಲ್ಲೂ ಈ ಆಟಗಾರರು ಉತ್ತಮ ಆಟ ಪ್ರದರ್ಶಿಸಿದ್ದರು.

4 / 8
ಸರ್ಫರಾಜ್ ಖಾನ್: ಇಂಗ್ಲೆಂಡ್ ಲಯನ್ಸ್ ವಿರುದ್ಧದ ಎರಡು ಅಭ್ಯಾಸ ಪಂದ್ಯಗಳಲ್ಲಿ ಸರ್ಫರಾಜ್ ಕ್ರಮವಾಗಿ 96 ಮತ್ತು 55 ರನ್ ಬಾರಿಸಿಸಿದ್ದರು. ಹಾಗೆಯೇ ಹಿಂದಿನ ಮೂರು ರಣಜಿ ಟ್ರೋಫಿ ಆವೃತ್ತಿಗಳಲ್ಲಿ 154, 122 ಮತ್ತು 91 ರ ಸರಾಸರಿಯಲ್ಲಿ, ಸರ್ಫರಾಜ್ 2020 ರಿಂದ ದೇಶೀಯ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ.

5 / 8
ರಜತ್ ಪಾಟಿದಾರ್: ಇತ್ತೀಚೆಗಷ್ಟೇ ಭಾರತ ಏಕದಿನ ತಂಡದಲ್ಲಿ ಕಾಣಿಸಿಕೊಂಡಿದ್ದ ರಜತ್ ಪಾಟಿದಾರ್, ಇಂಗ್ಲೆಂಡ್ ಲಯನ್ಸ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಕ್ರಮವಾಗಿ 151 ಮತ್ತು 111 ರನ್ ಗಳಿಸಿದ್ದರು. ಅಲ್ಲದೆ ಪೇಸ್ ಮತ್ತು ಸ್ಪಿನ್ ಎರಡರ ವಿರುದ್ಧವೂ ರಜತ್ ಉತ್ತಮವಾಗಿ ಬ್ಯಾಟ್ ಬೀಸಿದ್ದರು.

6 / 8
ಚೇತೇಶ್ವರ ಪೂಜಾರ: 35ರ ಹರೆಯದ ಪೂಜಾರ ಇತ್ತೀಚೆಗೆ ರಣಜಿ ಟ್ರೋಫಿಯಲ್ಲಿ ಜಾರ್ಖಂಡ್ ವಿರುದ್ಧ ದ್ವಿಶತಕ ಸಿಡಿಸಿದ್ದರು. ಹಾಗೆಯೇ ಅದರ ಹಿಂದಿನ ಪಂದ್ಯದಲ್ಲೂ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಹೀಗಾಗಿ ಟೀಂ ಇಂಡಿಯಾದಿಂದ ಹೊರಗುಳಿದಿರುವ ಪೂಜಾರಗೆ ಮತ್ತೆ ತಂಡವನ್ನು ಸೇರಿಕೊಳ್ಳಲು ಇದು ಉತ್ತಮ ಅವಕಾಶವಾಗಿದೆ.

7 / 8
ಮೊದಲ 2 ಟೆಸ್ಟ್‌ಗಳಿಗೆ ಟೀಂ ಇಂಡಿಯಾ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಅವೇಶ್ ಖಾನ್.

8 / 8