BCCI Awards 2024: ಶುಭ್​ಮನ್ ಗಿಲ್​ಗೆ ವರ್ಷದ ಕ್ರಿಕೆಟಿಗ ಪ್ರಶಸ್ತಿ..!

BCCI Awards 2024: ಬಿಸಿಸಿಐ ಪ್ರತಿ ವರ್ಷ ಪ್ರಶಸ್ತಿಗಳನ್ನು ನೀಡುತ್ತಿದ್ದು, ಇದರಲ್ಲಿ ವರ್ಷವಿಡೀ ಉತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಗೌರವಿಸಲಾಗುತ್ತದೆ. ಕಳೆದ ವರ್ಷ ಗಿಲ್ ಅವರ ಪ್ರದರ್ಶನವನ್ನು ಪರಿಗಣಿಸಿ, ಬಿಸಿಸಿಐ ಅವರನ್ನು ವರ್ಷದ ಅತ್ಯುತ್ತಮ ಭಾರತೀಯ ಕ್ರಿಕೆಟಿಗ ಎಂದು ಆಯ್ಕೆ ಮಾಡಿದೆ.

ಪೃಥ್ವಿಶಂಕರ
|

Updated on: Jan 22, 2024 | 9:09 PM

ಭಾರತ ಕ್ರಿಕೆಟ್ ತಂಡದ ಯುವ ಬ್ಯಾಟ್ಸ್‌ಮನ್ ಶುಭ್​ಮನ್ ಗಿಲ್ ಅವರಿಗೆ ವಿಶೇಷ ಪ್ರಶಸ್ತಿ ನೀಡಲು ಬಿಸಿಸಿಐ ನಿರ್ಧರಿಸಿದೆ. ಹಾಗೆಯೇ ತಂಡದ ಮಾಜಿ ಆಟಗಾರ ಹಾಗೂ ಮುಖ್ಯ ಕೋಚ್ ರವಿಶಾಸ್ತ್ರಿ ಅವರಿಗೆ ಟೀಂ ಇಂಡಿಯಾದಲ್ಲಿನ ಸೇವೆಯನ್ನು ಪರಿಗಣಿಸಿ ಜೀವಮಾನ ಸಾಧನೆ ಪ್ರಶಸ್ತಿ ನೀಡಲು ನಿರ್ಧರಿಸಿದೆ.

1 / 8
ಬಿಸಿಸಿಐ ಪ್ರತಿ ವರ್ಷ ಪ್ರಶಸ್ತಿಗಳನ್ನು ನೀಡುತ್ತಿದ್ದು, ಇದರಲ್ಲಿ ವರ್ಷವಿಡೀ ಉತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಗೌರವಿಸಲಾಗುತ್ತದೆ. ಕಳೆದ ವರ್ಷ ಗಿಲ್ ಅವರ ಪ್ರದರ್ಶನವನ್ನು ಪರಿಗಣಿಸಿ, ಬಿಸಿಸಿಐ ಅವರನ್ನು ವರ್ಷದ ಅತ್ಯುತ್ತಮ ಭಾರತೀಯ ಕ್ರಿಕೆಟಿಗ ಎಂದು ಆಯ್ಕೆ ಮಾಡಿದೆ. ಬಿಸಿಸಿಐ ಮಂಗಳವಾರ ಹೈದರಾಬಾದ್‌ನಲ್ಲಿ ಈ ಪ್ರಶಸ್ತಿಗಳನ್ನು ನೀಡಲಿದೆ.

2 / 8
ಗಿಲ್ 2023 ರಲ್ಲಿ ಆರು ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 28.66 ಸರಾಸರಿಯಲ್ಲಿ 1 ಶತಕ ಸೇರಿದಂತೆ 258 ರನ್ ಕಲೆಹಾಕಿದ್ದರು. ಹಾಗೆಯೇ ಗಿಲ್ 2023 ರಲ್ಲಿ 29 ಏಕದಿನ ಪಂದ್ಯಗಳನ್ನು ಆಡಿದ್ದು, 63.36 ಸರಾಸರಿಯಲ್ಲಿ 1584 ರನ್ ಗಳಿಸಿದ್ದಾರೆ.

3 / 8
ಈ ವರ್ಷ ಅವರ ಬ್ಯಾಟ್‌ನಿಂದ ಐದು ಶತಕ ಮತ್ತು ಒಂಬತ್ತು ಅರ್ಧ ಶತಕಗಳು ಸೇರಿವೆ. ಟಿ20ಯಲ್ಲಿ ಗಿಲ್ ಈ ವರ್ಷ 13 ಪಂದ್ಯಗಳನ್ನು ಆಡಿದ್ದು, 30 ರ ಸರಾಸರಿಯಲ್ಲಿ ಒಂದು ಶತಕ ಮತ್ತು ಒಂದು ಅರ್ಧ ಶತಕ ಸೇರಿದಂತೆ 304 ರನ್ ಗಳಿಸಿದ್ದಾರೆ.

4 / 8
ಅಲ್ಲದೆ ಶುಭ್​ಮನ್ ಗಿಲ್ ಕಳೆದ 12 ತಿಂಗಳುಗಳಲ್ಲಿ ಅಂದರೆ 2023 ರಲ್ಲಿ ಏಕದಿನ ಮಾದರಿಯಲ್ಲಿ ಐದು ಶತಕ ಸಹಿತ ಅತೀ ವೇಗವಾಗಿ 2000 ರನ್​ಗಳ ಮೈಲಿಗಲ್ಲನ್ನು ಸಾಧಿಸಿದ್ದರು.

5 / 8
ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ನಂತರ ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ ನಾಲ್ಕನೇ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಗಿಲ್ ಪಾತ್ರರಾಗಿದ್ದರು.

6 / 8
ಟೀಂ ಇಂಡಿಯಾದ ಮಾಜಿ ಕೋಚ್ ಹಾಗೂ ನಾಯಕ ರವಿಶಾಸ್ತ್ರಿ ಅವರಿಗೆ ಜೀವಮಾನದ ಸಾಧನೆ ನೀಡಲು ಬಿಸಿಸಿಐ ನಿರ್ಧರಿಸಿದೆ. ಶಾಸ್ತ್ರಿ ಕೋಚ್ ಆಗಿದ್ದಾಗ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡಿತ್ತು. ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ತಂಡವು ಆಸ್ಟ್ರೇಲಿಯಾವನ್ನು ಸತತ ಎರಡು ಬಾರಿ ಸೋಲಿಸಿತು.

7 / 8
ಇದಲ್ಲದೇ ವಿದೇಶಿ ನೆಲದಲ್ಲೂ ತಂಡ ಅಮೋಘ ಆಟವಾಡಿದೆ. ತಂಡವು 2019 ರ ವಿಶ್ವಕಪ್‌ನ ಸೆಮಿಫೈನಲ್ ತಲುಪಿತ್ತು. ಇದಕ್ಕೂ ಮುನ್ನ ಶಾಸ್ತ್ರಿ 2014ರಲ್ಲಿ ತಂಡದ ನಿರ್ದೇಶಕರೂ ಆಗಿದ್ದರು. ಶಾಸ್ತ್ರಿ ಭಾರತ ಪರ 80 ಟೆಸ್ಟ್ ಮತ್ತು 150 ಏಕದಿನ ಪಂದ್ಯಗಳನ್ನು ಆಡಿದ್ದಾರೆ.

8 / 8
Follow us