Clove Tea: ಲವಂಗ ಟೀ ಕುಡಿಯುವುದರಿಂದ ಆಗುವ ಪ್ರಯೋಜನಗಳೇನು?

Updated on: Jan 16, 2024 | 1:20 PM

ಚಳಿಗಾಲದಲ್ಲಿ ಬೆಚ್ಚಗಿನ ಕಪ್ ಲವಂಗ ಟೀಯನ್ನು ಸೇವಿಸುವುದರಿಂದ ಆರಾಮ ಸಿಗುತ್ತದೆ. ಲವಂಗ ಚಹಾವು ಹಲವಾರು ಪ್ರಯೋಜನಗಳನ್ನು ನೀಡುತ್ತದೆಯಾದರೂ ಅದನ್ನು ಮಿತವಾಗಿ ಸೇವಿಸುವುದು ಮುಖ್ಯವಾಗಿದೆ. ದಿನಕ್ಕೆ 1ರಿಂದ 3 ಕಪ್ ಲವಂಗ ಟೀಯನ್ನು ಮಾತ್ರ ಸೇವಿಸಬೇಕು.

1 / 7
ಲವಂಗ ಮಸಾಲೆ ಪದಾರ್ಥ ಮಾತ್ರವಲ್ಲದೆ ಅನೇಕ ಔಷಧೀಯ ಗುಣಗಳನ್ನು ಕೂಡ ಹೊಂದಿದೆ. ಲವಂಗದ ಟೀ ಸೇವನೆಯಿಂದ ಆರೋಗ್ಯಕ್ಕೆ ಏನೆಲ್ಲ ಪ್ರಯೋಜನಗಳಿವೆ ಎಂಬುದರ ವಿವರ ಇಲ್ಲಿದೆ.

2 / 7
ಲವಂಗದ ಟೀ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಲವಂಗ ಚಹಾವು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಸ್ವತಂತ್ರ ರಾಡಿಕಲ್​ಗಳ ವಿರುದ್ಧ ಹೋರಾಡುತ್ತದೆ.

3 / 7
 ಲವಂಗದ ಟೀ ದೇಹದಲ್ಲಿನ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರ ನಿಯಮಿತ ಸೇವನೆಯು ಬಲವಾದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ರೋಗಗಳನ್ನು ಬಾರದಂತೆ ತಡೆಯಲು ಸಹಾಯ ಮಾಡುತ್ತದೆ.

4 / 7
ಲವಂಗ ಚಹಾವು ಉರಿಯೂತದ ಗುಣಲಕ್ಷಣಗಳನ್ನು ಕಡಿಮೆ ಮಾಡುವ ಹೊಂದಿದೆ. ಇದು ಸಂಧಿವಾತದಂತಹ ಉರಿಯೂತವನ್ನು ಒಳಗೊಂಡಿರುವ ಸಮಸ್ಯೆಗಳಿಗೆ ಪ್ರಯೋಜನಕಾರಿಯಾಗಿದೆ. ಒಂದು ಕಪ್ ಲವಂಗ ಚಹಾವನ್ನು ಸೇವಿಸುವುದರಿಂದ ಸಂಧಿ ನೋವು ಮತ್ತು ಊತದಿಂದ ಪರಿಹಾರವನ್ನು ಪಡೆಯಬಹುದು.

5 / 7
ಲವಂಗವು ಬಾಯಿಯ ಸಮಸ್ಯೆಗಳಿಗೆ ಸಾಂಪ್ರದಾಯಿಕ ಪರಿಹಾರವಾಗಿದೆ. ಲವಂಗ ಚಹಾವು ಈ ಪರಂಪರೆಯನ್ನು ಮುಂದುವರೆಸಿದೆ.

6 / 7
ಲವಂಗದ ಟೀ ಬ್ಯಾಕ್ಟೀರಿಯಾವನ್ನು ಎದುರಿಸುವ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ. ಇದು ಬಾಯಿಯ ಕೆಟ್ಟ ವಾಸನೆಯಿಂದ ಪರಿಹಾರವನ್ನು ನೀಡುತ್ತದೆ ಮತ್ತು ಬಾಯಿಯ ಆರೋಗ್ಯವನ್ನು ಉತ್ತೇಜಿಸುತ್ತದೆ.

7 / 7
ಲವಂಗದ ಚಹಾ ಅಜೀರ್ಣ, ಹೊಟ್ಟೆ ಉಬ್ಬುವುದು ಮತ್ತು ಗ್ಯಾಸ್ಟ್ರಿಕ್ ಅನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದನ್ನು ಊಟದ ನಂತರ ಸೇವಿಸುವುದು ಅತ್ಯುತ್ತಮ. ಲವಂಗದಲ್ಲಿರುವ ಯುಜೆನಾಲ್ ಸಂಯುಕ್ತವು ಜೀರ್ಣಕಾರಿ ಕಿಣ್ವ ಸ್ರವಿಸುವಿಕೆಗೆ ಸಹಾಯ ಮಾಡುತ್ತದೆ. ಇದರಿಂದ ಜೀರ್ಣಕ್ರಿಯೆ ಪ್ರಕ್ರಿಯೆ ಸುಗಮವಾಗುತ್ತದೆ.