AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ayodhya Ram Mandir: ರಾಮ ಮಂದಿರದಲ್ಲಿ ರಾಮಲಲ್ಲಾ ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ವಿಧಿವಿಧಾನಗಳು ಇಂದಿನಿಂದ ಪ್ರಾರಂಭ

ಅಯೋಧ್ಯೆಯಲ್ಲಿ ಪೌಶ್ ಶುಕ್ಲ ಕೂರ್ಮ ದ್ವಾದಶಿ, ವಿಕ್ರಮ ಸಂವತ್ 2080, ಅಂದರೆ ಸೋಮವಾರ, ಜನವರಿ 22, 2024 ರಂದು ರಾಮಲಲ್ಲಾ ದೇವರ ಪ್ರಾಣ ಪ್ರತಿಷ್ಠಾ ಕಾರ್ಯ ನಡೆಯಲಿದೆ. ಅದಕ್ಕಿಂತ ಮುಂಚೆ ಶಾಸ್ತ್ರೋಕ್ತ ಶಿಷ್ಟಾಚಾರಗಳು ಮತ್ತು ಪೂರ್ವಾಚರಣೆಯ ವಿಧಿವಿಧಾನಗಳು ಇಂದು(ಜನವರಿ 16) ಆರಂಭವಾಗಿವೆ. ಯಾವ ದಿನ ಅಲ್ಲಿ ಏನೇನು ನಡೆಯುತ್ತದೆ? ಇಲ್ಲಿದೆ ಮಾಹಿತಿ

ರಶ್ಮಿ ಕಲ್ಲಕಟ್ಟ
|

Updated on:Jan 16, 2024 | 1:26 PM

Share
ಶ್ರೀರಾಮ ಜನ್ಮಭೂಮಿ ಕ್ಷೇತ್ರದ ಪ್ರಕಾರ, ಪ್ರಾಯಶ್ಚಿತ್ತ ಮತ್ತು ಕರ್ಮಕುಟಿ ಪೂಜೆಯು ಜನವರಿ 16, 2024 ರಂದು ನಡೆಯಲಿದೆ.

1 / 8
ಶ್ರೀರಾಮ ಜನ್ಮಭೂಮಿ ಕ್ಷೇತ್ರ ಟ್ರಸ್ಟ್ ಮಾಹಿತಿ  ಪ್ರಕಾರ ಜನವರಿ 17 ರಂದು ಮೂರ್ತಿಯ ಪರಿಸರ ಪ್ರವೇಶ ನಡೆಯಲಿದೆ.

2 / 8
ಅಯೋಧ್ಯೆಯಲ್ಲಿ ಜನವರಿ 18 ರ ಸಂಜೆ ತೀರ್ಥಪೂಜೆ, ಜಲ ಯಾತ್ರೆ ಮತ್ತು ಗಂಧಾಧಿವಾಸ ನಡೆಯಲಿದೆ.

3 / 8
ಜನವರಿ 19 ರಂದು ಬೆಳಿಗ್ಗೆ ಔಷಧಾಧಿವಾಸ, ಕೇಸರಧಿವಾಸ, ಘೃತಾಧಿವಾಸಗಳು ನಡೆಯಲಿದ್ದು, ಸಂಜೆ ಧಾನ್ಯಾಧಿವಾಸ ನಡೆಯಲಿದೆ.

4 / 8
ಜನವರಿ 20 ರಂದು ಬೆಳಗ್ಗೆ ಶರ್ಕರಾಧಿವಾಸ, ಫಲಾಧಿವಾಸ, ಸಂಜೆ ಪುಷ್ಪಾಧಿವಾಸ ನಡೆಯಲಿದೆ.

5 / 8
ಜನವರಿ 21 ರಂದು ಮಧ್ಯಾಧಿವಾಸ ಸಂಜೆ ಶಯ್ಯಾಧಿವಾಸ ನಡೆಯಲಿದೆ

6 / 8
ಸಾಮಾನ್ಯವಾಗಿ, ಪ್ರಾಣ ಪ್ರತಿಷ್ಠಾ ಸಮಾರಂಭಗಳಲ್ಲಿ ಏಳು ಅಧಿವಾಸಗಳು ಇರುತ್ತವೆ ಮತ್ತು ಕನಿಷ್ಠ ಮೂರು ಅಧಿವಾಸಗಳು ಆಚರಣೆಯಲ್ಲಿವೆ. 121 ಆಚಾರ್ಯರು ಧಾರ್ಮಿಕ ವಿಧಿಗಳನ್ನು ನಡೆಸಲಿದ್ದಾರೆ.

7 / 8
 ಗಣೇಶ್ವರ ಶಾಸ್ತ್ರಿ ದ್ರಾವಿಡ್ ಜಿ ಅವರು ಅನುಷ್ಠಾನದ ಎಲ್ಲಾ ಪ್ರಕ್ರಿಯೆಗಳ ಮೇಲ್ವಿಚಾರಣೆ, ಸಮನ್ವಯ, ನಿರೂಪಣೆ ಮತ್ತು ನಿರ್ದೇಶನವನ್ನು ಮಾಡಲಿದ್ದಾರೆ. ಪ್ರಧಾನ ಪುರೋಹಿತರು ಕಾಶಿಯ ಶ್ರೀ ಲಕ್ಷ್ಮಿಕಾಂತ್ ದೀಕ್ಷಿತ್ ಆಗಿರುತ್ತಾರೆ ಎಂದು ಟ್ರಸ್ಟ್ ತಿಳಿಸಿದೆ.

8 / 8

Published On - 1:25 pm, Tue, 16 January 24